ತುಮಕೂರು 

ಬೆಂಕಿಯೊಂದಿಗೆ ಸರಸ ಆಡಬೇಡಿ ಎಂದು ಆಗಾಗ ಹೇಳಲಾಗುತ್ತದೆ . ಆದರೆ , ಸಾಹಸದ ಹೆಸರಿನಲ್ಲಿ ಯುವಕರು ದುಸ್ಸಾಹಸಕ್ಕೆ ಇಳಿಯುವುದು ಮುಂದುವರಿಯುತ್ತಲೇ ಇದೆ . ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ದಂಡಿನಶಿವರದಲ್ಲಿ ಗಣಪತಿ ವಿಸರ್ಜನೆ ವೇಳೆ ಬಾಯಿಯಿಂದ ಬೆಂಕಿ ಉಗುಳಲು ಹೋಗಿ ಯುವಕನೊಬ್ಬ ಗಂಭೀರ ಗಾಯಗೊಂಡಿದ್ದಾನೆ .

ಮೆರವಣಿಗೆ ವೇಳೆ ಹೀಗೆ ಬೆಂಕಿಯಾಟ ಆಡುವುದು ಸಾಮಾನ್ಯ . ಆದರೆ , ಅದಕ್ಕೆ ಸಾಕಷ್ಟು ಪೂರ್ವ ಸಿದ್ಧತೆ , ತಾಲೀಮು ಬೇಕಾಗುತ್ತದೆ . ಈ ಯುವಕ ಬೆಂಕಿಯ ಪಂಜಿಗೆ ಪೆಟ್ರೋಲ್ ಉಗುಳುವ ವೇಳೆ ಅವಾಂತರ ಮಾಡಿಕೊಂಡಿದ್ದಾನೆ . ಬಾಯಿಯಿಂದ ಪೆಟ್ರೋಲ್ ಉಗುಳಿದಾಗ ಅದು ಬೆಂಕಿಗೆ ತಗುಲಿ ಮತ್ತೆ ಮುಖಕ್ಕೆ ಬಂದು ಬಡಿದಿದೆ . ಯುವಕನ ಮುಖ ಮತ್ತು ಎದೆಗೆ ಬೆಂಕಿ ತಗುಲಿದೆ . ಬೆಂಕಿ ಹೊತ್ತಿಕೊಳುತಿದ್ದಂತೆ ಸ್ಥಳೀಯರು ಧಾವಿಸಿದರು . ಯುವಕ ಕೂಡಾ ಕೂಡಲೇ ಪಂಜು ಎಸೆದಿದ್ದಾನೆ . ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ . ಗ್ರಾಮದ ಗಣಪತಿ ವಿಸರ್ಜನೆ ಮೆರವಣಿಗೆಗೆ ಕೀಲು ಕುದುರೆ , ಡೊಳ್ಳು ಕುಣಿತದ ತಂಡವನ್ನು ಕರೆಸಲಾಗಿತ್ತು . ಯುವಕ ಕೀಲು ಕುದುರೆ ತಂಡದೊಂದಿಗೆ ಬಂದಿದ್ದ . ದಂಡಿನಶಿವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

(Visited 3 times, 1 visits today)