ತುಮಕೂರು


ವಿಶ್ವವಿದ್ಯಾನಿಯದಿಂದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅಧ್ಯಯನಕ್ಕಾಗಿ ವಿವಿಧ ವಿಶ್ವವಿದ್ಯಾನಿಲಯಗಳ ಭೇಟಿ ಮಾಡುವ ನಿಟ್ಟಿನಲ್ಲಿ ಸಿಂಡಿಕೇಟ್ ಸದಸ್ಯರು ಉತ್ತರಕಾಂಡ್ ನ ಡೂನ್ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ್ದಾರೆ. ಡೂನ್ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಮಂಗಲ್ ಸಿಂಗ್ ಮಂಡ್ರವಾಲ್ ಅವರನ್ನು ಭೇಟಿಮಾಡಿ ಹಲವು ಆಡಳಿತಾತ್ಮಕ ವಿಷಯಗಳ ಬಗ್ಗೆ ಸುದೀರ್ಘವಾದ ಚರ್ಚೆಯನ್ನು ನಡೆಸಿ ನಂತರ ಕುಲಪತಿಗಳಾದ ಪ್ರೊ. ಸುರೇಖ ದಂಗ್‍ವಾಲ್ ಅವರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ಬೋಧಕ ಸಿಬ್ಬಂದಿ ಮತ್ತು ಪ್ರಾಚಾರ್ಯರನ್ನೊಳಗೊಂಡ ವಿಶೇಷ ಸಭೆಯನ್ನು ಕರೆದು ಶೈಕ್ಷಣಿಕ ಮತ್ತು ಆಡಳಿತಾತ್ಮಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಪೂರ್ಣ ಕಾಲಿಕ ಪ್ರಾಧ್ಯಾಪಕರು ಸೇರಿದಂತೆ ವಿಶ್ವವಿದ್ಯಾನಿಲಯದ ಬೋಧಕ ಬೋಧಕೇತರ ಸಿಬ್ಬಂಧಿಗೆ ಕಲ್ಪಿಸಿರುವ ಸೌಲಭ್ಯಗಳು, ವಿಶ್ವವಿದ್ಯಾನಿಲಯದಲ್ಲಿನ ಕ್ರೀಡಾ ಚಟುವಟಿಕೆಗಳು ಮತ್ತು ಅವುಗಳಿಗೆ ಸಂಬಂಧಿಸಿದಂತಹ ಮೂಲಭೂತ ಸೌಕರ್ಯಗಳು ಸೇರದಂತೆ ತಂತ್ರಾಂಶಗಳನ್ನು ಉನ್ನತೀಕರಿಸಿ ಬಳಸಿಕೊಂಡಿರುವ ಬಗ್ಗೆ, ವಿಶ್ವವಿದ್ಯಾನಿಲಯದ ಒಟ್ಟಾರೆ ಆಡಳಿತವನ್ನು ಕೇಂದ್ರೀಕೃತವಾಗಿ ನಿರ್ವಹಣೆ ಮಾಡುತ್ತಿರುವ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ವಿಭಾಗಗಳ ಮುಖ್ಯಸ್ಥರೊಂದಿಗೆ ಪ್ರತ್ಯೇಕವಾಗಿ ಸಮಿತಿಯ ಸದಸ್ಯರು ಚರ್ಚಿಸಿ ಮಾಹಿತಿಯನ್ನು ಸಂಗ್ರಹಿಸಿದರು. ಇದೇ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಹಲವು ಯೋಜನೆಗಳ ಬಗ್ಗೆ ಸಿಂಡಿಕೇಟ್ ಸದಸ್ಯರು ಸಭೆಗೆ ತಿಳಿಸಿದರು. ತುಮಕೂರು ವಿಶ್ವವಿದ್ಯಾನಿಯದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಮಾಸಿಕ ಫೆಲೋಶಿಪ್ ಕುರಿತು ಎಲ್ಲರು ಪ್ರಶಂಸೆಯನ್ನು ವ್ಯಕ್ತಪಡಿಸಿದರು

.
ಡೂನ್ ವಿಶ್ವವಿದ್ಯಾನಿಲಯದಲ್ಲಿ ತಾಂತ್ರಿಕ ಕೋರ್ಸ್‍ಗಳನ್ನು ಸ್ಕೂಲ್ ಆಫ್ ಟೆಕ್ನಿಕಲ್ ಎಜುಕೇಷನ್ ಎಂಬ ಹೆಸರಿಲ್ಲಿ ಪ್ರಾರಂಭಿಸಿರುವ ಬಗ್ಗೆ ಮಾಹಿತಿಯನ್ನು ಪಡೆಯಿತು. ಅಲ್ಲಿನ ಒಟ್ಟಾರೆ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚಿಸಲಾಯಿತು. ವಿಶ್ವವಿದ್ಯಾಲಯದಲ್ಲಿ ಭೋದಕ ಭೋದಕೇತರ ಸಿಬ್ಬಂದಿಗಳಿಗೆ ನೀಡಿರುವ ಸೌಲಭ್ಯಗಳು, ಸ್ಟೂಡೆಂಟ್ ಮಾನಿಟರಿಂಗ್ ಸಿಸ್ಟಮ್, ಗ್ರಂಥಾಲಯ ಉನ್ನತೀಕರಣದ ಮಾಹಿತಿ ಸೇರಿದಂತೆ 55 ಎಕರೆ ವಿಸ್ತೀರ್ಣದಲ್ಲಿ ಸ್ಥಾಪಿತವಾಗಿರುವ ಡೂನ್ ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭಿಸಿರುವ ಹೊಸ ಹೊಸ ಕೋರ್ಸ್‍ಗಳ ಬಗ್ಗೆ ಅಧ್ಯಯನ ನಡೆಸಿದ ಸಮಿತಿಯು ಪ್ರಯೋಗಾಲಯ, ಗ್ರಂಥಾಲಯ, ಸಂಶೋಧನೆ ಮತ್ತು ನಾಟಕ ರಂಗಕಲೆಯ ವಿಭಾಗಗಳಿಗೆ ಭೇಟಿ ನೀಡಿತು, ಹಾಗೆಯೇ ವಿಶ್ವವಿದ್ಯಾನಿಲಯಕ್ಕೆ ದೊರಕಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ, ರೂಸಾ ಅನುದಾನ ಮತ್ತು ಯುಜಿಸಿಯ ಅನುದಾನಗಳ ಬಗ್ಗೆಯೂ ಚರ್ಚೆ ನಡೆಸಿ 2005ರಲ್ಲಿ ಪ್ರಾರಂಭವಾದ ಡೂನ್ ವಿಶ್ವವಿದ್ಯಾನಿಲಯದ ಎಲ್ಲಾ ವಿಷಯಗಳ ಬಗ್ಗೆ ಕೂಲಂಕುಶವಾಗಿ ಚರ್ಚಿಸಿ ಸಮಿತಿಯು ಮಾಹಿತಿಯನ್ನು ಸದಸ್ಯರು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ಕಡಿಮೆ ಅವಧಿಯಲ್ಲಿ ಉತ್ತಮವಾದ ಮಾದರಿ ವಿಶ್ವವಿದ್ಯಾನಿಲಯವನ್ನು ಡೂನ್ ನಲ್ಲಿ ಕಾಣಬಹುದಾಗಿದ್ದು ಶೈಕ್ಷಣಿಕ ಕ್ಷೇತ್ರದಲ್ಲಿರುವವರು ಒಮ್ಮೆಯಾದರೂ ಭೇಟಿ ನೀಡಬೇಕು ಎಂದು ಸಮಿತಿಯ ಸದಸ್ಯರಾದ ಟಿ.ಎಸ್. ಸುನಿಲ್ ಪ್ರಸಾದ್ ಮತ್ತು ರಾಜುರವರು ತಿಳಿಸಿದ್ದಾರೆ.
ಭೇಟಿ ಸಂದರ್ಭದಲ್ಲಿ ಸಮಿತಿಯು ಡೂನ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಡಾ. ರಾಜರ್ಷಿ ಮಜುಂದಾರ್, ಜೈವಿಕ ವಿಜ್ಞಾನ ವಿಭಾಗದ ಅಖಿಲೇಶ್ ದವೇರಿಯಾ, ಪರಿಸರ ವಿಜ್ಞಾನ ವಿಭಾಗದ ಡಾ. ಶ್ರೀಧರ್, ಭೌತಶಾಸ್ತ್ರ ವಿಭಾಗದ ಡಾ. ಹಿಮಾನಿ, ವಿದೇಶಿ ಭಾಷಾ ಕಲಿಕಾ ವಿಭಾಗದ ಮುಖ್ಯಸ್ಥರಾದ ಡಾ. ಚೇತನ್ ಪೊಕ್ರಿಯಾಲ್, ಡಾ. ಅರುಣ್ ಕುಮಾರ್, ಡಾ. ವಿಕಾಸ್ ಶರ್ಮ, ಡಾ. ಪ್ರೀತಿ ಮಿಶ್ರ ಸೇರಿದಂತೆ ವಿವಿಧ ವಿಭಾಗದ ಅಧ್ಯಾಪಕರು, ವಿಜ್ಞಾನಿಗಳನ್ನು ಭೇಟಿ ಮಾಡಿ ಶೈಕ್ಷಣಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಈ ಸಮಿತಿಯಲ್ಲಿ ತುಮಕೂರು ಸಿಂಡಿಕೇಟ್ ಸದಸ್ಯರಾದ ಟಿ.ಎಸ್. ಸುನೀಲ್ ಪ್ರಸಾದ್, ಪ್ರಸನ್ನ ಕುಮಾರ್, ರಾಜು, ರಾಜುಲೋಚನ, ದೇವರಾಜು, ಮಲ್ಲಿಕಾರ್ಜುನ ಪಾಟೀಲ್ ಮತ್ತು ಉಪ-ಕುಲಸಚಿವರಾದ ಡಾ. ಸುರೇಶ್ ತೆರಳಿದ್ದಾರೆ.

(Visited 11 times, 1 visits today)