ತುಮಕೂರು
ಕನ್ನಡ ಅಸ್ಮಿತೆಗೆ ದಕ್ಕೆ ತರುವ ಎಷ್ಟೇ ಒತ್ತಡಗಳು ಬಂದರೂ ನಾಡು ನುಡಿಯ ಬಗ್ಗೆ ನಮ್ಮ ಶ್ರದ್ಧೆ ಹಾಗೂ ಬದ್ಧತೆ ಯಾವತ್ತೂ ಬದಲಾಗಬಾರದು ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು.
ಅವರು ಸಿದ್ಧಗಂಗಾ ಆಸ್ಪತ್ರೆಯಲ್ಲಿ ಕನ್ನಡ ದ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿ ಕನ್ನಡ ನಮ್ಮ ಔದ್ಯೋಗಿಕ ಭಾಷೆಯಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪಣ ತೊಡಬೇಕು. ಎರಡು ಸಾವಿರ ವರ್ಷ ಇತಿಹಾಸವುಳ್ಳ ಕನ್ನಡ ನಮ್ಮ ಹೆಮ್ಮೆ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲ ಕನ್ನಡಿಗರ ಮೇಲಿದೆ ಎಂದರು. ಸಿದ್ಧಗಂಗಾ ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಡಾ.ಶಾಲಿನಿ ಮಾತನಾಡಿ ನಾವು ಎಲ್ಲಾ ಭಾಷೆಗಳನ್ನು ಗೌರವಿಸಬೇಕು ಹಾಗೂ ಪ್ರೀತಿಸಬೇಕು ಆದರೆ ಮಾತೃಭಾಷೆ ನಮ್ಮ ಆಧ್ಯತೆಯಾಗಿರಬೇಕು. ಕನ್ನಡನಾಡನ್ನು ಕಟ್ಟಲು ಶ್ರಮಿಸಿದ ಮಹನೀಯರ ಸ್ಮರಣೆ ಹಾಗೂ ಅಧ್ಯಯನ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದರು.
ಕ್ಯಾನ್ಸರ್‍ನಿಂದ ಗುಣಮುಖರಾದ ಸಿದ್ಧಗಂಗಮ್ಮ ಧ್ವಜಾರೋಹಣ ನಡೆಸಿದ್ದು ವಿಶೇಷವಾಗಿತ್ತು. ಸಿದ್ಧಗಂಗಾ ಮೆಡಿಕಲ್ ಕಾಲೇಜು ಮೇಲ್ವಿಚಾರಕ ಡಾ.ನಿರಂಜನಮೂರ್ತಿ, ಸಿಇಓ ಡಾ.ಸಂಜೀವ್ ಕುಮಾರ್, ಕ್ಯಾನ್ಸರ್ ತಜ್ಞರಾದ ಡಾ.ಮಧುಮಾಲಿತಿ, ಸ್ತ್ರೀರೋಗ ತಜ್ಞರಾದ ಡಾ.ಮನಸ್ವಿ, ರೂಪ, ಪಿಆರ್‍ಓ ಕಾಂತರಾಜು ಹಾಗೂ ಆಸ್ಪತ್ರೆ ಸಿಬ್ಬಂಧಿ ಉಪಸ್ಥಿತರಿದ್ದರು.