ತುಮಕೂರು
ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಉನ್ನತವಾಗಿ ಬೆಳೆದು ಪೆÇೀಷಕರಿಗೆ ಹಾಗೂ ಶಿಕ್ಷಕರಿಗೆ ಕೀರ್ತಿಯನ್ನು ತರಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ನೂರುನ್ನೀಸ ಹೇಳಿದರು.
ಇಲ್ಲಿನ ಗಾಂಧಿನಗರದಲ್ಲಿರುವ ಸೈಂಟ್ ಮೇರಿಸ್ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ಅಂತರ್‍ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬರುವಾಗ ಜಾಗ್ರತೆಯಿಂದ ಇರಬೇಕು, ಪೆÇೀಷಕರು ಮಕ್ಕಳಿಗೆ ಉತ್ತಮವಾದ ಉಡುಪು ನೀಡಬೇಕು, ಮತ್ತು ನಿಮ್ಮ ರಕ್ಷಣೆ ನಿಮ್ಮ ಕೈಯಲ್ಲೇ ಇದೆ. ಬೇರೆಯವರಿಗೆ ಆಕರ್ಷಣೆಯಾಗದ ರೀತಿಯಲ್ಲಿ ವಿದ್ಯಾರ್ಥಿಗಳು ಉಡುಪು ಧರಿಸಬೇಕು, ಅತ್ಯಾಚಾರಗಳ ಮತ್ತು ನೂತನ ವ್ಯಕ್ತಿಗಳ ಸಂಪರ್ಕದಿಂದ ಹಾಗೂ ಪರಿಚಯಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಮಕ್ಕಳ ಮೇಲೆ ದೌರ್ಜನ್ಯ ನಡೆಯುವುದನ್ನು ತಪ್ಪಿಸಲು ಕಠಿಣ ಶಿಕ್ಷೆ ಒಳಗೊಂಡ ಪೆÇೀಕ್ಸೊ ಕಾಯ್ದೆ ಬಗ್ಗೆ ತಾವೆಲ್ಲರೂ ತಿಳಿದುಕೊಂಡು ಇತರರಿಗೂ ಜಾಗೃತಿ ಮೂಡಿಸಬೇಕು. ಪೆÇಲೀಸ್ ಇಲಾಖೆ ಹೆಣ್ಣು ಮಕ್ಕಳ ರಕ್ಷಣೆಗಾಗಿ ವಿಶೇಷ ಆಪ್ ತಯಾರಿಸಿದ್ದು ಸ್ಮಾರ್ಟ್ ಫೆÇೀನಿನಲ್ಲಿ ಅದನ್ನು ಅಳವಡಿಸಿಕೊಂಡು ಇತರರಿಗೆ ಜಾಗೃತಿ ಮೂಡಿಸಿ ಎಂದರು.
ಹೆಣ್ಣು ಮಕ್ಕಳ ಮೇಲಾಗುವ ಶೋಷಣೆಗಳು ಅದರಿಂದಾಗುವ ಅನಾಹುತಗಳು, ನೀವು ಹೇಗೆ ಮೊಬೈಲ್ ಮೂಲಕ ತೊಂದರೆಗೆ ಒಳಗಾಗುತ್ತೀರಾ ಅಂತಹ ಸಂದರ್ಭಗಳೆನಾದರೂ ನೀವು ನೋಡಿದ್ದಲ್ಲಿ ಅಥವಾ ಕೇಳಿದ್ದಲ್ಲಿ ಅದನ್ನು ಹಿರಿಯರಿಗೆ ತಿಳಿಸಿ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಿ.ಆರ್.ಪವಿತ್ರ ಮಾತನಾಡಿ, ಹೆಣ್ಣು ಮಕ್ಕಳ ವಿರುದ್ಧ ನಡೆಯುವ ಶೋಷಣೆ, ಹೆಣ್ಣು ಭ್ರೂಣ ಹತ್ಯೆ, ಲೈಂಗಿಕ ಕಿರುಕುಳ ಅಂತಹ ಕೃತ್ಯಗಳನ್ನು ತಡೆಗಟ್ಟಿ, ಹೆಣ್ಣು ಮಕ್ಕಳ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
ಸುಸ್ಥಿರ ಸಮಾಜ ನಿರ್ಮಿಸುವುದು ವಿದ್ಯಾರ್ಥಿಗಳ ಕರ್ತವ್ಯ. ಕೇವಲ ಹಕ್ಕು ಮತ್ತು ಕರ್ತವ್ಯ ತಿಳಿದುಕೊಂಡರೆ ಸಾಲದು, ಅದರಂತೆ ನಡೆದಾಗ ಮಾತ್ರ ನಾವು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬಾಳಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೈಂಟ್ ಮೇರಿಸ್ ಶಾಲೆಯ ವ್ಯವಸ್ಥಾಪಕಿ ಡಯಾನಾ ವಹಿಸಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಸಾಂಸ್ಥಿಕ ಸೇವೆ ರಕ್ಷಣಾಧಿಕಾರಿ ಕೆ.ಎಸ್.ಶಿವಣ್ಣ, ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ರೀಟಾ ಲಾರೆನ್ಸ್ ಸೇರಿದಂತೆ ಶಾಲೆಯ
ವಿದ್ಯಾರ್ಥಿನಿಯರು ಹಾಜರಿದ್ದರು.