ಗುಬ್ಬಿ


ನಾಳೆಯಿಂದ ರಾಜ್ಯದಲ್ಲಿ ಪಂಚರತ್ನ ರಥ ಪ್ರಾರಂಭವಾಗಲಿದ್ದು, ಗುಬ್ಬಿ ತಾಲ್ಲೂಕಿಗೆ 19ರಂದು ಸಾವಿರಾರು ಕಾರ್ಯಕರ್ತರೊಡನೆ ಬರಮಾಡಿಕೊಳ್ಳಲಾಗುತ್ತದೆ ಎಂದು ಜೆ.ಡಿ.ಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ತಿಳಿಸಿದರು.
ಪಟ್ಟಣದ ತಮ್ಮ ಗೃಹದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಈಗಾಗಲೇ ಪೂರ್ವಭಾವಿ ಸಭೆಗಳನ್ನು ನಡೆಸಿದ್ದು ಇದರಿಂದ ಪಂಚರತ್ನ ರಥವು ಯಾವ ಯಾವ ಕಡೆ ಸಂಚರಿಸಬೇಕೆಂಬುದನ್ನು ಆಯಾ ಹೋಬಳಿಯ ಕಾರ್ಯಕರ್ತರುಗಳೇ ತೀರ್ಮಾನಿಸಿದ್ದು ಆಗಾಗಿ ಗುಬ್ಬಿಯಿಂದ ಕೆ.ಜೆ.ಟೆಂಪಲ್, ಕಡಬ, ನಿಟ್ಟೂರು, ಎಂ.ಎನ್.ಕೋಟೆ, ಚೇಳೂರು ಈ ಭಾಗದಲ್ಲಿ ಸಂಚರಿಸಿ ಹೊಸಕೆರೆಯಲ್ಲಿ ಬೃಹತ್ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದ್ದು, ಸುಮಾರು 10-12ಸಾವಿರ ಕಾರ್ಯಕರ್ತರುಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ ಅವರು ಹಾಗಲವಾಡಿಯಲ್ಲಿ ವಾಸ್ತವ್ಯ ಹೂಡಲಿದ್ದು ಅಂದಿನ ಸಂಜೆ ರೈತರಿಂದ ಸಂವಾದ ಕಾರ್ಯಕ್ರಮ ಹಾಗೂ ಅತಿವೃಷ್ಠಿ ಮಳೆಯಿಂದಾದ ಪರಿಹಾರ ಹಾಗೂ ರಾತ್ರಿ ಜಾನಪದ ಮತ್ತು ಸ್ಥಳೀಯ ಕಲಾವಿದರಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು 2023ಕ್ಕೆ ಜನತಾ ಸರ್ಕಾರವು ಬರಲಿದ್ದು ಸಿ.ಎಂ. ಕುಮಾರಸ್ವಾಮಿಯವರೆ ಮುಖ್ಯಮಂತ್ರಿಯಾಗುತ್ತಾರೆ ಎಂದು ತಿಳಿಸಿದ ಅವರು ತಾಲ್ಲೂಕಿನಲ್ಲಿ ಅಭಿವೃದ್ದಿ ಕುಂಠಿತವಾಗಿದ್ದು ಮುಂದಿನ ದಿನಗಳಲ್ಲಿ ನನ್ನನ್ನು ಆಯ್ಕೆ ಮಾಡಿದರೆ ಅಭಿವೃದ್ದಿಯನ್ನು ಕಾಣುವಂತಾಗುತ್ತದೆ. ಇದರ ಜೊತೆಯಲ್ಲಿ ತಾಲ್ಲೂಕಿನ ಭೂಹಗರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಮಾಜಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದು ಈ ಅಂಶವನ್ನು ಸಹ ಪಂಚರತ್ನ ರಥ ಯಾತ್ರೆಯಲ್ಲಿ ತಿಳಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಸುರೇಶ್‍ಗೌಡ, ಮುಖಂಡರುಗಳಾದ ಎ.ಪಿ.ಎಂ.ಸಿ ಸದಸ್ಯ ಲೋಕೇಶ್, ಕೊಂಡ್ಲಿ ಕರಿಯಪ್ಪ, ಕಡಬ ಸಿದ್ದಗಂಗಮ್ಮ, ಹಾಗಲವಾಡಿ ಶಿವಲಿಂಗಯ್ಯ ಹಾಗೂ ಪಕ್ಷದ ಅಧ್ಯಕ್ಷರು, ಕಾರ್ಯಕರ್ತರುಗಳು ಭಾಗವಹಿಸಿದ್ದರು.

(Visited 7 times, 1 visits today)