ತುಮಕೂರು
ಪ್ರತಿಯೊಬ್ಬ ಕನ್ನಡಿಗನು ಕನ್ನಡ ಭಾಷೆ ಉಳಿಸಿ ನೆಲ-ಜಲ-ಗಡಿ ರಕ್ಷಣೆ ಮಾಡಬೇಕು. ಕನ್ನಡ ಭಾಷೆ ಉಳಿಸಿ-ಬೆಳಸಲು ಕಟಿಬದ್ದರಾಗಿ, ತಮ್ಮ ದಿನನಿತ್ಯ ಚಟುವಟಿಕೆಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನ ನೀಡಿ, ಆಚರಣೆಯಲ್ಲಿ ಅಳವಡಿಸಿಕೊಳ್ಳೋಣ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್ ಕರೆ ನೀಡಿದರು.
ಇವರು ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ 67ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಕನ್ನಡ ಭಾಷೆ 5000 ಇತಿಹಾಸ ಉಳ್ಳ ಪ್ರಾಚೀನ ಭಾಷೆಯಾಗಿದೆ. ಹಲವಾರು ಶತಮಾನಗಳಿಂದ ಹಲವಾರು ರಾಜ ಮಹಾರಾಜರು ಪೋತ್ಸಾಹಿಸಿ, ಉಳಿಸಿ-ಬೆಳಸಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲೂ ಬ್ರಿಟಿಷರು ಸೇರಿದಂತೆ ನಂತರ ಮೈಸೂರು ಸಂಸ್ಥಾನ ಮಹಾರಾಜರು ಕನ್ನಡ ನಾಡು-ನುಡಿ-ಸಂಸ್ಕøತಿಯ ಆರಾಧಕರಾಗಿ ಆಡಳಿತದಲ್ಲಿ ಅಗ್ರಸ್ಥಾನ ನೀಡಿದ್ದರು. ಪ್ರಾಚೀನ ಭಾಷೆ ಕನ್ನಡ ಮತ್ತು ಕನ್ನಡ ಭಾಷಿಗರು ತಮ್ಮ ಮೂಲ ಕಲೆ-ಸಂಸ್ಕøತಿ ಸೊಗಡನ್ನು ಅತ್ಯಂತ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದರು. ಭಾಷಾವಾರು ಪ್ರಾಂತ್ಯಗಳು ರಚನೆಯಾದಾಗ ಮೈಸೂರು ರಾಜ್ಯವಿದ್ದಾಗ 1-11-1956ರಂದು ಅಂದಿನ ರಾಷ್ಟ್ರಪತಿಗಳಾಗಿದ್ದ ಬಾಬುರಾಜೇಂದ್ರಪ್ರಸಾದ್‍ರವರು ಹಲವಾರು ಜಿಲ್ಲೆಗಳನ್ನು ಒಳಗೊಂಡ 19 ಜಿಲ್ಲೆಗಳ ರಾಜ್ಯವನ್ನು ಮೈಸೂರು ಎಂದೇ ಘೋಷಿಸಿದರು. ತದ ನಂತರ 01-11-1973ರಲ್ಲಿ “ಕರ್ನಾಟಕ ರಾಜ್ಯ”ವೆಂದು ಹೆಸರು ಪಡೆಯಿತು ಎಂದು ವಿವರವಾಗಿ ಮಾಹಿತಿ ನೀಡಿದರು.
ಕನ್ನಡ ಭಾಷೆ ಮಾತನಾಡುವವರು ದಿನನಿತ್ಯ-ವರ್ಷಪೂರ್ತಿ ಕನ್ನಡದಲ್ಲೇ ವ್ಯವಹರಿಸಬೇಕು. ಕನ್ನಡ ಬೆಳಸೋಣ, ಉಳಿಸೋಣ ಎಂಬ ದಿಟ್ಟ ನಿರ್ಧಾರದಿಂದ ನಮ್ಮ ನಡೆ-ನುಡಿಯಾಗಿ, ದಿನನಿತ್ಯದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು. ಕನ್ನಡ ಶಾಲೆಗಳನ್ನು ಪೋತ್ಸಾಹಿಸಿ ಉಳಿಸಿ-ಬೆಳಸಬೇಕು. ಕನ್ನಡ ಶಾಲೆಗಳಲ್ಲಿರುವ ವಿದ್ಯಾರ್ಥಿಗಳಿಗೆ ಪೋತ್ಸಾಹದಾಯಕ ಕಾರ್ಯಕ್ರಮಗಳನ್ನು ಅಳವಡಿಸಿ, ಆಂಗ್ಲ ಮಾಧ್ಯಮಕ್ಕೆ ಮೊರೆ ಹೋಗುವುದನ್ನು ತಡೆಗಟ್ಟಿ, ಕನ್ನಡದ ಉಳಿವು-ಬೆಳವಣಿಗೆಗೆ ಶ್ರಮಿಸೋಣ ಎಂದು ಕರೆ ನೀಡಿದರು.
ಕನ್ನಡ ಭಾಷೆ ನಮ್ಮದೇ ನೆಲದಲ್ಲಿ ಆತಂಕದ ಪರಿಸ್ಥಿತಿಯಲ್ಲಿದ್ದು, ನೆರೆ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರಗಳಲ್ಲಿ ಸ್ಥಳೀಯ ಭಾಷೆಯ ಬಗ್ಗೆ ಅತಿ ವ್ಯಮೋಹ ಅಳವಡಿಸಿಕೊಂಡಂತೆ, ಪ್ರತಿಯೊಬ್ಬ ಕನ್ನಡಿಗನೂ ಪ್ರತಿಷ್ಠೆಯ ಸಂಕೇತವಾಗಿ ಕನ್ನಡ ಮಾತನಾಡುವುದು, ಓದುವ ಅಭಿರುಚಿ, ಸಂಸ್ಕøತಿಯ ಬೆಳವಣಿಗೆಗೆ ಮುಂದಾಗಬೇಕೆಂದರು.
ಕನ್ನಡ ಭಾಷೆ ಉಳಿಸಿ, ಬೆಳಸಿ : ಎ.ಸಿ. ಮಹದೇವಪ್ಪ
ಕನ್ನಡ ಭಾಷೆಯ ಬೆಳವಣಿಗೆಗೆ ಕನ್ನಡಿಗರೇ ಪೋತ್ಸಾಹಿಸಿ ಆದ್ಯತೆ ನೀಡುವುದಲ್ಲದೆ, ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಕನ್ನಡದ ಬಳಕೆಗೆ ಮುಂದಾಗಿ, ಕನ್ನಡ ರಾಜ್ಯೋತ್ಸವವನ್ನು ದಿನ ನಿತ್ಯವೂ ಆಚರಿಸಿ ಸಂಭ್ರಮಿಸಬೇಕೆಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಲೇಖಕ, ಸಾಹಿತಿ ಎ.ಸಿ.ಮಹದೇವಪ್ಪ ಮನವಿ ಮಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ಸ್ಥಳೀಯ ಭಾಷೆ ಪೋತ್ಸಾಹಿಸುತ್ತಿದ್ದು, ಕನ್ನಡ ಬಳಕೆ-ಬೆಳವಣಿಗೆಗೆ ಪ್ರಥಮಾದ್ಯತೆ ನೀಡಿ, ಪೋತ್ಸಾಹಿಸಿ, ಗೌರವಿಸುವ ಕೆಲಸವನ್ನು ಮಾಡುತ್ತಿರುವ ಬಗ್ಗೆ ಎಂ.ಬಿ.ನಂದೀಶ್ ಪ್ರಶಂಶಿಸಿದರು.
ಭಾಷಾ ಬೆಳವಣಿಗೆಗೆ ಮತ್ತು ಕನ್ನಡ ಉಳಿವಿಗೆ ಬದ್ದತೆ ಮತ್ತು ಕಾಳಜಿಯಿಂದ ನಡೆದುಕೊಳ್ಳುವಂತಾಗಬೇಕು. ನವಂಬರ್ ತಿಂಗಳು, ಮಾತ್ರ ಕನ್ನಡ ರಾಜ್ಯೋತ್ಸವದ ಸಂಧರ್ಭಗಳಲ್ಲಿ ಕಾರ್ಯಕ್ರಮ ರೂಪಿಸಿ ಆಚರಣೆ ಮಾಡುವಂತೆ ದಿನಿನಿತ್ಯವೂ ಕನ್ನಡದ ಕಂಪು ಪಸರಿಸುವಿಕೆಯಾಗಬೇಕು. ಕನ್ನಡ ಪುಸ್ತಕಗಳನ್ನು ಪೋತ್ಸಾಹಿಸಿ, ಓದುವ ಅಭ್ಯಾಸ ಬೆಳಸಿಕೊಳ್ಳಬೇಕಿದೆ. ಸರ್ಕಾರಗಳು ರೂಪಿಸುವ ಕಾರ್ಯಕ್ರಮ-ಯೋಜನೆಗಳ ಜೊತೆ ಜೊತೆಗೆ ವಿವಿಧ ಕನ್ನಡ ಪರ ಸಂಘಟನೆಗಳು ಕನ್ನಡದ ಅಭಿವೃದ್ಧಿ, ಪೋತ್ಸಾಹಕ್ಕೆ ಮುಂದಾಗಲಿ ಎಂದರು.
ಈ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿಗೆ ಕಾರ್ಯಕರ್ತರು ಪುಷ್ಪಾರ್ಚನೆ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದರು.
ಸಮಾರಂಭದಲ್ಲಿ ಮಹಾನಗರಪಾಲಿಕೆ ಸದಸ್ಯ ಹೆಚ್.ಮಲ್ಲಿಕಾರ್ಜುನ್, ಜಿಲ್ಲಾ ವಕ್ತಾರ ಕೆ.ಪಿ.ಮಹೇಶ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಪ್ರೇಮಾ ಹೆಗ್ಗಡೆ, ಓಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಸ್.ಪಿ.ಚಿದಾನಂದ್, ಜಿಲ್ಲಾ ಓಬಿಸಿ ಮೋರ್ಚಾ ಉಪಾಧ್ಯಕ್ಷ ಬನಶಂಕರಿಬಾಬು, ಎಸ್.ಸಿ.ಮೋರ್ಚಾ ಜಿಲ್ಲಾಧ್ಯಕ್ಷ ಎನ್.ನರಸಿಂಹಮೂರ್ತಿ,
ಸಾಮಾಜಿಕ ಜಾಲತಾಣ ಜಿಲ್ಲಾ ಸಹಸಂಚಾಲಕಿ ಶಕುಂತಲಾ ನಟರಾಜ್, ಕಾನೂನು ಪ್ರಕೋಷ್ಠದ ಜಿಲ್ಲಾ ಸಂಚಾಲಕ ಡಿ.ಸಿ.ಹಿಮಾನಂದ್, ಫಲಾನುಭವಿ ಪ್ರಕೋಷ್ಠದ ಜಿಲ್ಲಾ ಸಹಸಂಚಾಲಕ ಜಿ.ಎಸ್.ಶ್ರೀಧರ್, ಸದಸ್ಯೆ ಲತಾ ಬಾಬು, ಜಿಲ್ಲಾ ಮಾಧ್ಯಮ ಪ್ರಮುಖ್ ಟಿ.ಆರ್.ಸದಾಶಿವಯ್ಯ, ನಗರ ರೈತಮೋರ್ಚಾ ಅಧ್ಯಕ್ಷ ಹಾಗೂ ಟೂಡಾ ಸದಸ್ಯ ಎಸ್.ಹೆಚ್.ಜಗದೀಶ್, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೌಮ್ಯ.ಜಿ.ಎಲ್., ತುಮಕೂರು ನಗರ ಪ್ರಧಾನ ಕಾರ್ಯದರ್ಶಿ ಸೌಮ್ಯರವಿಚಂದ್ರ, ತುಮಕೂರು ನಗರ ಎಸ್.ಸಿ.ಮೋರ್ಚಾ ಖಜಾಂಚಿ ಕೆ.ಎ.ನರಸಿಂಹಮೂರ್ತಿ, ಕಾರ್ಯಕಾರಿಣಿ ಸದಸ್ಯ ವೆಂಕಟೇಶ್, ಗಿರೀಶ್, ತುಮಕೂರು ನಗರ ಮಂಡಲ ಕಾರ್ಯದರ್ಶಿ ಕುಮಾರ್, ಅಲ್ಪಸಂಖ್ಯಾತರ ಮೋರ್ಚಾದ ರಫೀಕ್ ಆಹಮ್ಮದ್, ಖಾಲೀದ್ ಇಕ್ಬಾಲ್, ಟಿ.ಎಸ್.ಚಾಂದ್‍ಪಾಷ ಪ್ರಮುಖರಾದ ಶೋಭಅಭಿಲಾಷ್, ಎನ್.ವಿ.ವೆಂಕಟೇಶ್, ಈಶ್ವರ ನಾಯಕ್, ಪುಟ್ಟರಾಜು, ಪಾಣಿ, ರಾಜ್‍ಗೋಪಾಲ್, ಹೆಚ್.ಸಣ್ಣರಂಗಯ್ಯ, ಆಂಜನಮೂರ್ತಿ ಮುಂತಾದವರು ಭಾಗವಹಿಸಿದ್ದರು.
ಸಭೆಯನ್ನು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಿ.ಕೆ.ಸಿದ್ದೇಗೌಡ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.