ತುಮಕೂರು
ರಾತ್ರಿ ಸುರಿದ ಭಾರಿ ಮಳೆಯ ಕಾರಣದಿಂದ ನಗರದ ವಿವಿಧೆಡೆನೀರು ನುಗ್ಗಿ ಸಮಸ್ಯೆಉಂಟಾಗಿತ್ತು. ನಗರ ಪಾಲಿಕೆ ಮೇಯರ್ ಪ್ರಭಾವತಿ, ಉಪ ಮೇಯರ್ ಟಿ.ಕೆ.ನರಸಿಂಹಮೂರ್ತಿ, ಆಯುಕ್ತೆರೇಣುಕಾಅವರೊಂದಿಗೆ ಪಾಲಿಕೆ ಸದಸ್ಯರು, ಅಧಿಕಾರಿಗಳು ಶುಕ್ರವಾರವಿವಿಧೆಡೆಭೇಟಿ ಪರಿಶೀಲನೆ ಮಾಡಿದರು.
8 ಮತ್ತು 9ನೇ ವಾರ್ಡ್ ವ್ಯಾಪ್ತಿಯಗುಬ್ಬಿಗೇಟ್‍ರಿಂಗ್‍ರಸ್ತೆಯಲ್ಲಿಚರಂಡಿ ನೀರುಅಕ್ಕಪಕ್ಕದ ಅಂಗಡಿಗಳಿಗೆ ನುಗ್ಗಿ ಅವಾಂತರಉಂಟು ಮಾಡಿತ್ತು.ಅವೈಜ್ಞಾನಿಕಚರಂಡಿ ವ್ಯವಸ್ಥೆಯಿಂದ ಈ ಪರಿಸ್ಥಿತಿ ಬಂದಿದೆ,ಕೂಡಲೇ ಸರಿಪಡಿಸಿ ಎಂದುಒತ್ತಾಯಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.
ಮೇಯರ್, ಉಪ ಮೇಯರ್,ಆಯುಕ್ತರು, ಆ ಭಾಗದ ನಗರಪಾಲಿಕೆ ಸದಸ್ಯ ಸೈಯದ್ ನಯಾಜ್‍ಅಹ್ಮದ್, ಕಾರ್ಯಪಾಲಕಇಂಜಿನಿಯರ್ ಆಶಾ ಇತರೆ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಪರಿಶೀಲಿಸಿ, ಸಾರ್ವಜನಿಕರ ಆಹವಾಲು ಸ್ವೀಕರಿಸಿದರು.
ನಗರದ ಬಹುತೇಕ ಚರಂಡಿಗಳು ಕಸ ತುಂಬಿಕೊಂಡು ನೀರು ಸರಾಗಹರಿಯದ ದುಸ್ಥಿತಿಯಲ್ಲಿವೆ. ಮಳೆ ಸುರಿದಾಗ ಇಂತಹ ಅವಾಂತರ ಉಂಟಾಗುತ್ತದೆ.ಅಂತಹಕಡೆ ಚರಂಡಿ ಕಸ, ಹೂಳು ತೆಗೆದು ಸ್ವಚ್ಛಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಉಪ ಮೇಯರ್ ಟಿ.ಕೆ.ನರಸಿಂಹಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.
ರಾತ್ರಿ ಸುರಿದ ಮಳೆಯಿಂದ ಅಮಾನಿಕೆರೆಗೆ ಒಳಹರಿವು ಹೆಚ್ಚಾಗಿ ಬೆಳಗ್ಗೆಯಿಂದ ಕೆರೆಭರ್ತಿಯಾಗಿಕೋಡಿ ನೀರುಭೋರ್ಗರೆದು ಹರಿಯುತ್ತಿದೆ. ಮೇಯರ್, ಉಪಮೇಯರ್, ಅಯುಕ್ತರುಅಮಾನಿಕೆರೆಕೋಡಿ ಸ್ಥಳಕ್ಕೆ ಭೇಟಿ ನೀಡಿದರು, ಮಳೆ ಹೆಚ್ಚಾದರೆಕೋಡಿಯಲ್ಲಿ ನೀರಿನ ಪ್ರಮಾಣವೂಏರಿಕೆಯಾಗುತ್ತದೆ.ಮುನ್ನೆಚ್ಚರಿಕೆಕ್ರಮವಾಗಿಕೋಡಿ ಭಾಗದಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಬೇಕು, ಅವರಿಗೆ ಸೂಕ್ತ ಅನುಕೂಲ ಮಾಡಬೇಕುಎಂದು 3ನೇ ವಾರ್ಡಿನ ಪಾಲಿಕೆ ಸದಸ್ಯ ಲಕ್ಷ್ಮೀನರಸಿಂಹರಾಜು ಆಯುಕ್ತರು, ಮೇಯರ್‍ಗೆ ಹೇಳಿದರು.
ಮಳೆ ಸಂದರ್ಭದಲ್ಲಿಹಾನಿಗೀಡಾಗುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ನಾಗರೀಕರಿಗೆ ಅನಾನುಕೂಲವಾಗದಂತೆ ಎಚ್ಚರವಹಿಸಿ ಎಂದು ಮೇಯರ್ ಪ್ರಭಾವತಿ ಅಧಿಕಾರಿಗಳಿಗೆ ಸೂಚಿಸಿದರು.