ಚಿತ್ರದುರ್ಗ


ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಮತ್ತು ಪಕ್ಕದಲ್ಲಿರುವ ಸ್ಟೇಡಿಯಂ ರಸ್ತೆ ಮೇಲೆಲ್ಲಾ ಚರಂಡಿ ನೀರು ನಿಂತು, ನೋಡುಗರಿಗೆ ಅಸಹ್ಯ ಎನಿಸುತ್ತಿದೆ. ನಗರದ ಸೌಂದರ್ಯದ ಬಗ್ಗೆ ಗಮನ ನೀಡುತ್ತಿರುವ ನಗರಸಭೆಯವರು, ನಗರದ ಸ್ವಚ್ಛತೆಯ ಬಗ್ಗೆಯೂ ಸಹ ಗಮನ ಹರಿಸಬೇಕಾಗಿದೆ, ರಸ್ತೆಯ ಪಕ್ಕದಲ್ಲಿರುವ ಚರಂಡಿ ತುಂಬಿ ತುಳುಕುತ್ತಿದ್ದು, ಅದರಿಂದ ಹರಿದು ಬಂದ ನೀರು ರಸ್ತೆಯ ಮೇಲೆಲ್ಲಾ ಚೆಲ್ಲಾಡುತ್ತದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ದೂರಿದ್ದಾರೆ..
ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನೀರು ನಿಂತು ಕೆರೆಯಂತಾಗಿದೆ, ಅಲ್ಲಿ ಎಮ್ಮೆಗಳು, ಪ್ರಾಣಿಗಳು ಈಜಾಡುತ್ತಿರುವ ದೃಶ್ಯ ನೋಡಿದರೆ, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಮಕ್ಕಳಿಗೆ ಆಟವಾಡಲು ಮೈದಾನವೇ ಸಿಗದಂತಾಗುತ್ತದೆ. ಇದರ ಬಗ್ಗೆ ಸಾಕಷ್ಟು ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಬರೆದರೂ ಸಹ, ಯಾವುದೇ ಕ್ರಮವನ್ನು ಜರುಗಿಸಿದಂತೆ ಕಾಣುತ್ತಿಲ್ಲ. ಒಮ್ಮೆ ಮಾತ್ರ ಮೈದಾನವನ್ನು ಸ್ವಚ್ಛಗೊಳಿಸಿದ ದೃಶ್ಯ ನಮ್ಮೆಲ್ಲರಿಗೂ ನೋಡಿ ಸಂತೋಷವಾಗಿತ್ತು, ಆದರೆ ಈಗ ಮತ್ತೆ ಕಳೆ ಬೆಳೆದು, ಗದ್ದೆ ಯಂತಾಗಿದೆ. ಪಕ್ಕದಲ್ಲಿರುವ ಚರಂಡಿ ನೀರು ಹೊರಗೆ ಹರಿದು, ರಸ್ತೆ ಮೇಲೆ ನಿಲ್ಲುತ್ತದೆ, ಅಲ್ಲಿ ಸೊಳ್ಳೆಗಳ ಉತ್ಪಾದನೆಯಾಗಿ, ಡೆಂಗ್ಯೂ ಮಲೇರಿಯಾಗಳಿಗೆ ಆಸ್ಪದ ನೀಡುವಂತಾಗುತ್ತದೆ. ಅಲ್ಲೆ ಅಕ್ಕಪಕ್ಕದಲ್ಲಿ ಪಾನಿಪುರಿ ಮಾರುವ ಅಂಗಡಿಗಳು ಇದ್ದು, ಅವೆಲ್ಲವೂಗಳಲ್ಲಿ ಮಡಿಕಲ್ ವಿದ್ಯಾರ್ಥಿಗಳು ಹೆಚ್ಚು ಊಟ ಮಾಡುತ್ತಿದ್ದಾರೆ, ಮುಂದಿನ ಜನಾಂಗದ ತಯಾರಿಕೆಯಲ್ಲಿ ಇರುವಂತಹ ಶಿಕ್ಷಕರು ಸಹ ಅದೇ ಜಾಗದಲ್ಲಿ ಕೂತು ಊಟ ಮಾಡುತ್ತಿದ್ದಾರೆ, ಅವರು ಹೇಗೆ ಮುಂದಿನ ಜನಾಂಗವನ್ನು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಸಾಧ್ಯ, ನಗರ ಸಭೆಯವರು ತಕ್ಷಣ ಇತ್ತ ಕಡೆ ಗಮನ ಹರಿಸಿ, ಆಚರಣೆಯನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗವಾಗಿ ಹೋಗುವಂತೆ ಮಾಡಿ, ಸ್ವಚ್ಛ ಪರಿಸರವನ್ನು ನಿರ್ಮಾಣ ಮಾಡಿಕೊಳ್ಳಬೇಕಾಗಿದೆ 4ಎಂದಿದ್ದಾರೆ.
ಜಿಲ್ಲಾ ಪಂಚಾಯತ್ ರಸ್ತೆಗೆ ಯಾರಾದರೂ ಹೋಗುವವರಿದ್ದರೆ ಈ ನಿಂತ ನೀರಿನ ಮೇಲೆ ಚಲಿಸಬೇಕಾಗುತ್ತದೆ, ಸಾಕಷ್ಟು ಅಧಿಕಾರಿಗಳ ಗಾಡಿಗಳು ಇದೇ ರಸ್ತೆಯಲ್ಲಿ ಚಲಿಸುತ್ತಿರುತ್ತವೆ, ಅವರುಗಳು ಈ ನಿಂತ ನೀರನ್ನು ಏಕೆ ಗಮನಿಸುತ್ತಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

(Visited 4 times, 1 visits today)