ತುಮಕೂರು
ಕರ್ನಾಟಕ ಸರ್ಕಾರ ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಅನಾವರಣದ ಪ್ರಯುಕ್ತ ರಾಜ್ಯದ ಎಲ್ಲೆಡೆಯಿಂದ ಪವಿತ್ರ ಮೃತ್ತಿಕೆ(ಮಣ್ಣು) ಸಂಗ್ರಹ ಅಭಿಯಾನದ ರಥಕ್ಕೆ ಎರಡನೇ ದಿನವಾದ ಬುಧವಾರ ತುಮಕೂರು ಗ್ರಾಮಾಂತರ ಬೆಳಗುಂಬ ಗ್ರಾಮದ ಇತಿಹಾಸ ಪ್ರಸಿದ್ಧವಾದ ಶ್ರೀ ಗುರುಸಿದ್ದರಾಮೇಶ್ವರ ದೇವರಿಗೆ ಪೂಜೆ ಸಲ್ಲಿಸಿದ ತುಮಕೂರು ಗ್ರಾಮಾಂತರ ಮಾಜಿ ಶಾಸಕರಾದ ಶ್ರೀ ಬಿ.ಸುರೇಶ್ ಗೌಡರವರು ಚಾಲನೆ ನೀಡಿದರು.
ಬೆಳಗುಂಬ ದೇವಾಲಯದ ಬಳಿ ಹೂವಿನಿಂದ ಅಲಂಕೃತವಾದ ಮೃತ್ತಿಕೆ ಸಂಗ್ರಹಿಸುವ ಕೆಂಪೇಗೌಡ ರಥಕ್ಕೆ ಗ್ರಾಮದವರು ಪೂಜೆ ಸಲ್ಲಿಸಿದರು. ಬನ್ನಿ ನಾಡ ಕಟ್ಟೋಣ ಎಂಬ ಸಂದೇಶ ಹೊತ್ತು ಬಂದ ರಥವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ಗಳಾದ ಸಿದ್ದರಾಜು,ಮಂಜಣ್ಣ ಸಿದ್ದೇಗೌಡ್ರು, ಲೋಕೇಶ್, ಗಂಗಾಂಜುನಯ್ಯ,ಚಿಗರಿ, ಸುರೇಶ್, ರಾಮಚಂದ್ರಯ್ಯ,ಇನ್ನೂ ಮುಂತಾದ ಮುಖಂಡರು ಮತ್ತು ತುಮಕೂರು ಗ್ರಾಮಾಂತರ ಆರಕ್ಷಕ ನಿರೀಕ್ಷಕ ಪ್ರಸನ್ನ ಕುಮಾರ್ ಮತ್ತು ತಾಲ್ಲೂಕು ಪಂಚಾಯತಿ ಅಧಿಕಾರಿ ಜೈಪಾಲ್ ಇಲಾಖೆಯ ಸಿಬ್ಬಂದಿ ಗಳು,ಕಂದಾಯ ಇಲಾಖೆಯ ಅಧಿಕಾರಿಗಳು , ಸಮುದಾಯದ ಮಹಿಳೆಯರು,ಪುಟಾಣಿ ಮಕ್ಕಳು, ಸಾರ್ವಜನಿಕರು ಭವ್ಯವಾಗಿ ಪೂರ್ಣ ಕುಂಬದೊಂದಿಗೆ ರಥವನ್ನು ಸ್ವಾಗತಿಸಿದರು.
ನಂತರ ಸೀತಕಲ್ಲು,ಊರ್ಡಿಗೆರೆ,ಅರೆಗುಜ್ಜನಹಳ್ಳಿ, ಹಿರೇಹಳ್ಳಿ ,ಕೆಸರುಮಡು, ಹರಳೂರು, ಇನ್ನಿತರ ಗ್ರಾಮಗಳಲ್ಲಿ ಸಾಗಿದ
ರಥಕ್ಕೆ ಪೂರ್ಣ ಕುಂಭ ಕಲಶ ಪೂಜೆ ಸಲ್ಲಿಸಿ ಮೃತ್ತಿಕೆ(ಮಣ್ಣು) ಸಂಗ್ರಹ ಕಾರ್ಯವನ್ನು ಮಾಡ ಲಾಯಿತು.
ಈ ವೇಳೆ ಹಾಜರಿದ್ದ ಜನಪ್ರತಿನಿಧಿಗಳು, ಅಧಿಕಾರಿಗಳು, ಸಮಾಜದ ಮುಖಂಡರು ಮೃತ್ತಿಕೆ
ಹಾಕುವ ಮೂಲಕ ಶ್ರೀ ಯುತರು ಎಲ್ಲಾ ಗ್ರಾಮಗಳಲ್ಲಿ ಗೌರವ ಸಲ್ಲಿಸಿದರು.
ಮೃತ್ತಿಕೆ ರಥದಲ್ಲಿ ಕೆಂಪೇಗೌಡರ ಕುರಿತು ಪ್ರಗತಿಯ ಪ್ರತಿಮೆ ಎಂಬ ಕಿರು ಚಿತ್ರದ ವೀಡಿಯೋ ಎರಡನೇ ದಿನವೂ ಸಹ ಪ್ರದರ್ಶನ ಮಾಡಲಾಯಿತು.