ತುಮಕೂರು
ನಗರ ಭೂ ಸಾರಿಗೆ ನಿರ್ದೇಶನಾಲಯ(ಆUಐಖಿ)ವು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್, ಕರ್ನಾಟಕ ಬೈಸಿಕಲ್ ಡೀಲರ್ಸ್ ಅಸೋಸಿಯೇಷನ್ ಹಾಗೂ ಬೈಸಿಕಲ್ ವಲ್ರ್ಡ್ ಅಸೋಸಿ ಯೇಷನ್ ಸಹಯೋಗದಲ್ಲಿ ಅಕ್ಟೋಬರ್ 16ರಂದು ನಗರದಲ್ಲಿ ‘ಸೈಕಲ್ ದಿನ’ ಆಚರಣೆ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ.ರಂಗಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿ ಸೈಕಲ್ ಸವಾರಿಯನ್ನು ಉತ್ತೇಜಿಸಲು, ಸಾರ್ವಜನಿಕರು ಸೈಕಲ್ ಸವಾರರೊಂದಿಗೆ ಸಂವಹನ ನಡೆಸಲು, ಸ್ಪರ್ಧೆ ಮತ್ತು ಆಟಗಳಲ್ಲಿ ಭಾಗವಹಿಸಲು ವೇದಿಕೆಯನ್ನು ಒದಗಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ವಾಹನ ಸಂಚಾರ ನಿರ್ಬಂಧ:
ದಿನಾಚರಣೆ ಪ್ರಯುಕ್ತ ಅಕ್ಟೋಬರ್ 16ರ ಬೆಳಿಗ್ಗೆ 6 ರಿಂದ 11 ಗಂಟೆಯವರೆಗೆ ಕೋಡಿ ಬಸವೇಶ್ವರ ವೃತ್ತದಿಂದ ಕರಿ ಬಸವೇಶ್ವರ ರಸ್ತೆಯವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಅವಧಿಯಲ್ಲಿ ಸೈಕಲ್ ಸವಾರಿ ತರಬೇತಿ, ಚಿಣ್ಣರಿಗಾಗಿ ಸೈಕಲ್ ರೇಸ್, ಸ್ಲೋ ಸೈಕಲ್ ರೇಸ್, ಕಲ್ಚರಲ್ ಗೇಮ್ಸ್, ಇ-ಚಲನ್‍ಗಳ ಪಾವತಿ, ಪ್ಯಾನಿಕ್ ಬಟನ್ ಬಳಕೆ ಇತ್ಯಾದಿ ಚಟುವಟಿಕೆಗಳನ್ನು ನಡೆಸಲಾಗುವುದು. ಅಲ್ಲದೆ ಮಕ್ಕಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳ
ಲಾಗುವುದು. ವಾಹನ ರಹಿತ ವಲಯವನ್ನು ನಿರ್ಮಿಸಿ, ಸಾರ್ವಜನಿಕರ ಮತ್ತು ಮಕ್ಕಳು ಪರಸ್ಪರ ವಿಭಿನ್ನ ಚಟುವಟಿಕೆಗಳು, ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸುವುದನ್ನು ಪ್ರೋತ್ಸಾಹಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ತುಮಕೂರು ಮಹಾನಗರ ಪಾಲಿಕೆ, ವಿನಾಯಕ ಸೈಕಲ್ ಶಾಪ್, Subಟime ಅಚಿmಠಿs, Wheeಟs ಚಿಟಿಜ ಈಡಿಚಿm ಸಿದ್ಧಗಂಗಾ ಆಸ್ಪತ್ರೆ, ಪ್ರಾಣವಲಯ ಅಕಾಡೆಮಿ ಮತ್ತು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಮಕ್ಕಳಿಗಾಗಿ ಉಚಿತ ಸೈಕಲ್ ಸವಾರಿಯನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ‘ಸೈಕಲ್ ದಿನ’ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದರು.