ತುಮಕೂರು
ಘನ ಕರ್ನಾಟಕ ಸರ್ಕಾರ ವಿವಿಧ ಅಭಿವೃದ್ಧಿ ನಿಗಮಗಳ ಅನೇಕ ಯೋಜನೆಗಳನ್ನು ಘೋಷಣೆ ಮಾಡಿ ಆಯಾ ವರ್ಗ, ಸಮುದಾಯದ ವಿದ್ಯಾವಂತ ನಿರುದ್ಯೋಗ ಯುವಕ ಯುವತಿಯರಿಗೆ ಉಪ-ಜೀವನ ನಿರ್ವಹಣೆಗಾಗಿ ಸಹಕಾರ ನೀಡಿದ್ದು ಸಮೃದ್ಧಿ ಯೋಜನೆ ನಿರುದ್ಯೋಗ ಯುವಕ ಯುವತಿಯರಿಗೆ ಉಪಜೀವನ ಕಟ್ಟಿಕೊಳ್ಳುವಲ್ಲಿ ಸಹಕಾರಿಯಾಗಲಿದ್ದು ಇದನ್ನು ಸದ್ಬಳಕೆ ಮಾಡಿಕೊಂಡು ಪರಿಶಿಷ್ಟ ಜಾತಿಯ ಯುವಕ-ಯುವತಿಯರು ಆರ್ಥಿಕವಾಗಿ ಸಬಲೀಕರಣ ಹೊಂದಬೇಕು ಎಂದು ನಗರ ಶಾಸಕ ಜ್ಯೋತಿ ಗಣೇಶ್ ಅವರು ತಿಳಿಸಿದರು.
ನಗರದ ರೈಲ್ವೆ ಸ್ಟೇಷನ್ ರಸ್ತೆಯ ಪ್ರಥಮ ದರ್ಜೆ ಕಾಲೇಜುಗಳ ಬಳಿ ಆದಿಜಾಂಬವ ಅಭಿವೃದ್ಧಿ ನಿಗಮದಿಂದ ಸಮೃದ್ಧಿ ಯೋಜನೆಯಡಿ ಮಂಜೂರಾದ ಮಿಲ್ಕ್ ವೇ ಎಕ್ಸ್‍ಪ್ರೆಸ್ ಫ್ರಾಂಚೈಸಿಯನ್ನ ಉದ್ಘಾಟಿನೆ ಮಾಡಿ ನಂತರ ಮಾತನಾಡಿದ ಶಾಸಕರು ಮರಳೂರಿನ ಫಲಾನುಭವಿ ಶ್ರೀಕಾಂತ ಬಿನ್ ಕೋದಂಡರಾಮ ಎನ್ನುವವರು 2018- 19 ನೇ ಸಾಲಿನಲ್ಲಿ ಸಮೃದ್ಧಿ ಯೋಜನೆಯಡಿ ಅರ್ಜಿ ಸಲ್ಲಿಸಿ ಅರ್ಹತೆ ಆಧಾರದ ಮೇಲೆ ಸರ್ಕಾರ ಮಟ್ಟದಲ್ಲಿ ಫಲಾನುಭವಿಯಾಗಿ ಆಯ್ಕೆಯಾಗಿ ಜೀವನ ರೂಪಿಸಿಕೊಳ್ಳಲು ಸರಬರಾಜು ಫ್ರಾಂಚೈಸಿಯನ್ನು ಆಯ್ಕೆ ಮಾಡಿಕೊಂಡಿಕೊಂಡಿದ್ದಾರೆ. ಆದಿಜಾಂಬವ ಅಭಿವೃದ್ಧಿ ನಿಗಮವು ಫಲಾನುಭವಿಯ ಪ್ರಾಂಚೈಸಿ ಹೆಸರಿಗೆ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಜಯರಾಮಯ್ಯ ಸಮೃದ್ಧಿ ಯೋಜನೆಯನ್ನು ಸರ್ಕಾರವು ವಿದ್ಯಾವಂತ ಯುವಕ ಯುವತಿಯರಿಗಾಗಿ ರೂಪಿಸಿದ್ದು ಇದರ ಫಲ ಪಡೆದುಕೊಂಡು ಉಪಜೀವನ ಸಾಗಿಸಬಹುದು ಇನ್ನು ನಿಗಮದಲ್ಲಿ 2022-23ನೇ ಸಾಲಿನಲ್ಲಿ ನಿಗಮದಿಂದ ಸೌಲಭ್ಯ ಪಡೆಯಲು ಯೋಜನೆಯ ಅನುಗುಣವಾಗಿ ಆನ್ಲೈನ್ ಮುಖಾಂತರ ಈಗಾಗಲೇ ಗಂಗಾಕಲ್ಯಾಣ ಸ್ವಯಂ ಉದ್ಯೋಗ ನೇರ ಸಾಲ ಉದ್ಯಮಶೀಲತೆ ಸ್ತ್ರೀ ಶಕ್ತಿ ಸಂಘಗಳ ಗುಂಪುಗಳಿಗೆ ಮೈಕ್ರೋ ಫೈನಾನ್ಸ್ ಕೀರು ಸಾಲ ನೀಡಲಾಗುತ್ತಿದ್ದು ಇದರ ಸದುಪಯೋಗವನ್ನು ಆದಿಜಾಂಬವ ಅಭಿವೃದ್ಧಿ ನಿಗಮ ವ್ಯಾಪ್ತಿಗೆ ಬರುವ ಉಪಜಾತಿಗಳು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಸರ್ಕಾರ ಇತ್ತೀಚೆಗೆ ಉದ್ಯಮ ಶೀಲತೆ ಯೋಜನೆ 3ರ ಅಡಿಯಲ್ಲಿ ಇ-ಕಾಮರ್ಸ್ ಎಂಬ ನೂತನ ಯೋಜನೆಯನ್ನು ಜಾರಿಗೆ ತಂದಿದ್ದು ನಿರುದ್ಯೋಗ ಯುವಕ-ಯುವತಿಯರು ಆನ್ಲೈನ್ ಮೂಲಕ ಮನೆ ಮನೆಗೆ ಔಷಧಿ, ದಿನಸಿ ಸೇರಿದಂತೆ ಇತರೆ ವಸ್ತುಗಳ ಸರಬರಾಜು ಮಾಡಲು ನಿಗಮದಿಂದ 50 ಸಾವಿರ ರೂಗಳ ಸಹಾಯಧನವನ್ನು ನೀಡಲಾಗುವುದು ಎಂದರು.
ಎಲ್ಲಾ ಯೋಜನೆಯ ಸೌಲಭ್ಯ ಪಡೆಯಲು ಆಯಾ ವಿಧಾನಸಭಾ ಕ್ಷೇತ್ರದ ಶಾಸಕರುಗಳು ಅಧ್ಯಕ್ಷರಾಗಿ ಆಯ್ಕೆ ಮಾಡುತ್ತಾರೆ, ಈ ಸಂದರ್ಭದಲ್ಲಿ ತಾಲೂಕು ಅಭಿವೃದ್ಧಿ ಅಧಿಕಾರಿ ಕೆಎಂ ಮಧುಸೂಧನ್ ಇತರರು ಉಪಸ್ಥಿತರಿದ್ದರು.