ತುಮಕೂರು


ಅಪಘಾತವಾದ ಕಾರು ನಂಬರ್ ಫಲಕ ಬೇರೆ ವಾಹನಕ್ಕೆ ಅಳವಡಿಸಿ ಎಫ್‍ಸಿ(ಅರ್ಹತಪತ್ರ) ಮಾಡಿಸಿಕೊಳ್ಳಲು ಬಂದ ಕಾರು ಮಾಲೀಕ ಆರ್‍ಟಿಒ ಕಚೇರಿಯ ಅಧಿಕಾರಿಗಳಿಗೆ ಸಿಕ್ಕಿ ಹಾಕಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಏಂ-06-ಂಂ-3691 ಟಯೋಟೊ ಇಟಿಯೋಸ್ ಕಾರಿನ ಮಾಲೀಕ ರಾಮಸ್ವಾಮಿ ತನ್ನ ಟ್ಯಾಕ್ಸಿ ಕಾರನ್ನು ಅಪಘಾತ ಮಾಡಿ,ಶೋರೂಂನ್ಲಲಿ ರಿಪೇರಿಗೆ ಬಿಟ್ಟು,ಇನ್ಸುರೇನ್ಸ್ ಪಡೆದುಕೊಳ್ಳಲು ಬೇರೆ ವ್ಯಕ್ತಿಯ ವೈಟ್ ಬೋರ್ಡ್‍ನ ಕಾರಿಗೆ ನಂಬರ್ ಪ್ಲೇಟ್ ಅಳವಡಿಸಿಕೊಂಡು ಆರ್‍ಟಿಒ ಕಚೇರಿಗೆ ಎಫ್‍ಸಿ(ಅರ್ಹತಪತ್ರ) ಮಾಡಿಸಿಕೊಳ್ಳಲು ಬಂದಿದ್ದನು,ಆರ್‍ಟಿಒ ಇನ್ಸ್‍ಪೆಕ್ಟರ್ ಸದ್ರುರುಲ್ಲಾ ಷರೀಪ್ ಅವರು ವಾಹನವನ್ನು ಪರಿಶೀಲನೆ ನೆಡೆಸುವ ಸಂದರ್ಭದಲ್ಲಿ ಅನುಮಾನ ಬಂದ ತಕ್ಷಣ ಸದರಿ ತಂದಿದ್ದ ಕಾರನ್ನು ಪರಿಶೀಲಿಸಿದ್ದಾಗ ಅಪಘಾತ ಆಗಿರುವ ಕಾರಿನ ನಂಬರ್ ಪ್ಲೇಟ್‍ನ್ನು ಬೇರೆ ಕಾರಿಗೆ ಅಳವಡಿಸಿ ಎಫ್‍ಸಿ ಮಾಡಿಸಿಕೊಳ್ಳಲು ಬಂದಿರುವುದಾಗಿ ತಿಳಿಯುತ್ತದೆ.ಕೂಡಲೇ ಷರೀಪ್ ಅವರು ಸಂಬಂಧಪಟ್ಟ
ಮೇಲಾಧಿಕಾರಿಗಳ ಗಮನಕ್ಕೆ ತಂದು ಕೂಡಲೇ ವಾಹನವನ್ನು ಚಾರ್ಸಿ ನಂಬರ್ ಹಾಕಿ ಪರಿಶೀಲಿಸಿದಾಗ ಬೇರೆ ವಾಹನ ತಂದಿರುವುದಾಗಿ ಸತ್ಯ ಬಯಲಾಗುತ್ತದೆ.
ಮಾಲೀಕ ರಾಮಸ್ವಾಮಿಯನ್ನು ವಿಚಾರಿಸಿದಾಗ ಸತ್ಯವನ್ನು ಒಪ್ಪಿಕೊಂಡು ಹೌದು ನಾನು ಬೇರೆ ವಾಹನವನ್ನು ಬದಲಾಯಿಸಿಕೊಂಡು ಬಂದಿರುವುದಾಗಿ ಆರ್‍ಟಿಒ ಅಧಿಕಾರಿ ಮುಂದೆ ಸತ್ಯ ಒಪ್ಪಿಕೊಂಡನು.
ಕೂಡಲೇ ಆರ್‍ಟಿಒ ಅಧಿಕಾರಿಗಳು ಎಚ್ಚೇತ್ತುಕೊಂಡು ಅಪಘಾತ ಸಂಭವಿಸಿ ನಂತರ ಅದೇ ಕಾರಿನ ನಂಬರ್ ಬೋಡ್‍ನ್ನು ಬೇರೆ ಕಾರಿಗೆ ಅಳವಡಿಸಿಕೊಂಡು ಬಂದಿರುವ ರಾಮಸ್ವಾಮಿಯವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಆರ್‍ಟಿಒ ಅಧಿಕಾರಿಗಳು ತಿಳಿಸಿದ್ದಾರೆ.
ಆಟ್‍ಟಿಒ ಕಚೇರಿಗಳಲ್ಲಿ ಇಂತಹ ಕಾನೂನು ಬಾಹೀರ ಚಟುವಟಿಕೆಗಳು ನೆಡೆಯದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುವಂತೆ ಆರ್‍ಟಿಒ ಅಧಿಕಾರಿಗಳು ಮನವಿ ಮಾಡಿದ್ದಾರೆ.

(Visited 2 times, 1 visits today)