ತುಮಕೂರು
ಹಿಂದುಗಳು ಗೋವುಗಳಿಗೆ ಪೂಜೆ ಸಲ್ಲಿಸುವುದು ಪುರಾತನ ಕಾಲದಿಂದ ನಡೆದು ಬಂದಿರುವ ಸಂಸ್ಕøತಿಯ ಆಚರಣೆ ಎಂದು ಮಲ್ಲಸಂದ್ರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಆರ್ ಚಿಕ್ಕೇಗೌಡ ತಿಳಿಸಿದರು.
ತಾಲೂಕಿನ ಹಾಲನೂರು ಇತಿಹಾಸ ಪ್ರಸಿದ್ಧ ಮಲ್ಲೇಶ್ವರ ಸ್ವಾಮಿ ಮತ್ತು ಶ್ರೀ ಪಾರ್ವತಿ ದೇವಿ ದೇವಾಯದಲ್ಲಿ ಧಾರ್ಮಿಕ ದತ್ತಿ ಇಲಾಖೆ ಮತ್ತು ದೇಗುಲದ ಆಡಳಿತ ಮಂಡಳಿ ವತಿಯಿಂದ ಬುಧವಾರ ಬಲಿಪಾಂಡ್ಯಮಿಯಂದು ಗೋವುಗಳಿಗೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು,ಹಿಂದುಗಳ ಮನೆ ದೇವರು ಗೋವುಗಳು,ಹಲವಾರು ಸಮುದಾಯಗಳು ಪ್ರತಿ ಹಬ್ಬದಲ್ಲೂ ಇಂದಿಗೂ ಕೂಡ ಗೋವುಗಳನ್ನು ಪೂಜಿಸಿಕೊಂಡು ಬರುತ್ತಿದ್ದಾರೆ ಎಂದರು.
ಗೋವು ಪೂಜೆ ಮಾಡುವುದರಿಂದ ಮನೆಯಲ್ಲಿ ಧನ ಪ್ರಾಪ್ತಿ ಮತ್ತು ಮನೆಗಳಿಗೆ ಏಳಿಗೆ ಬರುತ್ತದೆ ಎಂಬುದು ಹಿರಿಯ ಅಭಿಪ್ರಾಯವಾಗಿದೆ.ಪುರಾತನ ಕಾಲದಿಂದಲೂ ಗೋವುಗಳಿಗೆ ಪೂಜೆ ಸಲ್ಲಿಸಿಕೊಂಡು ಬರಲಾಗುತ್ತಿದೆ . ಬಸವನ ಜಯಂತಿ,ಕಾರ ಹುಣ್ಣಿಮೆ ಸೇರಿದಂತೆ ಕೆಲ ಹಬ್ಬಗಳಲ್ಲಿ ಗೋವುಗಳನ್ನು ವಿಶೇಷವಾಗಿ ಪೂಜಿಸಲಾಗುತ್ತಿದೆ. ವಿಶೇಷವಾಗಿ ಧಾರ್ಮಿಕ ದತ್ತಿ ಇಲಾಖೆಯಿಂದ ದೇಗುಲದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸುವಂತೆ ಸೂಚಿಸಲಾಗಿದೆ.ಆದೇಶದಂತೆ ಮಲ್ಲೇಶ್ವರ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ, ಗೋವುಗಳ ಆಶೀರ್ವಾದ ಪಡೆಯಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಲ್ಲಸಂದ್ರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಆರ್ ಚಿಕ್ಕೇಗೌಡ,ಗ್ರಾಮ ಲೆಕ್ಕಾಧಿಕಾರಿ ಮುರುಳಿಧರ್,ದೇಗುಲದ ಜೀರ್ಣೋದ್ಧಾರ ಸಮಿತಿಯ ಸದಸ್ಯ ಹೆಚ್. ಪಂಚಾಕ್ಷರಯ್ಯ,ಗುತ್ತಿಗೆದಾರ ಉಮೇಶ್,ರಾಘವೇಂದ್ರ,ಗ್ರಾಮಸ್ಥರು ಮುಂತಾದವರು ಭಾಗವಹಿಸಿದ್ದರು.