ತುಮಕೂರು


ತುಮಕೂರು ತಾಲ್ಲೂಕಿನ ಹೆಬ್ಬಾಕದಲ್ಲಿ ವಾರದಿಂದ ಬಿದ್ದ ಮಳೆಗೆ ಮನೆಯೊಂದು ಕುಸಿದು ಬಿದ್ದ ಪರಿಣಾಮ ಕುಟುಂಬವೊಂದು ಬೀದಿ ಪಾಲಾದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ ನಿರ್¯ಕ್ಷ್ಯ ತೋರಿದ್ದರಿಂದ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ತುಮಕೂರು ತಾಲ್ಲೂಕಿನ ದಲಿತ ಕಾಲೋನಿಯ ದೊಡ್ಡಯ್ಯ ಮತ್ತು ಲಕ್ಷ್ಮಮ್ಮ ಅವರ ಮನೆಯು ವಾರದಿಂದ ಬಿದ್ದ ವಿಪರೀತ ಮಳೆಗೆ ಮಂಗಳವಾರ ರಾತ್ರಿ ಕುಸಿದು ಬಿದಿದ್ದು, ದಂಪತಿಗಳಿಬ್ಬರು ಆ ರಾತ್ರಿ ಮಗನ ಮನೆಗೆ ಹೋಗಿದ್ದರಿಂದ ಪ್ರಾಣಾಪಯದಿಂದ ಪಾರಾಗಿದ್ದಾರೆ.
ಮಂಗಳವಾರ ರಾತ್ರಿಯೇ ಮನೆ ಕುಸಿದಿದ್ದರೂ, ಈ ಸಂಬಂಧ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದರೂ ಇದುವರೆವಿಗೂ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ದಂಪತಿಗಳಿಬ್ಬರೂ ಈಗ ಬೀದಿ ಪಾಲಾಗಿದ್ದು, ಮನೆಯ ವಸ್ತುಗಳೆಲ್ಲಾ ಮಣ್ಣಿನಡಿಯಲ್ಲಿ ಸೇರಿ ಹೋಗಿವೆ.
ಸಂಬಂಧ ಪಟ್ಟ ಅಧಿಕಾರಿಗಳು ಬುಧವಾರ ಬೆಳಿಗ್ಗೆಯಿಂದ ಸ್ಥಳಕ್ಕೆ ಆಗ ಬರುತ್ತೇವೆ-ಈಗ ಬರುತ್ತೇವೆ ಎಂದು ಕಾಲ ದೂಡುತ್ತಿದ್ದಾರೆ.
ಜಿಲ್ಲಾಧಿಕಾರಿಗಳು ಎಲ್ಲಿಯೇ ಮಳೆಗೆ ಅನಾಹುತ ಸಂಬಂಧಿಸಿರೂ ಕೂಡಲೇ ಸ್ಪಂಧಿಸಲು ಸೂಚಿಸಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ ನಿರ್ಲಕ್ಷ್ಯ ತೋರಿದ್ದರಿಂದ ದೊಡ್ಡಯ್ಯ ಮತ್ತು ಲಕ್ಷ್ಮಮ್ಮ ಬೀದಿಪಾಲಾಗಿದ್ದಾರೆ. ಅವರಿಗೆ ಅಧಿಕಾರಿಗಳು ಕನಿಷ್ಟ ಭೇಟಿ ನೀಡಿ ಧೈರ್ಯ ತುಂಬುವ ಕೆಲಸವನ್ನೂ ಮಾಡಿಲ್ಲ.
ಇದೂವರೆವಿಗೂ ಯಾವ ಜನಪ್ರತಿನಿಧಿಗಳು ಸಹ ಸ್ಥಳಕ್ಕೆ ಭೇಟಿ ನೀಡಿಲ್ಲ.

 

(Visited 1 times, 1 visits today)