ತುಮಕೂರು


ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಮದ್ಯಸೇವನೆಯ ವಿರುದ್ದ ಜಿಲ್ಲೆಯಾದ್ಯಂತ ದಂಡ ವಿಧಿಸುವುದು ಹಾಗೂ ತಪಾಸಣೆ ತಂಡಗಳು ಭೇಟಿ ನೀಡುವುದನ್ನು ಹೆಚ್ಚಿಸÀಬೇಕು ಎಂದು ಜಿಲ್ಲಾಧಿಕಾರಿ ವ್ಯೆ.ಎಸ್ ಪಾಟೀಲ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರ್ಯೆಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಕಠಿಣ ಕ್ರಮಕ್ಕೆ ಸೂಚನೆ
ತಂಬಾಕು ಸೇವನೆ ದುಷ್ಪರಿಣಾಮದ ಕುರಿತು ಪ್ರೌಢಶಾಲೆ ಮತ್ತು ಪಿಯುಸಿ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಪ್ರಬಂಧ ಸ್ಪರ್ಧೆ, ವಿದ್ಯಾರ್ಥಿಗಳಿಂದ ಜಾಥಾ, ವಿಚಾರ ಸಂಕಿರಣಗಳನ್ನು ಆಯೋಜಿಸಬೇಕು. ಶಾಲೆ ಕಾಲೇಜುಗಳು ‘ತಂಬಾಕು ಉತ್ಪನ್ನ ಮಾರಾಟ, ಸೇವನೆ ನಿμÉೀಧಿತ ವಲಯ’ಗಳಾಗಿದ್ದು, ಸುತ್ತಮುತ್ತ ತಂಬಾಕು ಉತ್ಪನ್ನಗಳ ಅನಧಿಕೃತ ಮಾರಾಟಕ್ಕೆ ಕಡಿವಾಣ ಹಾಕಿ, ಕಠಿಣ ಕ್ರಮ ಕ್ಯೆಗೊಂಡು ಜಿಲ್ಲೆಯ ಶಾಲೆಗಳನ್ನು ತಂಬಾಕು ಮುಕ್ತ ಶಾಲೆಗಳನ್ನಾಗಿಸಬೇಕು, ತಂಬಾಕು ನಿಯಂತ್ರಣ ಕೋಶದ ತಂಡದೊಂದಿಗೆ ಆಗ್ಗಾಗ್ಗೆ ಶಾಲೆಗಳಿಗೆ ಭೇಟಿ ನೀಡಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಹದಿಹರೆಯದ ಮಕ್ಕಳು ಬಗ್ಗೆ ವಿಶೇಷ ನಿಗಾವಹಿಸಿ:
ಸಹವಾಸ, ಸಮಾಜಿಕ ಜಾಲತಾಣ ಹಾಗೂ ಇನ್ನಿತರ ದುಷ್ಪ್ರೇರಣೆಯಿಂದ ಮಕ್ಕಳ ಆರೋಗ್ಯ ಹಾಗೂ ಮನಸ್ಸಿನ ಮೇಲೆ ಪರಿಣಾಮ ಬೀರಿ ತಂಬಾಕು ಸೇವನೆಯ ಕಡೆ ಆಕರ್ಷಿತವಾಗುವ ಸಂಭವ ಇರುತ್ತದೆ. ಈ ಕಾರಣಕ್ಕೆ ಪ್ರೌಢಶಾಲೆ, ಕಾಲೇಜು ಹಾಗೂ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು, ಒಂದು ಮಗುವಿಗೆ ಉತ್ತಮ ಶಿಕ್ಷಣ ನೀಡಿದರೆ ಅ ಮೂಲಕ ಅ ವಿಧ್ಯಾರ್ಥಿಯ ಕುಟುಂಬಕ್ಕು ಶಿಕ್ಷಣದ ಫಲ ದೊರೆಯುತ್ತದೆ, ಮಕ್ಕಳ ಭವಿಷ್ಯ ರೂಪಿಸುವದರಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದ್ದು, ಪ್ರತಿ ಮಗುವಿನ ಮೇಲೆ ವಿಶೇಷ ಗಮನವನ್ನು ಹರಿಸಿ ಮಕ್ಕಳಲ್ಲಿ ಉತ್ತಮ ಮನೋಭಾವನೆ ರೂಪಿಸುವಂತೆ ಕರೆ ನೀಡಿದರು, ಹಾಗೂ ಶಾಲೆಕಾಲೇಜು ಆವರಣದಲ್ಲಿ ತಂಬಾಕು ಮಾರಾಟ ಮಾಡುವರು ಹಾಗೂ ಸೇವಿಸುವರ ವಿರುದ್ದ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು,
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿ ಡಾ.ಮೋಹನ್ ದಾಸ್ ಮಾತನಾಡಿ, ತಂಬಾಕು ನಿಯಂತ್ರಣ ಕೋಶದಿಂದ ಜಿಲ್ಲೆಯಲ್ಲಿ ಏಪ್ರಿಲ್-2022ರಿಂದ ಸೆಪ್ಟಂಬರ್-2022ರವರೆಗೆ 618 ಪ್ರಕರಣಗಳನ್ನು ದಾಖಲಿಸಿ 58,060.00 ರೂಗಳ ದಂಡ ವಸೂಲಿ ಮಾಡಲಾಗಿದೆ. ತಂಬಾಕು ವ್ಯಸನಕ್ಕೆ ಒಳಗಾದ ಅಭ್ಯರ್ಥಿಗಳಿಗೆ ತಂಬಾಕು ವ್ಯಸನ ಮುಕ್ತ ಕೇಂದ್ರ, ಸಮಾಲೋಚನಾ ಹಾಗೂ ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ, ಕೋಟ್ಪಾ ಕಾಯ್ದೆ-2003 ಜಾರಿಗಾಗಿ ಇರುವ ಜಿಲ್ಲಾ ಮಟ್ಟದಲ್ಲಿ ಸಮಿತಿ, ತಾಲ್ಲೂಕು ಮಟ್ಟ ಸಮಿತಿ, ಕಾರ್ಯ ನಿರ್ವಹಿಸುತ್ತಿದ್ದು. ವಿವಿಧ ಇಲಾಖೆಗಳ ಮುಖ್ಯಸ್ಥರು ಈ ಸಮಿತಿಗೆ ಸದಸ್ಯರಾಗಿದ್ದಾರೆ. ಕಾಯ್ದೆಯ ಸೆಕ್ಷನ್ 6ಎ ಮತ್ತು ಬಿ ಪ್ರಕಾರ 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರಾಟ ಮಾಡುವುದನ್ನು ನಿμÉೀಧಿಸಲಾಗಿದೆ. ಶಾಲಾ ಕಾಲೇಜುಗಳ 100 ಯಾರ್ಡ್ ವ್ಯಾಪ್ತಿ ತಂಬಾಕು ಉತ್ಪನ್ನ ಮಾರುವ ಕುರಿತು ಕಡ್ಡಾಯವಾಗಿ ನಾಮಫಲಕ ಹಾಕಿಸದ ಮಾಲೀಕರಿಗೆ ದಂಡ ವಿಧಿಸಲಾಗುತ್ತಿದೆ, ತುಮಕೂರು ವಿಶ್ವವಿಧ್ಯಾಲಯವನ್ನು ತಂಬಾಕು ಮುಕ್ತÀ್ತ ಪ್ರದೇಶವಾಗಿ ಘೋಷಣೆ ಮಾಡಲಾಗಿದೆ ಎಂದರು.
ಸಭೆಯಲ್ಲಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿಧ್ಯಾಕುಮಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರೇಮ ಟಿ.ಎಲ್.ಎಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಶ್ರೀಧರ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ರವಿಪ್ರಕಾಶ್, ಜಿಲ್ಲಾ ಸಾಮಾಜಿಕ ಕಾರ್ಯಕರ್ತ ಹರೀಶ್ ಕೆ.ಎಸ್, ರುಕ್ಮೀಣಿ, ಇಮ್ರಾನ್‍ವುಲ್ಲಾ ಖಾನ್, ಜ್ಯೆಲ್ ಥಾಮಸ್, ಸಿಬ್ಬಂದಿಗಳು ಉಪಸ್ಥಿತರಿದ್ದರು.

(Visited 8 times, 1 visits today)