ಕೊರಟಗೆರೆ
ರಾಜ್ಯದಲ್ಲಿ ಕನ್ನಡ ಉಳಿಸುವ ಬೆಳೆಸುವ ಸೇವೆ ಮಾಡುವುದಕ್ಕಾಗಿ ಮತ್ತು ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಹಗಲಿರುಳು ಶ್ರಮಿಸಿರುವುದಾಗಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಅವರು ಪಟ್ಟಣದ ಕಾಳಿದಾಸ ಪ್ರೌಢಶಾಲೆ ಆವರಣದಲ್ಲಿ ನಾಡಪ್ರಭು ರಣಬೈರೇಗೌಡರ ಸಾÀಂಸ್ಕøತಿಕ ವೇದಿಕೆಯಿಂದ ಏರ್ಪಡಿಸಿದ್ದ 67 ವೈಭವದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಲೂಕಿನ 600 ಆಟೋ ಚಾಲಕರಿಗೆ ಸಮವಸ್ತ್ರ ವಿತರಸಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆಸಲ್ಲಿಸಿದ 60 ಮಂದಿ ಗಣ್ಯರಿಗೆ ಸನ್ಮಾನ ನೆರೆವೇರಿಸಿ ಮಾತನಾಡಿ ಸ್ವಾತಂತ್ರ ಪೂರ್ವ ಮತ್ತು ನಂತರದಲ್ಲಿ ಭಾರತದಲ್ಲಿ ವಿವಿಧ ಭಾಗಗಳಲ್ಲಿ ಹಂಚಿಹೋಗಿದ್ದ ಕನ್ನಡ ನಾಡನ್ನು ಒಟ್ಟು ಗೂಡಿಸಿಲು ಆಲೂರು ವೆಂಕಟರಾಯರಿಂದ ಪ್ರಾರಂಭವಾದ ಹೋರಾಟ ಹಲವು ದಶಕಗಳ ಕಾಲ ನಡೆದು ಅನೇಕ ಮಹನೀಯರ ತ್ಯಾಗದಿಂದ ಕರ್ನಾಟಕ ಏಕೀರಣವಾಯಿತು, ದೇಶದಲ್ಲೇ 8 ಜ್ಞಾನ ಪೀಠ ಪ್ರಶÀಸ್ತಿ ಪಡೆದ ಹೆಗ್ಗಳಿಕೆ ನಮ್ಮ ನಾಡಿನದು ಇಂತಹ ಕನ್ನಡ ಭಾಷೇಯನ್ನು ನಮ್ಮ ನಾಡಿನಲ್ಲೇ ಉಳಿಸಲು ಹೋರಟ ಮಾಡಬೇಕಾಗಿರುವುದು ದುರಾದೃಷ್ಟಕರ, ನಮ್ಮ ರಾಜಧಾನಿ ಬೆಂಗಳೂರು, ಗಡಿ ಜಿಲ್ಲೆ ಬೆಳಗಾವಿ ಸೇರಿದಂತೆ ಹಲವು ಕಡೆ ಕನ್ನಡ ವಿರೋದತನÀವನ್ನು ಮಟ್ಟ ಹಾಕಿ ಕನ್ನಡಬಾಷೆಯನ್ನು ಬೆಳಸಬೇಕಿದೆ ಎಂದರು.
ಕೊರಟಗೆರೆ ಪಟ್ಟಣದ ಇತಿಹಾಸದಲ್ಲೆ ಕನ್ನಡ ರಾಜ್ಯೋತ್ಸವನ್ನು ರಣಭÉೈರೇಗೌಡ ಸಂಸ್ಕøತಿಕ ವೇದಿಕೆಯಿಂದ ವೈಭವಾಗಿ ಅದ್ದೂರಿಯಾಗಿ ಅಚರಿಸಿದ್ದು, ಈ ಕಾರ್ಯಕ್ರಮಕ್ಕೆ ನಮ್ಮ ನೂರಾರು ಆಟೋ ಚಾಲಕರು ಮೆರವಣಿಗೆಯಲ್ಲಿ ನಮ್ಮ ಜೊತೆ ಭಾಗಿಯಾಗಿದ್ದಾರೆ ನಮ್ಮ ರಾಜ್ಯದಲ್ಲಿ ಕನ್ನಡ ಉಳಿಯಲು ಆಟೋ ಚಾಲಕರು ಮುಖ್ಯ ಕಾರಣರಾಗಿದ್ದಾರೆ ಜನ ಸೇವೆಯಲ್ಲಿ ಅವರ ಕೊಡುಗೆ ನಾಡಿಗೆ ಅಪಾರವಾಗಿದೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಸಂಜೆ 4 ಗಂಟೆಗೆ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ಶಾಸಕ ಡಾ.ಜಿ.ಪರಮೇಶ್ವರ್ ರವರು ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ವಿವಿಧ ಸಾಂಸ್ಕøತಿಕ ಕಲಾ ತಂಡಗಳೊಂದಿಗೆ ತಾಯಿ ಭುವನೇಶ್ವರಿಯ ಭಾವಚಿತ್ರ ಹಾಗೂ ಆಟೋ ಚಾಲಕರೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ವೇದಿಕೆಯಲ್ಲಿ ತಹಶೀಲ್ದಾರ್ ನಾಹಿದಾ ಜಮ್ ಜಮ್, ಪ.ಪಂ.ಸದಸ್ಯರುಗಳಾದ ಎ.ಡಿ.ಬಲರಾಮಯ್ಯ, ಕೆ.ಆರ್.ಓಬಳರಾಜು, ನಾಗರಾಜು, ನಂದಿಶ್ ಮಾಜಿ ಅದ್ಯಕ್ಷ ಸೈಯದ್ ಸೈಪಲ್ಲಾ, ಮಾಜಿ ನಾಮಿನಿ ಸದಸ್ಯ ಕೆ.ಬಿ,ಲೋಕೇಶ್, ಜಿ.ಪಂ.ಮಾಜಿ ಸದಸ್ಯ ಪ್ರಸನ್ನ ಕುಮಾರ್, ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಯ್ಯ, ಮಾಜಿ ನಗರ ಸಭಾ ಸದಸ್ಯ ವಾಲೇಚಂದ್ರಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥನಾರಾಯಣ್, ಯುವ ಕಾಂಗ್ರೆಸ್ ಅದ್ಯಕ್ಷ ವಿನಯ್‍ಕುಮಾರ್, ದೀಪಕ್, ರಂಜಿತ್ ಬೈರೇಶ್, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಎಲ್.ರಾಜಣ್ಣ, ಪ್ರಸಿದ್ದ ಹಿನ್ನೆಲೆ ಗಾಯಕಿ ಲಕ್ಷೀಪ್ರಸಾದ್, ಮುಖಂಡರಾದ ಮಕ್ತಿಯಾರ್, ಗಟ್ಲಹಳ್ಳಿ ಕುಮಾರ್, ಕೆ.ಎಂ.ಸುರೇಶ್ ಮಹಮದ್‍ಇಸ್ಮಾಯಿಲ್, ಟಿಯಪಿಸಿಎಂಎಸ್ ಉಪಾದ್ಯಕ್ಷ ರಾಘವೇಂದ್ರ, ಚಿಕ್ಕರಂಗಯ್ಯ, ಜುಬೇರ್, ಕಾರ್‍ಮಹೇಶ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಜಯಮ್ಮ, ಶೈ¯ಜಾ, ಕವಿತಾ, ಲಕ್ಷ್ಮಮ್ಮ, ರಾಖಿ, ಗೋಪಿನಾಥ್, ಯುವ ಮತ್ತು ಎನ್,ಎಸ್.ಯು.ಐ ಕಾರ್ಯಕರ್ತರು ಸೇರಿದಂತೆ ಇನ್ನಿತರರು
ಉಪಸ್ಥಿತರಿದ್ದರು.