ತುಮಕೂರು
ಭಾರತೀಯ ಸಂಸ್ಕೃತಿಯಲ್ಲಿ ಅನೇಕ ಕಲೆಗಳು ಧರ್ಮಾಧಾರಿತವಾಗಿದ್ದು ಧರ್ಮವನ್ನು ಉಳಿಸುವಂತಹ ಕೈಂಕರ್ಯಗಳನ್ನ ಮಾಡುತ್ತಾ ಬಂದಿವೆ ಅದೇ ರೀತಿಯಾಗಿ ವೀರಗಾಸೆ ಕಲೆಯು ಕೂಡ ವೀರಶೈವ ಲಿಂಗಾಯಿತ ಧರ್ಮವನ್ನು ಅನುಸಾರ ಮಾಡಿ ವೀರಭದ್ರೇಶ್ವರನ ಅವತಾರವೆನ್ನುವಂತೆ ತನ್ನ ಕಲೆಯನ್ನು ಬಿಂಬಿಸುತ್ತಾ ಬಂದಿದ್ದು ಭಾರತೀಯ ಸಂಸ್ಕೃತಿ ಪರಂಪರೆಯುಳ್ಳ ಈ ವೀರಗಾಸೆ ಕಲೆ ಸೇರಿದಂತೆ ಇತರೆ ಕಲೆಗಳಿಗೆ ಅವಮಾನಿಸುವ ಬದಲು ಪೆÇ್ರೀತ್ಸಾಹಿಸಿ ಬೆಳೆಸಬೇಕು ಎಂದು ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದ ಬಾಳೆಹೊನ್ನೂರು ಮಠದ ಶ್ರೀ ಶ್ರೀ ವೀರಭದ್ರ ಶಿವಾಸ್ಚಾರ್ಯ ಸ್ವಾಮೀಜಿ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟವು ಇತ್ತೀಚೆಗೆ ತೆರೆಕಂಡ ಹೆಡ್ ಬುಷ್ ಚಲನಚಿತ್ರದಲ್ಲಿ ವೀರಗಾಸೆ ಕಲೆಯನ್ನು ಅವಮಾನಿಸಲಾಗಿದೆ ಎಂದು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸ್ವಾಮೀಜಿಗಳು
ಭಾರತದಲ್ಲಿ ಸನಾತನ ಧರ್ಮವಾಗಿ ಹಿಂದೂ ಧರ್ಮ ಬೆಳೆಸಿದ್ದು ಧರ್ಮದಲ್ಲಿ ಜನಪದ ಕಲೆ ಸಾಹಿತ್ಯ ಸಂಗೀತ ಸೇರಿದಂತೆ ಇತರೆ ಕಲಾ ಪ್ರಕಾರಗಳು ತಮ್ಮದೇ ಆದ ವೈಶಿಷ್ಟ್ಯದಿಂದ ಧರ್ಮ ಪ್ರಚಾರ ಮಾಡುತ್ತಾ ಬಂದಿವೆ ಇಂತಹ ಕಲೆಗಳನ್ನ ಸಾವಿರಾರು ಜನರು ಮೈಗೂಡಿಸಿಕೊಂಡು ಜೀವನದ ಅವಿಭಾಜ್ಯ ಅಂಗವಾಗಿ ಸ್ವೀಕಾರ ಮಾಡಿದ್ದಾರೆ ಇಂತಹದರಲ್ಲಿ ಹೆಡ್ ಬುಸ್ ಚಲನಚಿತ್ರದಲ್ಲಿ ಕಲೆಗಳನ್ನು ಆರಾಧಿಸುವವರಿಗೆ ಮನ ನೋಯಿಸುವ ಕೆಲಸ ಮಾಡಲಾಗಿದ್ದು ಕೂಡಲೇ ಸಂಬಂಧಪಟ್ಟ ನಿರ್ದೇಶಕ ಮತ್ತು ಸಾಹಿತ್ಯ ರಚನೆಕಾರರಾದ ಅಗ್ನಿ ಶ್ರೀಧರ್ ಅವರು ಇದರ ಕಥಾ ಹಂದರವನ್ನು ಬದಲಿಸಿ ಸೂಕ್ತವಾದ ಚಿತ್ರವನ್ನು ನಾಡಿಗೆ ನೀಡಬೇಕು ಎಂದು ಅವರು ಈ ವೇಳೆ ಒತ್ತಾಯಿಸಿದರು. ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷ ವೀರೇಶ್ ಗುಬ್ಬಿ ಅವರು ಮಾತನಾಡಿದರು. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾಧಿಕಾರಿಗಳ ಪರವಾಗಿ ತುಮಕೂರು ಉಪವಿಭಾಗ ಅಧಿಕಾರಿ ಅಜಯ್ ಮನವಿ ಸ್ವೀಕರಿಸಿದರು ಈ ವೇಳೆ ಭಜರಂಗದಳದ ಪುನೀತ್ ಕೆರೆಹಳ್ಳಿ ಸೇರಿದಂತೆ ಜಿಲ್ಲೆ ವಿವಿಧ ಭಾಗದ ವೀರಗಾಸೆ ಕಲಾವಿದರು ಸೇರಿದಂತೆ ಇತರರು ಉಪಸ್ಥಿತರಿದ್ದರು.