ತುರುವೇಕೆರೆ


ಹತ್ತು ಹದಿನೈದು ವರ್ಷಗಳಿಂದ ಹಿಡಿದಿದ್ದ ಶನಿಯು ನಾಲ್ಕು ವರ್ಷಗಳ ಹಿಂದೆ ಬಿಟ್ಟಿರುವ ಕಾರಣ ತಾಲೂಕು ಅಭಿವೃದ್ದಿ ಹೊಂದಿದೆ ಎಂದು ತುರುವೇಕೆರೆ ಕ್ಷೇತ್ರ ಶಾಸಕ ಮಸಾಲೆ ಜಯರಾಮ್ ತಿಳಿಸಿದರು
ತಾಲೂಕಿನ ಕುಣಾಘಟ್ಟ ಗೊಲ್ಲರಹಟ್ಟಿ ಗ್ರಾಮದಲ್ಲಿ ರಸ್ತೆ ಗುದ್ದಲಿ ಪೂಜೆ ಹಾಗೂ ಜಲ್ ಜೀವನ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ನರೇಂದ್ರ ಮೋದಿಯವರ ಕನಸಿನ ಜಲ್ ಜೀವನ್ ಕಾಮಗಾರಿಗಳನ್ನು 6ಕೋಟಿ ವೆಚ್ಚದಲ್ಲಿ ಇಡಿ ತುರುವೇಕೆರೆ ಕ್ಷೇತ್ರಕ್ಕೆ ಸಮಾನವಾಗಿ ಯೋಜನೆಯನ್ನು ರೂಪಿಲಾಗಿದೆ ಎಂದು ತಿಳಿಸಿದ ಅವರು ತಾಲೂಕಿನಲ್ಲಿ 72ಗೊಲ್ಲರಹಟ್ಟಿಗಳು ಇದ್ದು, ಇಲ್ಲಿಯವರೆವಿಗೂ ಗೆದ್ದಂತಹ ಜನಪ್ರತಿನಿಧಿಗಳು ಗೊಲ್ಲರ ಹಟ್ಟಿಗಳಿಗೆ ಯಾವುದೇ ಸೌಲಭ್ಯ ನೀಡದೆ ಅವರನ್ನು ಕತ್ತಲೆಯಲ್ಲಿ ಇರುವಂತೆ ಮಾಡಿರುವುದು ವಿಷಾದನೀಯ ನನ್ನ ಅವಧಿಯ ನಾಲ್ಕು ವರ್ಷ ಅವಧಿಯಲ್ಲೇ ಗೊಲ್ಲರ ಹಟ್ಟಿಗಳಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದರಿಂದ ತಳಮಟ್ಟದ ಸಮುದಾಯಕ್ಕೂ ಎಲ್ಲಾ ಸೌಲಭ್ಯಗಳನ್ನು ನನ್ನ ಅವಧಿಯಲ್ಲಿ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ನನ್ನ ತಾಲೂಕಿನ ಕಲ್ಲೂರು ಕಲ್ಲೂರು ಕ್ರಾಸ್, ದಂಡಿನಶಿರ, ಬನಸಂದ್ರ ಗ್ರಾಮಗಳ ಅಭಿವೃದ್ಧಿಗೆ 25 ಕೋಟಿ ಅನುದಾನ ಬಿಡುಗಡೆ ಆಗಿದ್ದು ಇದರಿಂದ 150 ಹಳ್ಳಿಗಳಿಗೆ ಸಂಪರ್ಕವನ್ನು ಕಲ್ಪಿಸಿದಂತಾಗಿದೆ ಎಂದು ತಿಳಿಸಿದ ಅವರು ನಿಟ್ಟೂರು, ಟಿ ಬಿ ಕ್ರಾಸ್ ರಸ್ತೆಯು ಸುಸ್ಥಿತಿಯಲ್ಲಿದ್ದು ಇದರಿಂದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಸಿ.ಎಸ್.ಪುರ ನಾಡ ಕಚೇರಿಗೆ ಈಗಾಗಲೇ ಜಮೀನು ಮಂಜೂರಾಗಿದ್ದು ನೂತನ ಕಟ್ಟಡಕ್ಕೆ ಶಾಸಕರ ಅಭಿವೃದ್ಧಿ ಅನುದಾನದಿಂದ ಶೀಘ್ರವೇ ಕಟ್ಟಡವನ್ನು ನಿರ್ಮಿಸಲಾಗುವುದು ಎಂದು ತಿಳಿಸಿದ ಅವರು ಕಲ್ಲೂರು ಗ್ರಾಮ ಹಾಗೂ ಸುತ್ತಮುತ್ತಲಿನ ಜನತೆಯ ಆರೋಗ್ಯಕ್ಕೆ ಈಗಿರುವ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವ ಮುಖೇನ ಹೊಸ ಕಟ್ಟಡವನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಅಡಿಕೆ ಬೆಳೆಗಾರರು ಯಾವುದೇ ಸಂಕಷ್ಟಕ್ಕೆ ಬಲಿಯಾಗಬಾರದೆಂಬ ಕಾರಣಕ್ಕೆ ಆಮದು ಅಡಿಕೆಯನ್ನು ತರಿಸಿಕೊಳ್ಳುತ್ತಾರೆ ಎಂಬ ಸುಳ್ಳು ವದಂತಿಗೆ ಕಿವಿ ಕೊಡಬಾರದೆಂದು ರೈತರಲ್ಲಿ ಮನವಿ ಮಾಡಿದ ಅವರು ತಾಲೂಕಿನಲ್ಲಿ ಬಗರು ಹೂಕ್ಕುಂ ಸಭೆಗಳನ್ನು ನಡೆಸಿದ್ದು 2005ರಲ್ಲಿ ಬೋಗಸ್ ಅರ್ಜಿಗಳನ್ನು ಪಡೆದಿದ್ದ ಕಾರಣ ಮುಂದಿನ ದಿನಗಳಲ್ಲಿ ಅರ್ಹ ಫಲಾನುಭವಿಗಳಿಗೆ ಉಳುಮೆ ಚೀಟಿಯನ್ನು ವಿತರಿಸಲಾಗುವುದು ಎಂದ ಅವರು ಈಗಾಗಲೇ ಸ್ಥಳದಲ್ಲಿರುವ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು
ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಶಾಸಕ ಮಸಾಲೆ ಜಯರಾಮ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗರಾಜ್, ಸದಸ್ಯ ಇರ್ಫಾನ್, ಗ್ರಾ. ಪಂ.ಮಾಜಿ ಸದಸ್ಯ ಯೋಗೀಶ್, ಸತೀಶ್, ಮುಖಂಡರಾದ ದಿಲೀಪ್, ಅಣ್ಣಯ್ಯ, ಗಂಗಾಧರ್, ನರಸಿಂಹನ್, ನಾಗಣ್ಣ, ನಟರಾಜ್, ತಿಮ್ಮೇಗೌಡ, ದಯಾನಂದ್, ಉಸ್ಥಿತರಿದ್ದರು.

(Visited 4 times, 1 visits today)