ತುಮಕೂರು


ಉಪಗ್ರಹ ಉಡಾವಣೆ ಮಾಡಲು ಎಲ್ಲಾ ವಿಭಾಗದ ಇಂಜಿನಿಯರ್‍ಗಳ ಅವಶ್ಯಕತೆಯಿದೆ ಎಂದು ಇಸ್ರೋ ವಿಜ್ಞಾನಿ ಡಾ.ಡಿ. ವೆಂಕಟರಮಣ ತಿಳಿಸಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಐಇಇಇ ವಿದ್ಯಾರ್ಥಿ ವಿಭಾಗದಿಂದ ಆಯೋಜಿಸಿದ್ದ ಐಇಇಇ ದಿನಾಚರಣೆಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಲಿಕಾ ಹಂತದಲ್ಲೇ ಪ್ರಾಯೋಗಿಕ ತಿಳಿವಳಿಕೆ ನೀಡಲು ಇಸ್ರೋ ಸ್ಪೇಸ್ ಆನ್ ವ್ಹೀಲ್ಸ್‍ನ್ನು ಪರಿಚಯಿಸಿದೆ. ಯಾವುದೇ ಕ್ಷೇತ್ರದಲ್ಲಿ ಅಲ್ಪ ಸ್ವಲ್ಪ ತಪ್ಪುಗಳಾದರೆ ತಿದ್ದಿಕೊಳ್ಳಲು ಅವಕಾಶವಿರಹುದು ಆದರೆ ಬಾಹ್ಯಾಕಾಶ ಮತ್ತು ಉಪಗ್ರಹ ಉಡಾವಣೆಯಲ್ಲಿ ಶೇ.100ರಷ್ಟು ಎಲ್ಲವನ್ನೂ ಸರಿಯಾಗಿಯೇ ನಿಭಾಯಿಸಬೇಕು ಎಂದರು.
ಸ್ಪೇಸ್ ಆನ್ ವ್ಹೀಲ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ಮತ್ತು ಉಪಗ್ರಹ ಉಡಾವಣೆ ಕುರಿತು ಪ್ರಾಯೋಗಿಕ ಮಾಹಿತಿ ಒದಗಿಸುತ್ತದೆ. ಹಾಗಾಗಿ ನಗರದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ಪೇಸ್ ಆನ್ ವ್ಹೀಲ್ಸ್‍ನ್ನು ನಗರದಲ್ಲಿ ಪರಿಚಯಿಸಲಾಗಿದೆ ಎಂದು ಅವರು ತಿಳಿಸಿದರು.
ಸಾಹೇ ರಿಜಿಸ್ಟ್ರಾರ್ ಮತ್ತು ಐಇಇಇ ವಿದ್ಯಾರ್ಥಿ ವಿಭಾಗದ ಸಮಾಲೋಚಕರಾದ ಡಾಎಂ.ಝೆಡ್‍ಕುರಿಯನ್ ಮಾತನಾಡಿ, ಐಇಇಇ ವಿಭಾಗದಿಂದ ಐಇಇಇ ದಿನಾಚರಣೆ ಆಚರಿಸಲಾಗುತ್ತಿದೆ. ಇಸ್ರೋ ಸಹಯೋಗದೊಂದಿಗೆ ಆಯೋಜಿಸಿದ್ದ ಸ್ಪೇಸ್ ಆನ್ ವೀಲ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ, ಒಂದು ಉಪಗ್ರಹ ಉಡಾವಣೆ ಕಾರ್ಯದಲ್ಲಿ ಇಂಜಿನಿಯರ್ಸ್ ಪಾತ್ರ ಪ್ರಮುಖವಾಗಿದೆ ಎಂದರು.
ಶ್ರಿ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ ಎಸ್ ರವಿಪ್ರಕಾಶ ಮಾತನಾಡಿ, ಐಇಇಇಯಿಂದ ನಮ್ಮ ಕಾಲೇಜಿನಲ್ಲಿ ಅನೇಕ ಕಾರ್ಯ ಚಟುವಟಿಕೆಗಳನ್ನು ಮಾಡಿದ್ದೇವೆ. ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಚಟುವಟಿಕೆಗೆ ಪೂರಕವಾಗಿದೆ. ತಂತ್ರಜ್ಞಾನದ ಯುಗದಲ್ಲಿ ಇಸ್ರೋ ಸಾಧನೆಯ ಮಾಹಿತಿ ವಿದ್ಯಾರ್ಥಿಗಳಿಗೆ ಅವಶ್ಯ ಎಂದರು.
ವಿಜ್ಞಾನಿ ಡಾ.ಶ್ರೀನಿವಾಸ್, ಡೀನ್ ಅಕಾಡೆಮಿ ಮತ್ತು ಐಇಇಇ ವಿದ್ಯಾರ್ಥಿ ವಿಭಾಗದ ಮಾರ್ಗದರ್ಶಕರಾದ ಡಾ.ಎಂ.ಸಿದ್ಧಪ್ಪ, ಡೀನ್ ಪರೀಕ್ಷಾಂಗ ವಿಭಾಗ ಡಾ.ಎಂ.ಕರುಣಾಕರ, ಐಇಇಇ ವಿದ್ಯಾರ್ಥಿ ವಿಭಾಗದ ಭೋದಕ ಸಲಹೆಗಾರರಾದ ಎಂ.ಎನ್.ಶಾರದ ಗುಪ್ತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

(Visited 1 times, 1 visits today)