ತುಮಕೂರು

ಅಮೆರಿಕಾದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯವು ಹೊರತಂದಿರುವ ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರಿನ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯ ರಸಾಯನ ಶಾಸ್ತ್ರ ವಿಭಾಗದ ಡಾ.ನಾಗರಾಜು ಗಂಗನಾಗಪ್ಪನವರು ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಣೆಗೊಂಡ ಸಂಶೋಧನಾ ಪ್ರಬಂಧಗಳು,ಉಲ್ಲೇಖಗಳು ಹಾಗೂ ಎಚ್ ಇಂಡೆಕ್ಸ್ ಗಳನ್ನು ಪರಿಗಣಿಸಿ
ಜಾಗತಿಕ ಮಟ್ಟದಲ್ಲಿ ಶ್ರೇಷ್ಠ 2% ವಿಜ್ಞಾನಿಗಳ ಪಟ್ಟಿಯನ್ನು ಇತ್ತೀಚಿಗೆ ಪ್ರಕಟಿಸಲಾಗಿದೆ.ಈ ಪಟ್ಟಿಯಲ್ಲಿ ಇವರು 82,953ನೇ ಸ್ಥಾನವನ್ನು ಪಡೆದಿದ್ದಾರೆ. ತುಮಕೂರು ತಾಲೂಕಿನ ಗಡಿ ಗ್ರಾಮವಾದ ಗಿಡಗನಹಳ್ಳಿಯವರಾದ ಡಾ.ನಾಗರಾಜು ಇವರು ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ಮತ್ತು ಯು.ಎಫ್.ಆರ್.ಜಿ.ಎಸ್. ಬ್ರೆಜಿಲ್ ದೇಶದಲ್ಲಿಯೂ ಸಹ ಸಂಶೋಧನೆಯನ್ನು ಮಾಡಿದ್ದಾರೆ.ಇವರು ಲಿಥಿಯಂ ಅಯಾನ್ ಬ್ಯಾಟರಿ ಮತ್ತು ಹೈಡ್ರೋಜನ್ ಉತ್ಪಾದನೆ ವಿಭಾಗದಲ್ಲಿ ಸಂಶೋಧನೆಯನ್ನು ಮಾಡುತ್ತಿದ್ದಾರೆ.ಇವರ ಸಾಧನೆಯಲ್ಲಿ ಎಸ್.ಐ.ಟಿಯ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿ ವೃಂದ ಪ್ರಶಂಶಿಸಿದ್ದಾರೆ.

(Visited 7 times, 1 visits today)