ತುಮಕೂರು
ಮಾರಿಯಮ್ಮ ಯುವಕರ ಸಂಘಟನೆಯಿಂದ ಡಾ.ಪುನೀತ್ ರಾಜ್‍ಕುಮಾರ್‍ರವರ ಒಂದು ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಗರದ ಮಂಡಿಪೇಟೆ ವೃತ್ತದಲ್ಲಿ ಮೌನಾಚರಣೆ ಹಮ್ಮಿಕೊಂಡು ಅನ್ನ ಸಂತರ್ಪಣಾ ಕಾರ್ಯಕ್ರಮ ನೆರವೇರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾರಿಯಮ್ಮ ಯುವಕರ ಸಂಘದ ಅಧ್ಯಕ್ಷರಾದ ಕಣ್ಣನ್ ಮಾತನಾಡಿ ಡಾ.ಪುನೀತ್‍ರಾಜ್‍ಕುಮಾರ್ ರವರು ಅಪ್ರತಿಮ ನಟ ಕರ್ನಾಟಕದಲ್ಲಿ ಕನ್ನಡನಾಡು ನುಡಿಗಷ್ಟೇ ಅಲ್ಲದೇ ಹಸಿದವರ.ಧಣಿದವರ ಅನಾರೋಗ್ಯಕ್ಕೊಳಗಾದವರಿಗೆ ಆಸರೆಯಾಗಿ. ಸಾವಿನಲ್ಲು ಸಾರ್ಥಕತೆ ಮೆರೆದು ತಮ್ಮ ದೇಹದ ಅಂಗಾಂಗಗಳನ್ನು ಧಾನ ಮಾಡಿ ಇಡೀ ದೇಶದ ಜನರಿಗೆ ಮಾದರಿ ಸಂದೇಶ ರವಾನಿಸಿ ಹೀಗು ಬದುಕಬಹುದು ಎಂದು ತೊರಿಸಿಕೊಟ್ಟಿದ್ದಾರೆ. ಬಡವರನ್ನು ಅಶಕ್ತರನ್ನು ಕೈಹಿಡಿದು ಹೆಜ್ಜೆ ಹಾಕಿದವರು ಇಂದು ನಮ್ಮೆಲ್ಲರನ್ನಗಲಿ ಒಂದು ವರ್ಷ ಕಳೆದಿದೆ ಅವರ ಪುಣ್ಯಸ್ಮರಣೆ ಅಂಗವಾಗಿ ಮಾರಿಯಮ್ಮ ಯುವಕರ ಸಂಘದ ಪದಾಧಿಕಾರಿಗಳು ಹಾಗೂ ಇಲ್ಲಿನ ಮುಖಂಡರು ಒಂದು ದಿನದ ತಮ್ಮ ಕೂಲಿಯನ್ನು ಅನ್ನ ಸಂತರ್ಪಣಾ ಕಾರ್ಯಕ್ರಮಕ್ಕೆ ಬರಿಸಿದ್ದಾರೆ, ಅವರೆಲ್ಲರೂ ಪುನೀತ್ ರಾಜ್‍ಕುಮಾರ್ ರವರ ಮೇಲಿನ ಅಭಿಮಾನವನ್ನು ಸಾರ್ಥಕತೆಗೊಳಿಸಲು ಸಾಕ್ಷಿಯಾಗಿದ್ದಾರೆ ಎಂದರು.
ನಂತರ ತುಮಕೂರು ಜಿಲ್ಲಾ ಕೊಳಗೇರಿ ಸಮಿತಿಯ ಅರುಣ್ ಮಾತನಾಡಿ ಡಾ.ಪುನೀತ್‍ರಾಜ್‍ಕುಮಾರ್ ರವರು ಕರ್ನಾಟಕದ ಡೈಮಂಡ್ ನಿಜವಾದ ಡೈಮಂಡ್ ಎಷ್ಟು ಪ್ರಕಾಶಿಸುವುದೋ ಅದರ ಹತ್ತುಪಟ್ಟು ತಮ್ಮ ಪ್ರಕಾಶಮಾನವಾಗಿ ಹೊಳೆಯುವಂತ ಮುತ್ತು, ಅ ಮುತ್ತನ್ನು ಕಳೆದುಕೊಂಡು ಕರ್ನಾಟಕ ಕತ್ತಲಾವರಿಸಿ ಒಂದು ವರ್ಷ ಸಾಗಿದೆ, ಊಹೆಗೂ ಮೀರಿದ ಘಟನೆ ಇಡೀ ಕರ್ನಾಟಕವನ್ನಷ್ಟೇ ಅಲ್ಲದೇ ಪ್ರಪಂಚದ ಮೂಲೆ ಮೂಲೆಯಲ್ಲಿರುವ ಅಭಿಮಾನಿಗಳ ಮೌನಕ್ಕೆ ಸಾಕ್ಷಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾರಿಯಮ್ಮ ಯುವಕರ ಸಂಘಟ ಮುರುಗನ್,ಕೃಷ್ಣ, ಮಾದವನ್,ಮಾರಿ, ರಾಜು, ಕಾತಿರಾಜ್, ದುನಿಯಾ ಬಾಬು, ಪ್ರತಾಫ್, ವೆಂಕಟೇಶ್‍ಸೂರ್ಯ, ಸುಬ್ಬಣ್ಣ,ದುರ್ಗ,ಅಶೋಕ್, ವೆಂಕಟೇಶ್, ಗೋಪಾಲ್, ಸಂತೋಷ್, ನೂಪು.ಕುಮಾರ್, ಕೃಷ್ಣ, ಜೈಕುಮಾರ್ ಹಾಗೂ ಸ್ಲಂ ಸಮಿತಿಯ ತಿರುಮಲಯ್ಯ ಪಾಲ್ಗೊಂಡಿದ್ದರು.