ತುರುವೇಕೆರೆ
ನಂತರ ಮಾತನಾಡಿದ ಶಾಸಕರು ತಾಳಕೆರೆ ಗ್ರಾಮದಲ್ಲಿ ಸುಮಾರು 3ರಿಂದ 3.50 ಕೋಟಿ ರೂಗಳ ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ದೇವೆ ಈ ಕಾಮಗಾರಿಗಳು ಈಗಾಗಲೇ ಮುಗಿಯಬೇಕಿತ್ತ ಮಳೆಯ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ ಶೀಘ್ರದಲ್ಲೇ ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಊರಿನಲ್ಲಿ ಚರಂಡಿ ಸಮಸ್ಯೆ ಬಹಳ ಇತ್ತು ಎಂದು ತಿಳಿಸಿ ಕಾಮಗಾರಿ ವಿಳಂಬಕ್ಕೆ ಗ್ರಾಮಸ್ಥರಲ್ಲಿ ಶಾಸಕರು ಕ್ಷಮೆ ಕೋರಿದರು.
ನಂತರ ಮಾತನಾಡಿದ ರಾಜಶೇಖರ್ ನಾವು ಶಾಸಕರಿಗೆ ತುಂಬಾ ಅಭಾರಿಯಾಗಿದ್ದೇವೆ 40-50 ವರ್ಷಗಳಿಂದ ಅಭಿವೃದ್ಧಿಯನ್ನೇ ಕಾಣದ ನಮ್ಮ ಊರು ಈಗ ಅಭಿವೃದ್ಧಿಯಾಗುತ್ತಿದೆ ನಾವು ಶಾಸಕರಲ್ಲಿ ಮನವಿ ಮಾಡುತ್ತಿದ್ದೇವೆ ಕಲ್ಲೇಶ್ವರ ಸ್ವಾಮಿ ಹಾಗೂ ಬಸವೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಗಳಿಗೆ ಡಾಂಬಾರು ಹಾಕಿಸಿ ಎಂದು ಶಾಸಕರಲ್ಲಿ ಗ್ರಾಮಸ್ಥರ ಪರವಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಾಗರತ್ನ ನಂಜಪ್ಪ. ಉಪಾಧ್ಯಕ್ಷೆ ಮಣಿಯಮ್ಮ . ಸದಸ್ಯರಾದ ಸಿದ್ದಲಿಂಗಯ್ಯ . ನಾಗಮ್ಮ . ಮಂಜುಳಾ. ಜಿ.ವಿ. ಪ್ರಕಾಶ್. ಮುಖಂಡರಾದ ಕೊಳಾಲ ಮಹೇಶ್ . ಶಂಕರ್ . ವೆಂಕಟೇಶ್. ಗುಣಶೇಖರ್. ಅನಂತು. ಶಿವಸ್ವಾಮಿ. ಮಹಾಲಿಂಗಪ್ಪ . ಮಂಜಣ್ಣ ವಕೀಲರಾದ ಚನ್ನಕೇಶವ ಮತ್ತಿತರರಿದ್ದರು.