ತುಮಕೂರು
ನಗರದ ಎಂಪ್ರೆಸ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಗಾಂಧಿ ಜಯಂತಿ ಪ್ರಯುಕ್ತ ಇತ್ತೀಚೆಗೆ ತುಮಕೂರಿನ ಬೆಳಗುಂಬದಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಮಿತಿ ವತಿಯಿಂದ ನಡೆಸುತ್ತಿರುವ ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿತ್ತು.
ಪ್ರಾಂಶುಪಾಲರಾದ ಎಸ್. ಷಣ್ಮುಖ ಮತ್ತು ಇತಿಹಾಸ ಉಪನ್ಯಾಸಕರಾದ ಎ.ಒ. ನರಸಿಂಹಮೂರ್ತಿ ಇವರುಗಳು ಶಿಬಿರದ ಮಾರ್ಗದರ್ಶಕರಾಗಿದ್ದರು 7 ದಿನಗಳ ಕಾಲ ನಡೆದ ಈ ಶಿಬಿರದಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಪತಂಜಲಿ ಯೋಗ ಶಿಕ್ಷಣ ಸಮಿತಿಯ ರಮೇಶ್ ರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿನಿಯರಿಗೆ ಯೋಗಭ್ಯಾಸವನ್ನು ಮಾಡಿಸಲಾಯಿತು. ಆರ್ಟ್ ಆಫ್ ಲಿವಿಂಗ್ ನ ಶಿಕ್ಷಕಿ ಭಾಗ್ಯರವರು ಹೆಣ್ಣು ಮಕ್ಕಳ ಮಾಸಿಕ ಋತುಮತಿ ಸಂಬಂಧಿತ ಸಮಸ್ಯೆಗಳಿಗೆ ಜಾಗೃತಿಯನ್ನು ಮೂಡಿಸಿ ಪರಿಹಾರಗಳನ್ನು ಸೂಚಿಸಿದರು ಶಿಬಿರದಲ್ಲಿ ಕಾನೂನು, ಶಿಕ್ಷಣ ,ಆರೋಗ್ಯ, ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಉಪನ್ಯಾಸ ನೀಡಲಾಯಿತು.
ಈ ಶಿಬಿರದಲ್ಲಿ ಪ್ರಾಂಶುಪಾಲರಾದ ಬಿ. ಮರುಳಯ್ಯ, ಜಿ.ಎಚ್. ಮಹದೇವಪ್ಪ ,ಕೆ.ಎನ್. ಸಂಶೀರ್, ಎಂ.ರಾಜಯ್ಯ,ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಕೆ.ಎಸ್. ಸಿದ್ದಲಿಂಗಪ್ಪ,ಮಾರುತಿ ಪದವಿ ಪೂರ್ವ ಕಾಲೇಜಿನ ಎಸ್. ರವಿಕುಮಾರ್, ವಿಶೇಷವಾಗಿ ಅಕ್ಕಮ್ಮ ಮತ್ತು ಕಂಟಲಗೆರೆ ಸಣ್ಣ ಹೊನ್ನಯ್ಯ ರವರಿಂದ ಭಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವಿದ್ಯೋದಯ ಕಾನೂನು ಕಾಲೇಜಿನ ಪ್ರಾಧ್ಯಾಪಕರಾದ ಡಾ. ರಮೇಶ್, ಪುಷ್ಪ,ಕಿಶೋರ್ ಕುಮಾರ್, ಎತ್ತಿನಹೊಳೆಯ ಭೂಸ್ವಾಧೀನಾಧಿಕಾರಿ ಎಂ. ಎಸ್. ಮಂಜುನಾಥ್, ತಾಲೂಕು ಆರೋಗ್ಯ ಶಿಕ್ಷಣಾಧಿ
ಕಾರಿಗಳಾದ ಜಯಣ್ಣ, ಎಂ. ಎಚ್. ನಾಗರಾಜು, ಡಾ. ಎಂ.
ರಾಜಯ್ಯ,ಡಾ.ಕೆ.ವಿ.ಮುದ್ದು ವೀರಪ್ಪ,ಶ್ರೀನಿವಾಸ್ ಭಾಗವಹಿಸಿದ್ದರು.