ಗುಬ್ಬಿ
ನಿಟ್ಟೂರುನ ದೇವಾಲಯ ವೊಂದರಲ್ಲಿ ದಲಿತ ಕುಟುಂಬಕ್ಕೆ ದೇವಾಲಯದ ಒಳ ಪ್ರವೇಶ ನಿರಾಕರಿಸಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಇಂದು ತಹಸೀಲ್ದಾರ್ ಬಿ. ಆರತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಮಣ್ಣ ಹಾಗೂ ಇಓ ಶಿವಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೇವಾಲಯದ ಟ್ರಸ್ಟ್
ಪದಾಧಿಕಾರಿಗಳು ಹಾಗೂ ದಲಿತ ಮುಖಂಡರ ಸಭೆಯನ್ನು ನಡೆಸಿ ಸಮಾಜದಲ್ಲಿ ಸಾಮರಸ್ಯ ಮೂಡಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ದಲಿತ ಮುಖಂಡರನ್ನು ದೇವಾಲಯದ ಒಳ ಪ್ರವೇಶ ಮಾಡಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಮಣ್ಣ ಮಾತನಾಡಿ ಪೂಜೆಯ ವಿಚಾರವಾಗಿ ಹಾಗೂ ದಲಿತರ ಒಳ ಪ್ರವೇಶ ಕ್ಕೆ ನಿರಾಕರಣೆಯ ಯಿಂದಾಗಿ ಗೊಂದಲ ಸೃಷ್ಟಿ ಯಾಗಿ ದೇವಾಲಯದ ಅರ್ಚಕ ಹಾಗೂ ಟ್ರಸ್ಟ್ ಸದಸ್ಯರ ನಡುವಿನ ಸಂಬಂಧ ವಿವರ ಪಡೆದು ಇನ್ನೂ ಮುಂದೆ ಯಾವುದೇ ಈ ರೀತಿಯ ಅಹಿತಕರ ಘಟನೆ ನಡೆಯದಂತೆ ಎರಡು ಪಂಗಡಗಳಿಗೆ ತಿಳಿಸಿ ದೇವಾಲಯಕ್ಕೆ ಪೂಜೆ ಹಾಗೂ ಬೇರೆ ಬೇರೆ ಕಾರ್ಯಗಳಲ್ಲಿ ದಲಿತರು ಭಾಗವಹಿಸಬಹುದು ಎಂದು ಟ್ರಸ್ಟ್ ನ ಸದಸ್ಯರುಗಳ ಮಾತಿನಿಂದ ಘಟನೆಗೆ ತೆರೆ ಎಳೆಯಲಾಯಿತು ಎಂದು ತಿಳಿಸಿದರು.
ಟ್ರಸ್ಟ್ ಅಧ್ಯಕ್ಷ ಶಿವಣ್ಣ ಮಾತನಾಡಿ ಅನಾದಿ ಕಾಲದಿಂದಲೂ ಗ್ರಾಮದಲ್ಲಿರುವ ಎಲ್ಲಾ ದೇವಾಲಯಗಳಿಗೂ ಯಾವುದೇ ನಿರ್ಬಂಧ ವಿಧಿಸಿಲ್ಲ, ನಾವು ಹಾಗೂ ದಲಿತ ಸಮುದಾಯದವರು ಅಣ್ಣ ತಮ್ಮಂದಿರು ರೀತಿಯಲ್ಲಿದ್ದು ದೇವಾಲಯದ ಲೋಕಾರ್ಪಣೆ ಸಮಾರಂಭದಲ್ಲಿ ದಲಿತ ನಾಯಕರಾದ ರಂಗಸ್ವಾಮಿ ಅವರಿಗೂ ವಹಿಸಲಾಗಿತ್ತು. ಯಾವುದೋ ಕ್ಷುಲ್ಲಕ ಕಾರಣಕ್ಕೆ ಈ ರೀತಿಯ ಘಟನೆ ನಡೆದಿದ್ದು ಇನ್ನೂ ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸಲಾಗುವುದು ಎಂದು ತಿಳಿಸಿದರು.
ಡಿ.ಎಸ್.ಎಸ್.ಜಿಲ್ಲಾ ಸಂಚಾಲಕ ರಂಗಸ್ವಾಮಿ ಮಾತನಾಡಿ ಪೂಜೆಗೆ ನಿರಾಕರಣೆ ಮಾಡಿರುವುದು ಸತ್ಯವಾದರೂ ಸಣ್ಣ ಸಣ್ಣ ಕಾರಣಕ್ಕೆ ಸೋಷಿಯಲ್ ಮೀಡಿಯಾ ಮುಖೇನ ವಿಡಿಯೋ ವೈರಲ್ ಮಾಡುವುದು ಸರಿಯಲ್ಲ. ತಾಲೂಕು ದಂಡಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಸ್ಯೆಯನ್ನು ಬಗೆಹರಿಸಿದ್ದು ಇನ್ನೂ ಮುಂದೆ ಈರೀತಿಯ ಘಟನೆ ನಡೆಯದಂತೆ ನೋಡಿಕೊಳ್ಳ ಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಮೋಹನ್, ದಲಿತ ಮುಖಂಡರು ಹಾಗೂ ದೇವಾಲಯದ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.