ತುಮಕೂರು
ನವೆಂಬರ್ 13 ರಂದು ತುಮಕೂರು ನಗರದ ಮಹಾವೀರ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ನೇಕಾರರ ಒಕ್ಕೂಟದ ರಾಜ್ಯ ಸಮಾವೇಶದ ಹಿನ್ನೇಲೆಯಲ್ಲಿ ಶನಿವಾರ ನೇಕಾರರ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಎಸ್.ಸೋಮಶೇಕರ್ ಹಾಗೂ ಒಕ್ಕೂಟದ
ಪದಾಧಿಕಾರಿಗಳು ಸಮಾವೇಶವನ್ನು ಯಶ್ವಸಿಗೊಳಿಸುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಬಿ.ಎಸ್.ಸೋಮಶೇಖರ್,ನವೆಂಬರ್ 13 ರಂದು ತುಮಕೂರು ನಗರದಲ್ಲಿ ನೇಕಾರರ ರಾಜ್ಯ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ.ಇದು ರಾಜ್ಯ ಸಮಾವೇಶ ಆದ ಕಾರಣ ಇಡೀ ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ಸಮಾವೇಶ ಯಶಸ್ವಿಗೊಳಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ.ನಮ್ಮೊಂದಿಗೆ ತುಮಕೂರು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ, ತುಮಕೂರು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟ ಸಹ ಕೈಜೊಡಿಸಿದೆ.ಇದೇ ಮೊದಲ ಬಾರಿಗೆ ಪ್ರತಿಭಾಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್ ಮಾತನಾಡಿ,ರಾಜ್ಯದಲ್ಲಿ ನೇಕಾರರ ಕಷ್ಟ ಸುಖಃಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ನೇಕಾರರ ಒಕ್ಕೂಟ ಸಕ್ರಿಯವಾಗಿ ತೊಡಗಿದೆ.ಎಲ್ಲಾ ನೇಕಾರ ಸಮುದಾಯಗಳನ್ನು ಒಂದು ವೇದಿಕೆಗೆ ತಂದು,ರಾಜಕೀಯ, ಅರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ದಿಯ ಹೊಂದುವ ನಿಟ್ಟಿನಲ್ಲಿ ನವೆಂಬರ್ 13 ರಂದು ನಡೆಯುವ ಈ ರಾಜ್ಯ ನೇಕಾರರ ಸಮುದಾಯಗಳ ಒಕ್ಕೂಟದ ರಾಜ್ಯ ಸಮಾವೇಶ ಮತ್ತು ಪ್ರತಿಭಾಪುರಸ್ಕಾರ ಮಹತ್ವದ ಮೈಲಿಗಲ್ಲಾಗಿದೆ.ನಮ್ಮ ರಾಜ್ಯಾಧ್ಯಕ್ಷರಾದ ಬಿ.ಎಸ್.ಸೋಮಶೇಖರ್ ಹಾಗೂ ಪದಾಧಿಕಾರಿಗಳು ಕಳೆದ ಒಂದು ತಿಂಗಳಿನಿಂದ ಸಮಾವೇಶದ ಯಶಸ್ವಿಗಾಗಿ ಹಗಲಿರುಳು ದುಡಿಯುತ್ತಿದ್ದಾರೆ.ಅವರೊಂದಿಗೆ ನಾವು ಸಹ ಕೈಜೋಡಿಸಿ, ಸಮಾವೇಶ ಮತ್ತು ಪ್ರತಿಭಾಪುರಸ್ಕಾರ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ತಿಳಿಸಿದರು.
ಇದೇ ವೇಳೆ ರಾಜ್ಯಾಧ್ಯಕ್ಷ ಬಿ.ಎಸ್.ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ತೋಟಪ್ಪ ಶೇಖರ್ ಖಜಾಂಚಿ ನವೀನ್ ಚಿಲ್ಲಾಳ, ಕಚೇರಿ ಕಾರ್ಯದರ್ಶಿದಯಾನಂದ ಶೆಟ್ಟಿಗಾರ್ ಅವರನ್ನು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಅಭಿನಂದಿಸಲಾಯಿತು.ನೇಕಾರರ ಸಮುದಾಯಗಳ ಒಕ್ಕೂಟದ ತುಮಕೂರು ಜಿಲ್ಲಾ ಶಾಖೆ ಕಾರ್ಯದರ್ಶಿ ರಾಮಕೃಷ್ಣಪ್ಪ, ಉಪಾಧ್ಯಕ್ಷ ಕರಿಯಪ್ಪ,ಯೋಗಾನಂದ,ಗಂಗಾಧರ್, ಶಂಕರಪ್ಪ, ನರಸಿಂಹಮೂರ್ತಿ, ಸಂಘಟನಾ ಕಾರ್ಯದರ್ಶಿ ಅನಿಲ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.