ತುಮಕೂರು
ಕನ್ನಡವನ್ನು ಬಳಸುವ ಮೂಲಕ ಬೆಳೆಸುವ ಕೆಲಸ ಮಾಡಬೇಕು ಎಂದು ತುಮಕೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ನಿರ್ಮಲ್ ರಾಜು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು ಕನ್ನಡ ನಾಡು ಪ್ರಾಚೀನ ಗ್ರೀಸ್, ರೋಮ್ ದೇಶಗಳೊಂದಿಗೆ ಸಂಪರ್ಕ ಹೊಂದಿದ್ದ ಪುರಾವೆಗಳಿವೆ. ಕನ್ನಡದ ಹಿರಿಮೆಗೆ ಅಗಾಧ ಇತಿಹಾಸವಿದೆ ಎಂದರು.
ಸಿಂಡಿಕೇಟ್ ಸದಸ್ಯ ಸುನಿಲ್ ಮಾತನಾಡಿ ಕನ್ನಡವು ಭವ್ಯ ಸಾಹಿತ್ಯ ಪರಂಪರೆ ಹಾಗೂ ಸಾಂಸ್ಕøತಿಕ ಹಿನ್ನೆಲೆಯುಳ್ಳದ್ದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರ ಕೊಡುಗೆ ಅದ್ವಿತೀಯವಾಗಿದೆ ಎಂದರು.
ತುಮಕೂರು ವಿವಿ ಅಧ್ಯಯನ ತಂಡವು ಇತ್ತೀಚೆಗೆ ಬನಾರಸ್ ವಿವಿ ಹಾಗೂ ಡೂನ್ ವಿವಿಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಆಳವಾದ ಅಧ್ಯಯನ ನಡೆಸಿದೆ. ಇನ್ನು ಕೆಲವೇ ದಿನಗಳಲ್ಲಿ ಆ ಕುರಿತ ವರದಿಯನ್ನು ಸಲ್ಲಿಸಲಿದ್ದು, ತುಮಕೂರು ವಿವಿಯಲ್ಲಿ ಸಾಕಷ್ಟು ಸುಧಾರಣೆ ತರಲು ಸಹಕಾರಿಯಾಗಲಿದೆ ಎಂದರು.
ಕನ್ನಡ ಪ್ರಾಧ್ಯಾಪಕ ಪ್ರೊ. ಡಿ. ವಿ. ಪರಮಶಿವಮೂರ್ತಿ, ಸಿಂಡಿಕೇಟ್ ಸದಸ್ಯ ರಾಜು ಮಾತನಾಡಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ. ಎ.ಎಂ. ಮಂಜುನಾಥ್ ಸ್ವಾಗತಿಸಿ, ವಂದಿಸಿದರು.