ತುಮಕೂರು

ಆಯುಕ್ತರು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಬೆಂಗಳೂರು ಇವರ ನ್ಯಾಯಾಲಯದಲ್ಲಿ ಶೆಟ್ಟಿಹಳ್ಳಿ ಅಂಜನೇಯಸ್ವಾಮಿ ದೇವಾಲಯಕ್ಕೆ ಸೇರಿದ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಿರುವುದನ್ನು ರದ್ದು ಪಡಿಸುವಂತೆ ಆದೇಶ ನೀಡಿದ್ದು,ನ್ಯಾಯಾಲಯದ ಆದೇಶದಂತೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರಿಯ ಮಾನವ ಹಕ್ಕು ಮತ್ತು ಪರಿಸರ ಸಂರಕ್ಷಣಾ ಪಡೆಯ ಅಧ್ಯಕ್ಷ ಜಿ.ಎಸ್.ಬಸವರಾಜು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ತುಮಕೂರು ತಾಲೂಕು ಕಸಬಾ ಹೋಬಳಿ ಶೆಟ್ಟಿಹಳ್ಳಿ ಸರ್ವೆ ನಂಬರ್ 56/2ರ 4 ಎಕರೆ 12 ಗಂಟೆ ಮತ್ತು 62/2ರ 2 ಎಕರೆ 11 ಗುಂಟೆ ಒಟ್ಟು 6.23 ಗುಂಟೆಗೆ ಸಂಬಂಧಿಸಿದಂತೆ ಜಿ.ಎಸ್.ಬಸವರಾಜು ಅವರು,ತುಮಕೂರು ತಹಶೀಲ್ದಾರ್ ಮತ್ತು ಕಸಬಾ ಆರ್.ಐ ಅವರನ್ನು ಪ್ರತಿವಾದಿಗಳನ್ನಾಗಿಸಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯರ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ದೂರನ್ನು ಪರಿಶೀಲಿಸಿ, ಅಗತ್ಯ ದಾಖಲೆಗಳನ್ನು ಪರಾಮರ್ಶಿಸಿದ್ದ ರೋಹಿಣಿ ಸಿಂಧೂರಿ ಆಯುಕ್ತರು 2022ರ ಸೆಪ್ಟಂಬರ್ 29 ರಂದು ಅರ್ಜಿದಾರರ ದೂರನ್ನು ಪುರಸ್ಕರಿಸಿ, ಸದರಿ ಜಾಗಗಳ ಹಕ್ಕು ಬದಲಾವಣೆ ಕುರಿತಂತೆ ಸೂಕ್ತ ಪರಿಶೀಲನೆ ನಡೆಸಿ, ಸೂಕ್ತ ಆದೇಶ ಹೊರಡಿಸಲು ತುಮಕೂರು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ನಗರದ ಶೆಟ್ಟಿಹಳ್ಳಿ ಅಂಜನೇಯಸ್ವಾಮಿ ದೇವಾಲಯಕ್ಕೆ ಸೇರಿದ್ದ ಸರ್ವೆ 56/2 ಮತ್ತು 62/2ರ ಒಟ್ಟು 6-23 ಎಕರೆ ಭೂಮಿಯನ್ನು 07-05-1984ರಲ್ಲಿ ದೇವಾಲಯದ ಪೂಜಾರಿಗಳಾದ ನಂಜುಂಡಯ್ಯ ಬಿನ್ ಈರಪ್ಪ, ಮಹಂತಯ್ಯ ಬಿನ್ ಈರಪ್ಪ ಮತ್ತು ಸಣ್ಣೀರಯ್ಯ ಬಿನ್ ವೀರಣ್ಣ ಅವರುಗಳು ಅರ್ಜಿ ಸಲ್ಲಿಸಿದ್ದು, ಭೂ ನ್ಯಾಯಮಂಡಳಿ ನಂಜುಂಡಯ್ಯ ಮತ್ತು ಮಹಂತಯ್ಯ ಅವರುಗಳ ಅರ್ಜಿಯನ್ನು ಪುರಸ್ಕರಿಸಿ, ನಂಜುಂಡಯ್ಯ ಅವರಿಗೆ 3-12 ಎಕರೆ ಮತ್ತು ಮಹಂತಯ್ಯ ಅವರಿಗೆ 2-12 ಗುಂಟೆ ಭೂಮಿಯನ್ನು ಮಂಜೂರು ಮಾಡಿ, ಸಣ್ಣೀರಯ್ಯ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಇದರ ವಿರುದ್ದ ಜಿಲ್ಲಾ ಭೂ ಸುಧಾರಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದ ಸಣ್ಣೀರಯ್ಯ ನಮಗೂ ಭೂಮಿ ಮಂಜೂರು ಮಾಡುವಂತೆ ಕೋರಿರುತ್ತಾರೆ.ಆದರೆ ಶೆಟ್ಟಿಹಳ್ಳಿ ಗ್ರಾಮದ ಜನರು ಇದಕ್ಕೆ ವಿರೋಧ ವ್ಯಕ್ತಪಡಿಸಿ,ತಕರಾರು ಅರ್ಜಿ ಸಲ್ಲಿಸಿದ್ದು,ಇಬ್ಬರು ನ್ಯಾಯಾಧೀಶರ ನಡುವೆ ಭಿನ್ನಾಭಿಪ್ರಾಯವಿದ್ದ ಕಾರಣ,ಸಣ್ಣೀರಯ್ಯ ಅವರ ಜೊತೆಗೆ ನಂಜುಂಡಯ್ಯ ಮತ್ತು ಮಹಂತಯ್ಯ ಅವರಿಗೆ ಮಂಜೂರಾಗಿದ್ದ ಭೂಮಿಯನ್ನು ರದ್ದು ಪಡಿಸಿ,ಸದರಿ 6-12ಎಕರೆ ಜಾಗವನ್ನು ಶೆಟ್ಟಿಹಳ್ಳಿ ಅಂಜನೇಯ ದೇವಾಲಯಕ್ಕೆ ಉಳಿಸಿ ಆದೇಶ ನೀಡಿರುತ್ತದೆ.
ಆಯುಕ್ತರು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಬೆಂಗಳೂರು ಇವರ ಸದರಿ ವಿಚಾರವಾಗಿ ಸಲ್ಲಿಕೆಯಾಗಿದ್ದ ಪ್ರಕರಣ ಸಂಖ್ಯೆ ಎಡಿಎಂ7/ಆರ್.ಪಿ.14/2020-21 ಕುಲಂಕಷವಾಗಿ ಪರಿಶೀಲನೆ ನಡೆಸಿದ ಆಯುಕ್ತರಾದ ರೋಹಿಣಿ ಸಿಂಧೂರಿ ಅವರು,ದೇವಾಲಯದ ಜಾಗವನ್ನು ಗೆಣಿದಾರರಿಗೆ ಹಕ್ಕು ಬದಲಾವಣೆ ತಪ್ಪು ಕಂಡು ಬಂದಿದ್ದು, ಈ ವಿಚಾರವಾಗಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997ರ ಸೆಕ್ಷನ್ 50ರ ಅಡಿಯಲ್ಲಿ ವಿಚಾರಣೆ ನಡೆಸಿ,ಸೂಕ್ತ ಆದೇಶ ಹೊರಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಜಿಲ್ಲಾಧಿಕಾರಿಗಳು ಕೂಡಲೇ ಅಗತ್ಯ ಕ್ರಮ ಕೈಗೊಂಡು ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದು, ಪರಿಶೀಲಿಸಿ,ಸೂಕ್ತ ಆದೇಶ ಹೊರಡಿಸದಿದ್ದಲ್ಲಿ,ಜಿಲ್ಲಾಧಿಕಾರಿಗಳನ್ನು ಪ್ರತಿವಾದಿಯನ್ನಾಗಿಸಿ,ಹೈಕೋರ್ಟಿನಲ್ಲಿ ದಾವೆ ಹೂಡಲಾಗುವುದು ಎಂದು ರಾಷ್ಟ್ರೀಯ ಮಾನವ ಹಕ್ಕು ಮತ್ತು ಪರಿಸರ ಸಂರಕ್ಷಣಾ ಪಡೆಯ ಅಧ್ಯಕ್ಷ ಜಿ.ಎಸ್.ಬಸವರಾಜು ತಿಳಿಸಿದ್ದಾರೆ.

(Visited 7 times, 1 visits today)