ಚಿಕ್ಕನಾಯಕನಹಳ್ಳಿ
ನಾಡ ಕಟ್ಟಿದ ನಾಡಪ್ರಭು ಕೆಂಪೇಗೌಡರ ಶತಾಬ್ದಿ ಅಂಗವಾಗಿ ರಾಜ್ಯದ ಮೂಲೆ ಮೂಲೆಗಳ ಮೃತ್ತಿಕೆ ಸಂಗ್ರಹಿಸುವ ಮೂಲಕ ಅವರ ಹೆಸರು ಮುಂದಿನ ಯುವ ಪೀಳಿಗೆಗೆ ಉಳಿಯುವಂತೆ ಮಾಡುವ ಕೆಲಸ ನಮ್ಮ ಸರ್ಕಾರದ್ದಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ಅವರು ಇಂದು ಚಿಕ್ಕನಾಯಕನಹಳ್ಳಿ ತಾಲೂಕಿನ ಆಗಮಿಸಿದ ನಾಡಪ್ರಭು ಕೆಂಪೇಗೌಡರ ವೃತ್ತಿಕೆ ರಥ ವನ್ನು ಬರಕ್ ನಾಳು ಗ್ರಾಮ ಪಂಚಾಯಿತಿಗೆ ಬರಮಾಡಿಕೊಂಡು ನಮಸ್ಕರಿಸಿ ಗ್ರಾಮದ ಕೆಂಪಮ್ಮ ದೇವಿಯ ಸಾನಿಧ್ಯದಲ್ಲಿ ಪೂಜೆ ನೆರವೇರಿಸಿ ಶಾಸಕ ಹಾಗೂ ಕಾನೂನು ಸಚಿವರ ಮೂಲಕ ವೃತ್ತಿಕೆಯನ್ನು (ಮಣ್ಣನ್ನು) ಸ್ವೀಕರಿಸಿ ರಥಕ್ಕೆ ಅರ್ಪಿಸಿ ಅವರು ಮಾತನಾಡುತ್ತಾ
ಹೆಮ್ಮೆಯ ನಮ್ಮ ನಾಡುವ ರಾಜರು ಕಟ್ಟಿರುವ ನಾಡುಗಳು ಇಂದು ಪಳೆಯುಳಿಕೆಯಾಗಿದೆ ರಾಜರ ಆಳ್ವಿಕೆಯ ಸಾಮಂತರಾಗಿ ದುಡಿಯುತ್ತಿದ್ದ ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಂದು ಬೃಹತ್ ನಗರಗಳು ನಮ್ಮ ಕಡೆ ನೋಡುತ್ತಾ ದಿನ ಕಳೆದಂತೆ ಜಗತ್ತನ್ನೇ ಆಕರ್ಷಿಸುವಂತೆ ಮಾಡಿದ್ದಾರೆ.
ಇವರ 108 ಅಡಿ ಇರುವ ಪ್ರತಿಮೆಯನ್ನು ನವಂಬರ್ 11ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಅನಾವರಣಗೊಳಿಸಲಿದ್ದಾರೆ ಈ ಕಾರ್ಯಕ್ರಮಕ್ಕೆ ಈ ಭಾಗದ ಜನರು ಬರುವ ಮೂಲಕ ಅವರಿಗೆ ನಾವು ನೀಡುವ ನಮನಗಳು ಎಂದು ಹೇಳಿದರು.
ಕಾನೂನು ಸಂಸದೀಯ ಸಚಿವ ಜೆಸಿ ಮಾಧುಸ್ವಾಮಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಜಿಲ್ಲಾ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಾಪುರ್ ವಾಡ್ ತಿಪಟೂರು ಉಪ ವಿಭಾಗಾಧಿಕಾರಿ ಕಲ್ಪಶ್ರೀ ತಹಶೀಲ್ದಾರ್ ತೇಜಸ್ವಿನಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ವಸಂತ್ ಕುಮಾರ್ ಬರಕನಾಳು ಗ್ರಾಮ ಪಂಚಾಯಿತಿ ಅಧಿಕಾರಿ ವರ್ಗದವರು ಉಪಸ್ಥಿತರಿದ್ದು ಸಮಾರಂಭಕ್ಕೆ ಮಹಿಳೆಯರ ಪೂರ್ಣ ಕುಂಭದ ಮೂಲಕ ರಥವನ್ನು ಬರಮಾಡಿಕೊಂಡರು.