ತುಮಕೂರು


ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ದೇಶದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಡಿಸಿಸಿ ಅಧ್ಯಕ್ಷ ಆರ್.ರಾಮಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಕೈಗೊಳ್ಳಲಾಗಿತ್ತು.
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಆರ್.ರಾಮಕೃಷ್ಣ, ಗರೀಬ್ ಹಠಾವೋ ಎಂಬ ಘೋಷ ವ್ಯಾಕದ ಮೂಲಕ ದೇಶದ ಬಡಜನರಿಗೆ ಸೂರು, ಊಟ, ವಸತಿ ಕಲ್ಪಿಸಲು ಹಗಲಿರುಳು ಶ್ರಮಿಸಿದ ಇಂದಿರಾಗಾಂಧಿ ಅವರು, ಈ ದೇಶ ಕಂಡ ಅಪ್ರತಿಮ ರಾಜಕಾರಣಿ. ಬರಗಾಲದಿಂದ ಅನ್ನ, ಆಹಾರವಿಲ್ಲದ
ಪರಿತಪಿಸುತಿದ್ದ ರಾಷ್ಟ್ರದ ಜನತೆಗಾಗಿ,ವಿದೇಶಗಳಿಂದ ಗೋಧಿ,ಕೆಂಪು ಜೋಳ ತಂದು,ಬಡವರ ಹೊಟ್ಟೆ ತುಂಬಿಸಿದ ಇಂದಿರಾಗಾಂಧಿ,ಪಾಕಿಸ್ಥಾನದ ಮೇಲೆ ಯುದ್ದ ಮಾಡಿ, ಬಾಂಗ್ಲಾ ದೇಶ ಉದಯಕ್ಕೆ ಕಾರಣರಾದರು. ಅವರು ಎಂದಿಗೂ ಯುದ್ದಗಳನ್ನು ತಮ್ಮ ರಾಜಕೀಯ ಬೆಳವಣಿಗೆಗೆ ಬಳಸಿಕೊಂಡವರಲ್ಲ. ಅವರ ಧೈರ್ಯ ಮತ್ತು ಚಾಣಾಕ್ಷತನ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಬೇಕು ಎಂದರು.
ಬ್ಯಾಂಕುಗಳ ರಾಷ್ಟ್ರೀಕರಣ, ಸಾರಿಗೆ ರಾಷ್ಟ್ರೀಕರಣ, ಉಳುವವನೇ ಭೂಮಿ ಒಡೆಯ, 20 ಅಂಶಗಳ ಕಾರ್ಯಕ್ರಮಗಳು ಇಡೀ ಪ್ರಪಂಚದಲ್ಲಿಯೇ ಬಡವರ ಏಳಿಗೆಗೆ ನಡೆದ ಮಹತ್ವಾಕಾಂಕ್ಷೆಯ ಯೋಜನೆಗಳಾಗಿವೆ. ಅದೇ ದಾರಿಯಲ್ಲಿ ರಾಜೀವ್ ಗಾಂಧಿ ಅವರು ಸಹ ಅಧಿಕಾರ ನಡೆಸಿ, ಜನಮಾನಸದಲ್ಲಿ ಉಳಿದಿದ್ದಾರೆ.ನಮ್ಮ ನಾಯಕರಾದ ರಾಹುಲ್‍ಗಾಂಧಿ ಅವರು ಸಹ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಭಾರತ ಜೋಡೋ ಯಾತ್ರೆ ಮೂಲಕ ಜನರ ಮನಸ್ಸು ಒಗ್ಗೂಡಿಸುವ ಮಹತ್ವದ ಕಾರ್ಯಕ್ಕೆ ಕೈಹಾಕಿದ್ದಾರೆ. ಬಿಜೆಪಿ ದೇಶ ವಿಭಜಿಸಿದರೆ, ಕಾಂಗ್ರೆಸ್ ಜೋಡಿಸುವ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ.ನವೆಂಬರ್ 06ರಂದು ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾದ ನಂತರ
ಪ್ರಥಮವಾಗಿ ಬೆಂಗಳೂರಿಗೆ ಆಗಮಿಸುತಿದ್ದು, ಅವರನ್ನು ಸ್ವಾಗತಿಸಲು ತಾವೆಲ್ಲರು ಬೆಂಗಳೂರಿಗೆ ಆಗಮಿಸುವಂತೆ ಆರ್.ರಾಮಕೃಷ್ಣ ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್.ಷಪಿಅಹಮದ್ ಮಾತನಾಡಿ,ಇಂದು ದೇಶದಾದ್ಯಂತ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯ ಸ್ಮರಣೆ ಮಾಡಲಾಗುತ್ತಿದೆ.ಒರ್ವ ಮಹಿಳೆಯಾಗಿ ಅವರ ತೆಗೆದುಕೊಂಡು ದಿಟ್ಟ ತೀರ್ಮಾನ ಗಳಾದ ಬ್ಯಾಂಕ್ ಮತ್ತು ಸಾರಿಗೆ ರಾಷ್ಟ್ರೀಕರಣ ಸೇರಿದಂತೆ ಹಲವಾರು ಕಾರ್ಯಗಳು ಇಡೀ ಪ್ರಪಂಚಕ್ಕೆ ಮಾದರಿಯಾಗಿವೆ. ಅವರ ಪರಿಶ್ರಮದಿಂದಾಗಿ,ಭಾರತ ಅಭಿವೃದ್ದಿಶೀಲ ರಾಷ್ಟ್ರಗಳ ಪಟ್ಟಿಗೆ ಸೇರುವಂತಾಯಿತು.ಆದರೆ ಅವರು ಸ್ಥಾಪಿಸಿದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ಜನರನ್ನು ಮತ್ತೊಮ್ಮೆ ಗುಲಾಮಗಿರಿ ಸಂಸ್ಕøತಿಗೆ ತಳ್ಳುತಿದ್ದಾರೆ ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ಮೇಯರ್ ಪ್ರಭಾವತಿ, ಪಾಲಿಕೆ ಸದಸ್ಯ ನಯಾಜ್ ಅಹಮದ್,ಮುಖಂಡರಾದ ಚಂದ್ರಶೇಖರಗೌಡ, ಗೀತಾ ರಾಜಣ್ಣ,ಮಂಜುನಾಥ್,ನಟರಾಜು,ಪ್ರಕಾಶ್, ಸಂಜೀವಕುಮಾರ್, ರೇವಣ್ಣ ಸಿದ್ದಯ್ಯ, ಡಾ.ಫರ್ಜಾನಾ, ಡಾ.ಅರುಂಧತಿ, ಗೀತಾ,ನ್ಯಾತೇಗೌಡ, ಶಿವಪ್ರಸಾದ್,ಯಶೋಧ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)