ತುಮಕೂರು


ಕಂಚುಗಲ್ ಬಂಡೆಮಠದ ಬಸವಲಿಂಗಶ್ರೀ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಬಂಡೆಮಠದಲ್ಲಿ ವೀರಶೈವ ಸಮುದಾಯ ಮುಖಂಡರ ಸಭೆ ಕರೆಯಲಾಗಿದೆ. ಮಠಕ್ಕೆ
ಸೇರಿದ ಆಸ್ತಿ, ಬ್ಯಾಂಕ್ ಲಾಕರ್ ನಲ್ಲಿ ಏನೆಲ್ಲ ಇದೆ. ಹಣಕಾಸು, ಮಠದ ಕಾರ್ಯನಿರ್ವಹಣೆ ಯಾರಿಗೆ ವಹಿಸಬೇಕುಮಠಕ್ಕೆ ಸಂಬಂಧಿಸಿದ ಇತರೆ ವಿಷಯಗಳ ಬಗ್ಗೆ ಚರ್ಚೆ ಮಾಡಲು ಸಿದ್ಧಗಂಗಾ ಮಠದ ಸಿದ್ದಲಿಂಗ ಶ್ರೀ ಸೂಚನೆ ಮೇರೆಗೆ ಸಭೆ ಆಯೋಜಿಸಲಾಗಿದೆ. ಬೆಂಗಳೂರು ಗುರುವಣ್ಣದೇವರ ಮಠದ ನಿಜಗುಣ ಸ್ವಾಮೀಜಿ, ನೆಲಮಂಗಲ ಪವಾಡ ಬಸವಣ್ಣ ದೇವರ ಮಠದ ಸ್ವಾಮೀಜಿ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಪರಮಶಿವಯ್ಯ, ಕೆಆರ್ ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್ ಸೇರಿ ಹಲವರು ಭಾಗಿಯಾಗಲಿದ್ದಾರೆ. ಸಿಎಸ್ ಪುಟ್ಟರಾಜು, ಮಾಜಿ ಉಪಪೌರರು, ಕೆಪಿ ಆನಂದ್ ನೆಲಮಂಗಲ ಪ್ರಾಧಿಕಾರ ಮಾಜಿ ಅಧ್ಯಕ್ಷ, ಹೇಮಂತ್ ಕುಮಾರ್ ಗ್ರಾಂ ಪಂ ಮಾಜಿ ಅಧ್ಯಕ್ಷ, ಬಿಎಂಟಿಸಿ ನಿರ್ದೇಶಕ ಕೆಪಿ ಭೃಗೇಶ್, ಮಠದ ಶಿಕ್ಷಕರು, ಅಕೌಂಟ್ ನೋಡುಕೊಳ್ಳುವವರು ಸಹ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಸಿದ್ದಗಂಗಾ ಶ್ರೀಗಳಿಗೆ ಹೇಗೆ ಮುಖ ತೋರಿಸಬೇಕು ಅಂತಾ ಹೀಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ಸುತ್ತೆ
ಬಂಡೇಮಠದ ಮುಂದಿನ ಆಗುಹೋಗುಗಳ ಬಗ್ಗೆ ಪರಮಶಿವಯ್ಯ ಅವರ ನೇತೃತ್ವದಲ್ಲಿ ಮುಂದುವರೆಯುವಂತೆ ಸಿದ್ದಗಂಗಾ ಶ್ರೀಗಳು ತಿಳಿಸಿದ್ದಾರೆ. ಮುಂದೆ ಆಗಬೇಕಾದ ಕಾರ್ಯದ ಬಗ್ಗೆ ಸಮಾಲೋಚನಾ ಸಭೆ ನಡೆಸಲಾಗುತ್ತಿದೆ. ಡೆತ್ ನೋಟ್ ಬಗ್ಗೆ ನಮಗೆ ಸರಿಯಾದ ಮಾಹಿತಿ ಇಲ್ಲ. ಈಗಾಗಲೇ ವಿಡಿಯೋ ವೈರಲ್ ಆದ ಬಗ್ಗೆ ಮಾಹಿತಿ ಬರ್ತಿದೆ. ಸದ್ಯ ಮಠದಲ್ಲಿ ಯಾವುದೇ ಸಮಸ್ಯೆಗಳು ಕಂಡು ಬರ್ತಿಲ್ಲ. ಸಿದ್ದಗಂಗಾ ಶ್ರೀಗಳು ಸೇರಿ ಎಲ್ಲರೂ ಏನ್ ತೀರ್ಮಾನ ಮಾಡ್ತಾರೋ ಅದಕ್ಕೆ ಎಲ್ಲರೂ ಬದ್ಧವಿರುತ್ತೇವೆ. ಬಸವಲಿಂಗ ಸ್ವಾಮಿಜಿಗಳೇ ಒಂದು ಕಮಿಟಿ ಮಾಡಿದರೂ ಆ ಕಮಿಟಿ ನಿರ್ಧಾರ ಮಾಡುತ್ತೆ. ಯಾರೋ ಸ್ವಾಮಿಜಿ ಹಿಂದೆ ಇದ್ದಾರೆ ಅನ್ನೋ ವಿಷಯ ನಮಗೂ ಸರಿಯಾಗಿ ಗೊತ್ತಿಲ್ಲ. ಸಮಾಜದ ಮುಖಂಡರು ಇದ್ದಾರೆ, ಸಚಿವರು ಇದ್ದಾರೆ ಅನ್ನೋ ಬಗ್ಗೆ ಮಾಧ್ಯಮಗಳಲ್ಲಿ ಬರ್ತಿದೆ. ಆ ಬಗ್ಗೆ ಮಾಹಿತಿಗಳು ನಮಗಿಲ್ಲ. ಮುಂದಿನ ದಿನಗಳಲ್ಲಿ ಎಲ್ಲಾ ಬಯಲಾಗತ್ತೆ. ಸಿದ್ದಗಂಗಾ ಶ್ರೀಗಳಿಗೆ ಹೇಗೆ ಮುಖ ತೋರಿಸಬೇಕು ಅಂತ ಹೀಗೆ ಮಾಡಿಕೊಂಡಿದ್ದಾರೆ ಅನ್ಸುತ್ತೆ. ಇವತ್ತು ಹಾಸ್ಟೇಲ್ ಗುದ್ದಲಿ ಪೂಜೆ ಮಾಡಬೇಕಾಗಿತ್ತು. ಹೀಗಾಗಿದೆ ಏನೂ ತಾನೇ ಗೊತ್ತಾಗ್ತಾ ಇಲ್ಲ ಎಂದು ಕೆಆರ್ ಐಡಿಎಲ್ ನ ಅಧ್ಯಕ್ಷ, ಮಠದ ಭಕ್ತ ಎಂ ರುದ್ರೇಶ್ ಬಂಡೇಮಠದಲ್ಲಿ ಹೇಳಿದ್ದಾರೆ.
ವಿಡಿಯೋ ಕಾಲ್ ಯುವತಿಗೆ ಪೆÇಲೀಸರಿಂದ ಗಾಳ:
ವಿಡಿಯೋ ಕಾಲ್ ಮಾಡಿರೋ ಯುವತಿಗೆ ಪೆÇಲೀಸರಿಂದ ಗಾಳ ಹಾಕಲಾಗಿದೆ. ಅಜ್ಞಾತ ಸ್ಥಳದಲ್ಲಿ ಮೂವರು ಯುವತಿಯರ ವಿಚಾರಣೆ ನಡೆದಿದ್ದು, ಮೂವರನ್ನೂ ಪೆÇಲೀಸರು ಪ್ರತ್ಯೇಕವಾಗಿ ವಿಚಾರಣೆ ಮಾಡಿದ್ದಾರೆ.
ಈ ಮಧ್ಯೆ, ಕುದೂರು ಠಾಣೆಯ ಪೆÇಲೀಸರು ಕಂಚುಗಲ್ ಬಂಡೆಮಠದ ಬಸವಲಿಂಗಶ್ರೀ ಆತ್ಮಹತ್ಯೆ ಪ್ರಕರಣದಲ್ಲಿ ವಿಚಾರಣೆ ತೀವ್ರಗೊಳಿಸಿದ್ದಾರೆ. ಈಗಾಗಲೇ ಕುದೂರು ಠಾಣೆಯಲ್ಲಿ ಐಪಿಸಿ 306 ರ ಅಡಿ ಕೇಸ್ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡು ಪೆÇಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಾರಂಭದಲ್ಲಿ ಯುಡಿಆರ್ ಮಾಡಿಕೊಂಡಿದ್ದ ಪೆÇಲೀಸರು, ಶಿಕ್ಷಕ ರಮೇಶ್ ದೂರಿನ ಆಧಾರದ ಮೇಲೆಯೂ ಎಫ್‍ಐಆರ್ ದಾಖಲು ಮಾಡಿದ್ದಾರೆ. ಇನ್ಸ್‍ಪೆಕ್ಟರ್ ಎ.ಪಿ.ಕುಮಾರ್ ನೇತೃತ್ವದಲ್ಲಿ ತನಿಖೆ ನಡೆದಿದ್ದು ಶ್ರೀಗಳ ಕಾಲ್ ಡಿಟೇಲ್ಸ್ ಪಡೆಯಲು ಮುಂದಾಗಿದ್ದಾರೆ. ತನಿಖಾ ವರದಿ ನಂತರ ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆಯಿದೆ. ಯಾರೆಲ್ಲ ವಿಡಿಯೋ ಕಾಲ್ ಮಾಡಿದ್ದರೂ ಎಂಬುದನ್ನೂ ತಿಳಿದುಕೊಳ್ಳಲು ಪೆÇಲೀಸರು ಮುಂದಾಗಿದ್ದಾರೆ.
ಇನ್ನು, ಬಸವಲಿಂಗಶ್ರೀ ಆತ್ಮಹತ್ಯೆ ಹಿನ್ನೆಲೆಯಲ್ಲಿ ಬಂಡೇಮಠದ ಕಡೆಯಿಂದ ದೂರು ದಾಖಲಾಗಿದೆ. ಪ್ರಕರಣ ಸಂಬಂಧ ರಾಮನಗರದಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಟಿವಿ9 ಗೆ ಹೇಳಿಕೆ ನೀಡಿದ್ದು, ಆತ್ಮಹತ್ಯೆ ಸ್ಥಳದಲ್ಲಿ 3 ಪುಟಗಳ ಡೆತ್‍ನೋಟ್ ಪತ್ತೆಯಾಗಿದೆ. ಡೆತ್‍ನೋಟ್‍ನಲ್ಲಿ ಹಲವು ವಿಚಾರ ಪ್ರಸ್ತಾಪ ಮಾಡಿದ್ದಾರೆ. ಡೆತ್‍ನೋಟ್‍ನಲ್ಲಿ ಕೆಲವು ವ್ಯಕ್ತಿಗಳ ಹೆಸರು ಉಲ್ಲೇಖ ಆಗಿದೆ. ತನಿಖೆಯ ದೃಷ್ಟಿಯಿಂದ ಅವರ ಹೆಸರನ್ನು ಬಹಿರಂಗಪಡಿಸಲ್ಲ. ಶ್ರೀಗಳು ಬಳಸುತ್ತಿದ್ದ 2 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದಿರುವ ಎರಡೂ ಮೊಬೈಲ್‍ಗಳು ಕೂಡ ಲಾಕ್ ಆಗಿವೆ. ನಮಗೆ ಸಿಕ್ಕ ಡೆತ್‍ನೋಟ್, ವೈರಲ್‍ಆದ ಫೆÇೀಟೋಗೂ ವ್ಯತ್ಯಾಸವಿದೆ. ಡೆತ್‍ನೋಟ್ ಸಿಕ್ಕಿ ನಮ್ಮ ಗಮನಕ್ಕೆ ತರದಿದ್ರೆ ಕೇಸ್ ಹಾಕ್ತೇವೆ. ಡೆತ್?ನೋಟ್?, ಮೊಬೈಲ್ ಫೆÇೀನ್ ಈSಐಗೆ ಕಳುಹಿಸಲಾಗುವುದು. ಮಠದ ಮೇಲೆ ಯಾರೂ ಸಂಶಯ ವ್ಯಕ್ತಪಡಿಸುತ್ತಿಲ್ಲ ಎಂದು ಹೇಳಿದ್ದಾರೆ.
ಶ್ರೀಗಳಿಗೆ ಇದ್ದ ಬೆದರಿಕೆ ಕರೆಗಳ ಬಗ್ಗೆ ಜನರು ಮಾತಾಡ್ತಿದ್ದಾರೆ. ಎಲ್ಲಾ ಆಯಾಮಗಳಲ್ಲೂ ಪ್ರಕರಣದ ತನಿಖೆ ಮಾಡುತ್ತಿದ್ದೇವೆ. ಸ್ವಾಮೀಜಿ ವಿಡಿಯೋ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಆತ್ಮಹತ್ಯೆಗೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಪ್ರಕರಣದ ತನಿಖೆ ಬಳಿಕ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ರಾಮನಗರದಲ್ಲಿ ಎಸ್?ಪಿ ಸಂತೋಷ್ ಬಾಬು ಹೇಳಿದ್ದಾರೆ.

(Visited 1 times, 1 visits today)