ತುಮಕೂರು
ವಿಶ್ವ ಆಹಾರ ದಿನವನ್ನು ವಿಶ್ವದಾದ್ಯಂತ ಅಕ್ಟೋಬರ್ 16ರಂದು ಆಚರಿಸಲಾಗುತ್ತಿದ್ದು, ಆಹಾರ ಭದ್ರತೆ ಒದಗಿಸುವಲ್ಲಿ ಮೀನುಗಾರಿಕೆಯೂ ಒಂದು ಪ್ರಮುಖ ಚಟುವಟಿಕೆಯಾಗಿರುವ ಹಿನ್ನೆಲೆಯಲ್ಲಿ“ಯಾರನ್ನೂ ಹಿಂದೆ ಬಿಡಬೇಡಿ” (ಐeಚಿve ಓಔ ಔಓಇ ಃehiಟಿಜ) ಎಂಬ ವಿಶ್ವ ಆಹಾರ ದಿನ 2022ರ ಘೋಷವಾಕ್ಯದೊಂದಿಗೆ ಮೀನು ಉತ್ಪಾದನೆಯಲ್ಲಿ ರಾಜ್ಯವನ್ನು ದೇಶದಲ್ಲಿಯೇ ಮುಂಚೂಣಿ ರಾಜ್ಯವನ್ನಾಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮೀನುಗಾರಿಕೆ ಇಲಾಖೆಯು ಫ್ರೀಡಂ ಆಪ್ ಸಹಯೋಗದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಕ್ಟೋಬರ್ 16ರಂದು ಒಂದು ದಿನದ “ಒಳನಾಡು ಮೀನು ಉತ್ಪಾದಕರ ಸಮಾವೇಶ-2022”ಅನ್ನು ಆಯೋಜಿಸಿದೆ.
ಒಳನಾಡು ಮೀನು ಉತ್ಪಾದನೆಯನ್ನು ಹೆಚ್ಚಿಸಲು ಸಮಾವೇಶ:
ಒಳನಾಡು ಜಿಲ್ಲೆಯಲ್ಲಿರುವ ನೈಸರ್ಗಿಕ ಜಲಸಂಪನ್ಮೂಲಗಳನ್ನು ಬಳಸಿಕೊಳ್ಳುವುದರ ಜೊತೆಗೆ ಆಧುನಿಕ ತಂತ್ರಜ್ಞಾನಗಳಾದ ಃioಈಟoಛಿ ಮತ್ತು ಖಂS ತಂತ್ರಜ್ಞಾನಗಳನ್ನು ಬಳಸಿಕೊಂಡು ಒಳನಾಡು ಮೀನು ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಮೀನುಗಾರಿಕೆ ಇಲಾಖೆ ಮತ್ತು ಜಿಜಿಡಿeeಜom ಂಠಿಠಿ ಸಂಸ್ಥೆಯು ಜಂಟಿಯಾಗಿ ರಾಜ್ಯದ ನಿರುದ್ಯೋಗ ಯುವಕ-
ಯುವತಿಯರಿಗೆ ಮೀನುಮರಿ ಉತ್ಪಾದನೆ, ಪಾಲನೆ, ಕೆರೆ ಮೀನುಗಾರಿಕೆ, ಹಿನ್ನೀರು ಮೀನುಗಾರಿಕೆ, ಕೊಳ ಮೀನುಗಾರಿಕೆ ಮತ್ತು ಆಧುನಿಕ ತಂತ್ರಜ್ಞಾನಗಳ ಬಗ್ಗೆ ಪರಿಚಯಿಸಿ ಅವರನ್ನು ಒಳನಾಡು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡು ಆತ್ಮನಿರ್ಭರವನ್ನಾಗಿ ಮತ್ತು ಸ್ವ-ಉದ್ಯೋಗಿಗಳನ್ನಾಗಿ ಮಾಡುವುದು ಹಾಗೂ ಒಳನಾಡು ಮೀನು ಉತ್ಪಾದನೆಯನ್ನು ಹೆಚ್ಚಿಸಿ ಸಾರ್ವಜನಿಕರಿಗೆ ಪೌಷ್ಠಿಕ ಮೀನು ಆಹಾರ ಸುಲಭವಾಗಿ ಮತ್ತು ಕಡಿಮೆ ದರದಲ್ಲಿ ದೊರಕಿಸುವ ನಿಟ್ಟಿನಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿದೆ.
ಜಿಲ್ಲೆಯಲ್ಲಿ 30,000 ಮೀನುಗಾರರು:
ಜಿಲ್ಲೆಯಲ್ಲಿ ಪೂರ್ಣಕಾಲಿಕ ಮತ್ತು ಅರೆಕಾಲಿಕ ಸೇರಿದಂತೆ ಸುಮಾರು 30,000 ಮೀನುಗಾರರಿದ್ದು, ಒಟ್ಟು 32 ಮೀನುಗಾರರ ಸಹಕಾರ ಸಂಘಗಳು ಅಸ್ತಿತ್ವದಲ್ಲಿವೆ. ಸದರಿ ಸಂಘಗಳಲ್ಲಿ ಒಟ್ಟು 9046 ಸದಸ್ಯರು ಸದಸ್ಯತ್ವ ಪಡೆದಿದ್ದಾರೆ. ಜಿಲ್ಲೆಯಲ್ಲಿ 2021-22ರಲ್ಲಿ 31500 ಟನ್ ಮೀನು ಉತ್ಪಾದನೆಯಾಗಿದ್ದು, ಇದು ಈವರೆಗಿನ ಗರಿಷ್ಟ ಉತ್ಪಾದನೆಯಾಗಿದೆ.
ಮೀನುಗಾರರ ಅಭಿವೃದ್ಧಿಗಾಗಿ ಪ್ರೋತ್ಸಾಹಕಾರಿ ಯೋಜನೆ ಅನುಷ್ಠಾನ:
ಜಿಲ್ಲೆಯಲ್ಲಿ ಮೀನುಗಾರರ ಅಭಿವೃದ್ಧಿಗಾಗಿ ಅನೇಕ ಪ್ರೋತ್ಸಾಹಕಾರಿ ಯೋಜನೆಗಳನ್ನು ಅನುμÁ್ಟನಗೊಳಿಸಲಾಗುತ್ತಿದ್ದು, ಮೀನು ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ದೃಷ್ಠಿಯಿಂದ ಮೀನುಗಾರರು, ಮೀನು ಕೃಷಿಕರು, ಯುವಕರು, ಮಹಿಳೆಯರು, ಉದ್ಯಮಿಗಳ ಅನುಕೂಲಕ್ಕಾಗಿ ವ್ಯಾಪಕವಾದ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ.
ಬೆಂಗಳೂರಿನಲ್ಲಿ ಅಕ್ಟೋಬರ್ 16ರಂದು ನಡೆಯಲಿರುವ ರಾಜ್ಯ ಮಟ್ಟದ“ಒಳನಾಡು ಮೀನು ಉತ್ಪಾದಕರ ಸಮಾವೇಶ 2022”ರಲ್ಲಿ ಮೀನುಗಾರರು, ಮೀನು ಕೃಷಿಕರು, ಉದ್ಯಮಿಗಳು, ವಿವಿಧ ಯೋಜನೆಗಳಡಿ ಸೌಲಭ್ಯ ಪಡೆದ / ಪಡೆಯಲಿಚ್ಛಿಸುವ ಫಲಾನುಭವಿಗಳು ಮತ್ತು ಸಾವರ್ಜನಿಕರು ಪಾಲ್ಗೊಂಡು ಮೀನು ಕೃಷಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ.
ನೋಂದಣಿ ಮಾಡುವ ವಿಧಾನ:
ಫ್ರೀಡಂ ಆಪ್(ಜಿಜಿಡಿeeಜom ಂಠಿಠಿ) ಡೌನಲೋಡ್ ಮಾಡಿ, ಆಪ್ ತೆರೆದ ನಂತರ ಸಮಾವೇಶದ ಬ್ಯಾನರ್ ಕ್ಲಿಕ್ ಮಾಡಿ, ನೋಂದಣಿ ಮಾಹಿತಿಯನ್ನು ಭರ್ತಿ ಮಾಡಬೇಕು. ನಂತರ ತಮ್ಮ ಹೆಸರು, ಮೊಬೈಲ್ ಸಂಖ್ಯೆ, ವಿಳಾಸ, ಪಿನ್ ಕೋಡ್ ನಮೂದಿಸಬೇಕು. ಮಾಹಿತಿಯನ್ನು ನಮೂದಿಸಿದ ನಂತರ ಮೊಬೈಲ್ ಸಂಖ್ಯೆಗೆ ಸಂದೇಶ ಬರುತ್ತದೆ. ನೋಂದಣಿ ಮಾಡಿದ ಮೊಬೈಲ್ ಸಂಖ್ಯೆಯ ವಾಟ್ಸ್‍ಆಪ್‍ಗೆ ಎಂಟ್ರಿ(ಪ್ರವೇಶ) ಪಾಸ್ ಬರುತ್ತದೆ.
ಆಸಕ್ತ ಯುವಕ-ಯುವತಿಯರು ಹಾಗೂ ಸಾರ್ವಜನಿಕರು ಜಿಜಿಡಿeeಜom ಂಠಿಠಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಈ ಸಮಾವೇಶದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರು ಅಥವಾ ಇಲಾಖೆಯ ಸಹಾಯವಾಣಿ ಸಂಖ್ಯೆ: 8277-200-300ಯನ್ನು ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಉಪನಿರ್ದೇಶಕ ಟಿ.ಎಸ್. ವಿಶ್ವನಾಥ್ ಮನವಿ ಮಾಡಿದ್ದಾರೆ.