ತುಮಕೂರು
ನಗರದ ಬಟವಾಡಿ ಸಮೀಪವಿರುವ ಎಪಿಎಂಸಿ ಆವರಣದಲ್ಲಿ ರೆಡ್ಡಿ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಲಿ. ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ಶಾಸಕ ಜ್ಯೋತಿಗಣೇಶ್ ನೆರವೇರಿಸಿದರು.
ನಂತರ ಮಾತನಾಡಿದ ಅವರು, ರೆಡ್ಡಿ ಸಮುದಾಯ
ಬಡವರಿಗೆ ನೆರವಾಗತ್ತಾ ಬಂದಿದ್ದು, ಅವರ ಸಮುದಾಯದ
ತಳಮಟ್ಟದಲ್ಲಿರುವವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಾ ಸಹಾಯ ಮಾಡುತ್ತಿದೆ ಎಂದರು.
ವಿದ್ಯಾರ್ಥಿಗಳಿಗೂ ಸಹ ಉನ್ನತ ಶಿಕ್ಷಣ ಪಡೆಯಲು ಸಹಾಯಹಸ್ತ ಚಾಚುತ್ತಿದೆ. ಈ ಸಹಕಾರಿ ಮುಂದಿನ ದಿನಗಳಲ್ಲಿ ಮತ್ತಷ್ಟು ಉನ್ನತ ಮಟ್ಟಕ್ಕೇರಲಿ ಎಂದು ಆಶಿಸಿದರು.
ರೆಡ್ಡಿ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಅಧ್ಯಕ್ಷ ಕೆ. ಶ್ರೀನಿವಾಸರೆಡ್ಡಿ ಮಾತನಾಡಿ, ನಗರದ ಅಶೋಕ ನಗರದಲ್ಲಿ ಬಾಡಿಗೆ ಕಟ್ಟಡದಲ್ಲಿ ನಮ್ಮ ಸಹಕಾರಿ ನಡೆಯುತ್ತಿದೆ. ಇದೀಗ ನಮ್ಮ ಎಲ್ಲ ನಿರ್ದೇಶಕರುಗಳ ಒಮ್ಮತದಿಂದ ಸಹಕಾರಿಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.
ನಮ್ಮ ಸಹಕಾರಿ ಎಲ್ಲ ನಿರ್ದೇಶಕರುಗಳ ಸಹಕಾರದಿಂದ ಲಾಭದಲ್ಲಿ ಸಾಗುತ್ತಿದೆ ಎಂದು ಅವರು ಹೇಳಿದರು.
ಅಶೋಕ ನಗರದಲ್ಲಿ ಬಾಡಿಗೆ ಕಟ್ಟಡದಲ್ಲಿರುವ ನಡೆಯುತ್ತಿರುವ ನಮ್ಮ ಸಹಕಾರಿಯು ಸ್ವಂತ ಕಟ್ಟಡ ನಿರ್ಮಾಣವಾದ ಮೇಲೆ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಕೆ. ಶ್ರೀನಿವಾಸರೆಡ್ಡಿ, ಉಪಾಧ್ಯಕ್ಷ ಟಿ.ಆರ್. ಮಧು, ನಿರ್ದೇಶಕರುಗಳಾದ ಡಾ. ಎಸ್.ಜಿ. ಹರೀಶ್, ಜಿ.ಎಂ. ಜಯಚಂದ್ರರೆಡ್ಡಿ, ಹೆಚ್.ವಿ.
ವೆಂಕಟಕೃಷ್ಣರೆಡ್ಡಿ, ಡಿ. ರಾಮಕೃಷ್ಣರೆಡ್ಡಿ, ಡಿ. ಕೋಟಿರೆಡ್ಡಿ, ಜಿ.ಎನ್. ಪ್ರಭಾಕರರೆಡ್ಡಿ, ಕೆ.ಎಸ್. ಮಲ್ಲಿಕಾರ್ಜುನ್, ಪಿ. ರಾಮರೆಡ್ಡಿ, ಬಿ.ಪಿ. ಸೋಮರೆಡ್ಡಿ, ಬಾಲನರಸಿಂಹರೆಡ್ಡಿ, ಪಿ. ವಿಜಯಲಕ್ಷ್ಮಿ, ಪಿ. ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು.