ತುಮಕೂರು
ಕೇಂದ್ರ ಸರ್ಕಾರಿ ಸಿಬ್ಬಂದಿ ನೇಮಕಾತಿ ಆಯೋಗದಿಂದ ಆಗುತ್ತಿರುವ ಬಿ ಮತ್ತು ಸಿ ದರ್ಜೆ ನೌಕರಿಗಳಲ್ಲಿ ಕನ್ನಡಿಗರ ಹಿತ ಕಾಪಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತುಮಕೂರು ಘಟಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.
ಜಿಲ್ಲಾಧ್ಯಕ್ಷ ಕೆ.ಎನ್. ಮಂಜುನಾಥ್ ಗೌಡ ಮಾತನಾಡಿ, ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಖಾಲಿಯಿರುವ 20,000 ಕ್ಕೂ ಹೆಚ್ಚಿನ ಜಿ ಮತ್ತು ಸಿ ದರ್ಜೆಯ ಹುದ್ದೆಗಳಿಗಾಗಿ ಅರ್ಜಿಗಳನ್ನು ಅಹ್ವಾನಿಸಿದ್ದು ಈ ಪ್ರಕಿಯೆ 17 ನೇ ಸೆಪ್ಟೆಂಬರ್ 2022 ರಿಂದ ಆರಂಭವಾಗಿದ್ದು ಸದರಿ ನೇಮಕಾತಿಯ ಅರ್ಜಿ ಸಲ್ಲಿಸುವಿಕೆಯಿಂದ ಹಿಡಿದು ಎಲ್ಲ ಹಂತಗಳ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳ ತನಕ ಕೇವಲ ಹಿಂದಿ ಮತ್ತು ಇಂಗ್ಲೀμï ಭಾμÉಗಳಲ್ಲಿ ನಡೆಯಲಿವೆ. ಇದು ಕನ್ನಡಿಗರ ಉದ್ಯೋಗಾವಕಾಶಗಳನ್ನು ಕಸಿಯುವಂತಹ ತಾರತಮ್ಯದ ನಡೆಯಾಗಿದೆ ಎಂದು ಆರೋಪಿಸಿದರು.
ನೇಮಕಾತಿಯ ಎಲ್ಲ ಹಂತದ ಪರೀಕ್ಷೆಗಳೂ ಹಿಂದಿ, ಇಂಗ್ಲೀμï ಭಾμÉಗಳಲ್ಲಿ ಮಾತ್ರ ನಡೆಸುವುದು ಹಿಂದಿ ಮಾತೃ ಭಾಷಿಕರಿಗೆ ಮಾತ್ರ ಅವರ ಭಾμÉಯಲ್ಲಿ ಅರ್ಜಿ ಸಲ್ಲಿಸುವ, ಪರೀಕ್ಷೆ ಬರೆಯುವ ಅನುಕೂಲ ಮಾಡಿಕೊಟ್ಟಿರುವುದು ಎಲ್ಲ ಹಿಂದಿಯೇತರ ಜನಗಳಿಗೆ ಭಾರತ ಸರ್ಕಾರ ಎಸಗುತ್ತಿರುವ ದ್ರೋಹವಾಗಿದೆ. ಇದμÉ್ಟೀ ಅಲ್ಲದೆ, ಹೀಗೆ ದೇಶಾದ್ಯಂತ ನಡೆಯುವ ನೇಮಕಾತಿಯು ಈ ಹಿಂದಿನಂತೆ ವಲಯವಾರು ಆಗುವುದು ನಾಡಿನ ಜನತೆಯ ಸುಲಲಿತತೆಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಏಕೆಂದರೆ ಕರ್ನಾಟಕ, ಕೇರಳ ವಲಯಕ್ಕೆ ನೇಮಕಾತಿಯಾಗುವಾಗ ಇಲ್ಲಿನ ಎಲ್ಲ ಹುದ್ದೆಗಳೂ ಈ ವಲಯದ ಅಭ್ಯರ್ಥಿಗಳಿಗೆ ಸಿಗುತ್ತಿದ್ದರಿಂದ (ಪರೀಕ್ಷೆಗಳು ಕನ್ನಡದಲ್ಲಿ ನಡೆಯದಿದ್ದಾಗಲೂ) ಸ್ಥಳೀಯರಿಗೆ ಸದರಿ ಕೇಂದ್ರ ಕಚೇರಿಗಳಲ್ಲಿ ಅನುಕೂಲಗಳ ಪ್ರಮಾಣ ಬಹುಷಃ ಕಡಿಮೆಯಿರುತ್ತಿತ್ತು. ಈ ದೇಶದಾದ್ಯಂತದ ನೇಮಕಾತಿಯಿಂದಾಗಿ ಪರಭಾμÉಯ ಅಧಿಕಾರಿಗಳೊಂದಿಗೆ ವ್ಯವಹರಿಸಬೇಕಾದ ಅನಿವಾರ್ಯತೆ ಹೆಚ್ಚಲಿದ್ದು, ನಾಗರೀಕರಿಗೆ ಉಂಟಾಗುವ ಭಾμÁ ಸಂಬಂಧಿತ ಅನನುಕೂಲಗಳು ಉಲ್ಬಣಗೊಳ್ಳುವ ಸಾಧ್ಯತೆಗಳು ಹೆಚ್ಚಲಿವೆ. ಹಾಗಾಗಿ ಈ ಇಡೀ ನೇಮಕಾತಿ ಪ್ರಕ್ರಿಯೆಯು ವಲಯವಾರು ನಡೆಯುವುದು ಮತ್ತು ಕನ್ನಡದಲ್ಲಿ ಕೂಡಾ ನಡೆಯುವುದು ಕನ್ನಡಿಗರು ಅರ್ಜಿ ಸಲ್ಲಿಸಲು ಮತ್ತು ನೇಮಕವಾಗಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಿ ಸಿಬ್ಬಂದಿ ನೇಮಕಾತಿ ಆಯೋಗದಿಂದ ಆಗುತ್ತಿರುವ ಬಿ ಮತ್ತು ಸಿ ದರ್ಜೆ ನೌಕರಿಗಳಲ್ಲಿ ಕನ್ನಡಿಗರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು. ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಮಹಿಳಾ ಉಪಾಧ್ಯಕ್ಷ ಲೀಲಾವತಿ, ಯುವ ಘಟಕದ ಅಧ್ಯಕ್ಷ ಕುಂಭಯ್ಯ, ತಾಲೂಕು ಅಧ್ಯಕ್ಷ ಗುಬ್ಬಿ ಶ್ರೀನಿವಾಸ್ , ಕೊರಟಗೆರೆ ತಾಲೂಕು ಅಧ್ಯಕ್ಷ ಶ್ರೀನಾಥ್, ತಾಲೂಕು ಘಟಕದ ರೂಪಾ ಹಾಗೂ ಸಂಘದ ಪದಾಧಿಕಾರಿಗಳಿದ್ದರು.