ತುಮಕೂರು
ಮಹಾನಗರ ಪಾಲಿಕೆ ಆವರಣದೊಳಗಿನ ತುಮಕೂರು ಟೌನ್ ಕ್ಲಬ್ ಹಾಗೂ ಪಾಲಿಕೆ ನಡುವೆ ಮುಖ್ಯದ್ವಾರದ ಪ್ರವೇಶಕ್ಕೆ ಸಂಬಂಧಸಿದಂತೆ ಹಲವು ದಿನಗಳಿಂದ ಹಗ್ಗ ಜಗ್ಗಾಟ ನಡೆಯುತ್ತಿತ್ತು. ಸಂಜೆ ವೇಳೆ ಮಹಾನಗರ ಪಾಲಕೆ ಮುಖ್ಯದ್ವಾರ ಬಂದ್ ಮಾಡುತ್ತಿದ್ದ ಕಾರಣ ಪಾಲಿಕೆ ಆವರಣದೊಳಗಿನ ಕ್ಲಬ್‍ಗೆ ಹೋಗಲು ಸಾಧ್ಯವಾಗದೆ ವಾದ ವಿವಾದಗಳು ನಡೆಯುತ್ತಿತ್ತು. ಈ ಕ್ಲಬ್ ನ ಸದಸ್ಯರು ಟೆನ್ನಿಸ್, ಸ್ವಿಮ್ಮಿಂಗ್, ಚೆಸ್ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳಿಗೆ ತೆರಳುವ ಕಾರಣ ಈ ಸದಸ್ಯರಿಗೆ ತೊಂದರೆಯಾಗುತ್ತಿತ್ತು ಎಂದು ಮಾಜಿ ಶಾಸಕರು ತಿಳಿಸಿದ್ದಾರೆ.
ಸ್ವಾತಂತ್ರ್ಯಾ ಪೂರ್ವದಿಂದ ಇರುವ ಈ ಕ್ಲಬ್ ನ ಪ್ರವೇಶಕ್ಕೆ ಆಗಿದ್ದಂತಹ ಅಡೆತಡೆಗಳಿಗೆ ಈಗ ಮಹಾಪೌರರು ಹಾಗೂ ಮಹಾನಗರ ಪಾಲಿಕೆ ಸದಸ್ಯರು ಒಮ್ಮತದ ನಿರ್ಣಯ ತೆಗೆದುಗೊಂಡು ಕ್ಲಬ್ ತೆರೆದಿರುವವರೆಗೆ ಕ್ಲಬ್ ನ ಸದಸ್ಯರಿಗೆ ಮುಕ್ತ ಪ್ರವೇಶಕ್ಕೆ ಅನುಮತಿ ನೀಡಿರುವುದು ಸ್ವಾಗತಾರ್ಹ ಎಂದು ಡಾ. ರಫೀಕ್ ಅಹ್ಮದ್ ಅಭಿಮತ ವ್ಯಕ್ತಪಡಿಸಿದ್ದಾರೆ.
(Visited 1 times, 1 visits today)