ತುಮಕೂರು
ಕರ್ನಾಟಕ ಪ್ರಾಂತ ರೈತ ಸಂಘ (ಕೆ.ಪಿ.ಆರ್.ಎಸ್.) ರಾಜ್ಯಾದ್ಯಾಂತ ಜಿಲ್ಲೆ ಮತ್ತು ತಾಲ್ಲೂಕು
ಕಛೇರಿಗಳ ಮುಂದೆ ಪ್ರತಿಭಟಿಸಿ ಬೆಂಗಳೂರಿನಲ್ಲಿ ನವೆಂಬರ್ 2 ರಿಂದ 4 ರವರೆಗೆ ಮೂರು ದಿನ ನಡೆಯುತ್ತಿರುವ
ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ರದ್ದು ಪಡಿಸಬೇಕೆಂದು ಒತ್ತಾಯಿಸಿ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಎದರು ನಡೆದ ಪ್ರತಿಭಟನೆ ಚಳುವಳಿಯನ್ನು ಉದ್ದೇಶಿಸಿ ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಂಚಾಲಕ ಸಿ.ಯತಿರಾಜು ಮಾತನಾಡಿ ಜಾಗತಿ ಹೂಡಿಕೆದಾರರ ಸಮಾವೇಶ ಬೆಂಗಳೂರಿನಲ್ಲಿ ಪ್ರಾರಂಭಗೊಂಡಿದೆ ನಿರಂತರವಾಗಿ ರೈತರಾದ ನಾವೆಲ್ಲಾ ಲೋಕಲ್ ಇನ್‍ವೆಸ್ಟರ್ ಆಗಿ ಲಾಭ-ನಷ್ಠಕ್ಕೆ ಜಗ್ಗದೇ ನಾವೇ ಉದ್ಯೋಗ ಕೊಡುತ್ತಿರುವುದು ಸರ್ಕಾರಗಳ ಗಮನಕ್ಕೆ ಬರುತ್ತಿಲ್ಲ. ದೊಡ್ಡ ಹಣವಂತರು ಜಾಗತಿಕ ಹೂಡಿಕೆ ಮಾತ್ರ ಕಾಣುತ್ತಿದೆ. ಓಟು ಹಾಕಿ ಅವರನ್ನು ಆಡಳಿತಕ್ಕೆ ತಂದಿರುವ ಸಣ್ಣ ಹೂಡಿಕೆದಾರರ ಹಿತಾಸಕ್ತಿಯನ್ನು ಮೊದಲು ಕಾಪಾಡದೇ ಕೇವಲ ಮತ ಪಡೆಯಲಷ್ಠೆ ಸೀಮಿತ ಗೊಳಿಸಿ ಬಹುಸಂಖ್ಯಾಂತರನ್ನು ತುಳಿಯುವ ನೀತಿಗಳನ್ನು ಜಾರಿ ಮಾಡುವುದರ ವಿರುದ್ಧ ಅವರ ಕಣ್ಣು ತೆರೆಸಲು ಬಲಿಷ್ಠ ಹೋರಾಟ ಮಾಡಬೇಕೆಂದರು.
ಜಿಲ್ಲಾಉಪಾಧ್ಯಕ್ಷ ಬಿ.ಉಮೇಶ್ ಮಾತನಾಡಿ ಇದುವರೆಗೆ ನಡೆದಿರುವ ಜಾಗತಿ ಬಂಡವಾಳದಾರರ ಹೂಡಿಕೆದಾರರ ಸಭೆಗಳು ಬಗ್ಗೆ ಶ್ವೇತಪತ್ರ ಹೋರಡಿಸಬೇಕು. ಅದು ದೇಶಕ್ಕೆ ನೀಡಿದ ಕೊಡುಗೆಯನ್ನು ಜನತೆಗೆ ತಿಳಿಸಬೇಕು. ಇದೇ ಸಂದರ್ಭದಲ್ಲಿ ಡಾಲರ್ ಎದುರು ರೂಪಾಯಿ ಬೆಲೆ ಕುಸಿತ, ಅಂತರರಾಷ್ರ್ಠೀಯವಾಗಿ ದೇಶದ ಹಸಿವಿನ ಸ್ಥಾನ ಹೆಚ್ಚಳ ಮತ್ತು ಎಲ್ಲಾ ವಿಭಾಗದ ಜನರು ಹೋರಾಟ ನಡೆಸುತ್ತಿದ್ದರು. ಅವರ ಸಮಸ್ಯೆಗಳ ಬಗ್ಗೆ ಗಮನ ನೀಡದೇ ಎಲ್ಲಾರನ್ನು ಮುರ್ಖರನ್ನಾಗಿಸಿ ತಾವು ಮಾಡಿದೇ ಸರಿ ಎಂಬ ದೋರಣೆ ಸರಿಯಲ್ಲ. ಎಲ್ಲರನ್ನು ಒಳಗೊಂಡು ಮುನ್ನೆಡಿಯುವ ರಾಜಕೀಯ ಇಚ್ಚಾಶಕ್ತಿಯನ್ನು ಕೇಂದ್ರ-ರಾಜ್ಯ ಸರ್ಕಾರಗಳು ಒಳಗೊಳ್ಳಬೇಕೆಂದರು. ಪ್ರತಿಭಟನೆಯಲ್ಲಿ ಜಾಗತಿ ಬಂಡವಾಳದಾರರ ಸಭೆಯನ್ನು ರದ್ದು ಮಾಡಬೇಕು, ರೈತರ ಬಗರ್ ಹುಕಂ ಹಾಗೂ ಅರಣ್ಯ ಭೂಮಿ ಸಾಗುವಳಿಯನ್ನು ಸಕ್ರಮ ಮಾಡಬೇಕು, ರೈತರ-ದಲಿತರ ಬಗರ್ ಹುಕಂ ಭೂಮಿಯನ್ನು ಮಠ-ಮಂದಿರ-ಟ್ರಸ್ಟ್ ಮತ್ತು ರಿಯಲ್ ಎಸ್ಟೇಟ್ ಕಬಳಿಕೆಯಿಂದ ರಕ್ಷಿಸಬೇಕು. ಈಗ ಆಗಿರುವ ಕಾನೂನು ಬಾಹಿರ ಕಬಳಿಕೆಯಿಂದ ಭೂಮಿ ವಾಪಸ್ಸು ಪಡೆದು ಮತ್ತೇ ಸ್ವಾಧೀನದಲ್ಲಿದ್ದ ರೈತರಿಗೆ ಹಂಚಬೇಕು. ಬಲವಂತದ ಭೂ ಸ್ವಾಧೀನ ನಿಲ್ಲಿಸಬೇಕು ಅತಿವೃಷ್ಠಿಯಿಂದ ಸಂಪೂರ್ಣ ಆಳಾಗಿ ಕುಸಿತಗೊಂಡಿರುವ ಹೇಮಾವತಿ ನಾಲೆಯನ್ನು ಸರ್ಕಾರ ತಕ್ಷಣ ದುರಸ್ಥಿಗೊಳಿಸಬೇಕು ಎಂದು ಒತ್ತಾಯಿಸಲಾಯಿತು. ಚಳುವಳಿಯಲ್ಲಿ ಜಿಲ್ಲಾಮುಖಂಡರಾದ ದೊಡ್ಡನಂಜಯ್ಯ, ಬಸವರಾಜು, ನರಸಿಂಹಮೂರ್ತಿ, ಶಿರಾ ತಾಲ್ಲೂಕು ರಾಚಪ್ಪ, ಆಶ್ವತ್ಥಪ್ಪ, ತುಮಕೂರು ಕರಿಬಸಯ್ಯ, ತುರುವೇಕೆರೆ ಯಾದವಮೂರ್ತಿ, ಸಿ.ಎನ್.ಹಳ್ಳಿ ಚಂದ್ರಪ್ಪ, ಕುಣಿಗಲ್ ಬೋರಣ್ಣ, ಜನಾಂದೋಳನ ಸಂಘಟನೆಯ ಪಂಡಿತ್ ಜವಾಹರ್, ಸಿಐಟಿಯು ಕಟ್ಟಡ ಕಾರ್ಮಿಕ ಸಂಘಟನೆ ಮುಖಂಡ ನಂದೀಶ್ ಮುಂತಾದವರು ನೇತೃತ್ವವಹಿಸಿದ್ದರು.