ತುಮಕೂರು


ಪ್ರತಿ ವಿದ್ಯಾರ್ಥಿಯೂ ಜೀವನದಲ್ಲಿ ಶಿಸ್ತು ಮತ್ತು ಸಂಸ್ಕಾರ ಹೊಂದಬೇಕು,ಜೀವನದಲ್ಲಿ ಯಶಸ್ಸು ಸಾಧಿಸಲು ಹಲವು ಜನರ ಪರಿಶ್ರಮ,ತ್ಯಾಗ,ಮಾರ್ಗದರ್ಶನ ಇರುತ್ತದೆ ಈ ನಿಟ್ಟಿನಲ್ಲಿ ನಾನು ಪುಣ್ಯವಂತೆ ನನ್ನ ವೃತ್ತಿ ಬದುಕಿನಲ್ಲಿ ಎಲ್ಲರೂ ನನಗೆ ಆಶೀರ್ವಾದ,ಸಹಕಾರ ನೀಡಿ ಮಾರ್ಗದರ್ಶನ ನೀಡಿದರು,ಕಳೆದ 11 ವರ್ಷಗಳಿಂದ ಈ ಶಾಲೆಯಲ್ಲಿ ಸಹಾಯಕ ಶಿಕ್ಷಕಿಯಾಗಿ ನಂತರ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿ ಉತ್ತಮ ಹೆಸರುಗಳಿಸಲು ಸಾಧ್ಯವಾಯಿತು ಎಂದು ಮುಖ್ಯ ಶಿಕ್ಷಕಿ ಜ್ಯೋತಿ ರವರು ತಿಳಿಸಿದರು.
ತುಮಕೂರು ನಗರದ ರೈಲ್ವೇ ಸ್ಟೇಷನ್ ರಸ್ತೆಯಲ್ಲಿರುವ ಸರ್ಕಾರಿ ಮಾದರಿ ಹಿರಿಯ
ಪ್ರಾಥಮಿಕ ಪಾಠಶಾಲೆಯಲ್ಲಿ ಸೇವೆ ಸಲ್ಲಿಸಿ ಇಂದು ನಿವೃತ್ತರಾದ ಜ್ಯೋತಿರವರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಶಿಕ್ಷಕರ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಮಂಜುನಾಥ್ ರವರು ಈ ಶಾಲೆಯ ನೂತನ ಕಟ್ಟಡ ಆಗಲು ಜ್ಯೋತಿರವರ ಕೊಡುಗೆ ಅಪಾರ,ಅವರಿಗಿರುವ ಬದ್ಧತೆ, ಮಕ್ಕಳ ಮೇಲೆ ಇರುವ ಪ್ರೀತಿಯಿಂದ ಸ್ಥಳೀಯ ಶಾಸಕರ ಮತ್ತು ನಬಾರ್ಡ್ ಅನುದಾನದಲ್ಲಿ ಈ ನೂತನ ಶಾಲಾ ಬಿಲ್ಡಿಂಗ್ ನಿರ್ಮಿಸಿದ್ದು ಉದಾಹರಣೆ,ನಗರದಲ್ಲಿ ಸರ್ಕಾರಿ ಶಾಲೆಗಳು ಬೆಳೆಯಬೇಕು,ಅಭಿವೃದ್ಧಿ ಆಗಬೇಕು,ಜ್ಯೋತಿರವರ ನಿವೃತ್ತಿ ಜೀವನ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಚಂದ್ರಯ್ಯನವರು ಮಾತನಾಡಿ ಯಶಸ್ವಿ ವ್ಯಕ್ತಿಯ ಹಿಂದೆ ಹಲವರು ಇರುತ್ತಾರೆ ಅದೇ ರೀತಿ ಈ ಶಾಲೆ ಅಭಿವೃದ್ಧಿ ಆಗಬೇಕಾದರೆ ಜ್ಯೋತಿರವರ ಕೊಡುಗೆ ಅಪಾರವಾದುದು,ಮಕ್ಕಳಿಗೆ ಮಧ್ಯಾಹ್ನದ ಉತ್ತಮ ಊಟ,ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಲು ಅವರ ಕೊಡುಗೆ ಅಪಾರ ಎಂದು ಹೇಳಿದರು.
ಶಾಲೆಯ ಹಳೆಯ ವಿದ್ಯಾರ್ಥಿ ಪತ್ರಕರ್ತ ಕೆ.ಬಿ.ಚಂದ್ರಚೂಡ ಮಾತನಾಡಿದರು.
ವೇದಿಕೆಯಲ್ಲಿ ಶಿವರಾಮು, ನೂತನ ಮುಖ್ಯಶಿಕ್ಷಕರಾದ ನಳಿನ, ವಿಜಯಶ್ರೀ, ನಾಗಮಣಿ, ಶೋಭಾ, ಲೋಕೇಶ್, ಇಂಜಿನಿಯರ್ ನಟೇಶ್,ಶಾಲಾ ಅಭಿವೃದ್ಧಿ ಸಮಿತಿಯ ಗಿರಿಜಮ್ಮ, ಹುಮಾಯುನ್, ದಳವಾಯಿ, ಗದ್ಯಪ್ಪ, ಶೀಲಾ, ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

(Visited 9 times, 1 visits today)