ತುಮಕೂರು


ರಾಜ್ಯದ ಪರಿಶಿಷ್ಟ ವರ್ಗದವರಿಗೆ ಶೇಕಡ 7 ರಷ್ಟು ಮೀಸಲಾತಿ ಹೆಚ್ಚಿಸಿರುವುದರ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ಸಚಿವ ಸಂಪುಟ ಸದಸ್ಯರಿಗೆ ಅಭಿನಂದನೆ ಸಲ್ಲಿಸುವ ವಿರಾಟ ಸಮಾವೇಶ ನವಂಬರ್ 20 ರಂದು ಬಳ್ಳಾರಿಯಲ್ಲಿ ಆಯೋಜಿಸಲಾಗಿದೆ. ಈ ಸಮಾವೇಶಕ್ಕೆ ತುಮಕೂರು ಜಿಲ್ಲೆಯಿಂದ ಭಾರೀ ಸಂಖ್ಯೆಯಲ್ಲಿ ಎಸ್.ಟಿ. ಸಮುದಾಯದ ಕಾರ್ಯಕರ್ತರು, ಪದಾಧಿಕಾರಿಗಳು, ಪ್ರಮುಖರು ಭಾಗವಹಿಸಲಿದ್ದಾರೆಂದು ಬಿಜೆಪಿ ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಎ.ವಿಜಯಕುಮಾರ್ ತಿಳಿಸಿದರು.
ಇಂದು ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಎಸ್.ಟಿ. ಮೋರ್ಚಾ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡುತ್ತಾ, ಪರಿಶಿಷ್ಟ ವರ್ಗಕ್ಕೆ ಹಲವಾರು ದಶಕಗಳಿಂದ ಜನಸಂಖ್ಯೆಗೆ ಅನುಗುಣವಾಗಿ ಎಸ್.ಟಿ. ಜನಾಂಗಕ್ಕೆ ಸೇರುವ 51 ಜಾತಿ/ವರ್ಗಗಳು ಮೀಸಲಾತಿ ಹೆಚ್ಚಳಕ್ಕೆ ಮನವಿ ಮಾಡುತ್ತಿದ್ದನ್ನು ಪುರಸ್ಕರಿಸಿ, ಹಾಲಿ ಇದ್ದ ಶೇಕಡ 4 ರಿಂದ 7ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಿ ಘನವೆತ್ತ ರಾಜ್ಯಪಾಲರಿಂದ ಅಂಗೀಕಾರ ಮಾಡಿಸಿ, ಮೀಸಲಾತಿ ಜಾರಿಗೆ ಮುಂದಾದ ರಾಜ್ಯ ಬಿಜೆಪಿ ಸರ್ಕಾರದ ನೇತೃತ್ವ ವಹಿಸಿರುವ ಬಸವರಾಜ ಬೊಮ್ಮಾಯಿ, ಸಚಿವರಾದ ಶ್ರೀರಾಮುಲುರವರು ಹಾಗೂ ಎಸ್.ಟಿ. ಸಮುದಾಯದ ಶಾಸಕರಿಗೆ ಸಲ್ಲಿಬೇಕಿದೆ ಎಂದರು.
ಕೇಂದ್ರದ ಪ್ರಧಾನಿ ನರೇಂದ್ರಮೋದಿ ಮತ್ತು ರಾಜ್ಯದ ಬಸವರಾಜ ಬೊಮ್ಮಾಯಿರವರ ಡಬ್ಬಲ್ ಇಂಜಿನ್ ಸರ್ಕಾರಗಳು ಪರಿಶಿಷ್ಟ ವರ್ಗದವರಿಗೆ ರಾಜಕೀಯ, ಸಾಮಾಜಿಕವಾಗಿ ಭಾರೀ ಕೊಡುಗೆ, ಅನುದಾನ, ಜವಾಬ್ದಾರಿ ಸ್ಥಾನಗಳನ್ನು ಕಲ್ಪಿಸಿ ಕೊಟ್ಟಿರುವ ಬಗ್ಗೆಯೂ ಸಮಗ್ರ ಮಾಹಿತಿಯನ್ನು ಕಾರ್ಯಕರ್ತರಿಗೆ ವಿವರಿಸಿ, ನಮ್ಮ ಸಮುದಾಯದ ಶ್ರೇಯೋಭಿವೃದ್ಧಿಗೆ ಸಹಕಾರಿಯಾಗುವಲ್ಲಿ ಸಂಪೂರ್ಣ ಬೆಂಬಲವಾಗಿರುವವರಿಗೆ ಮತ ಹಾಕುವ ಮೂಲಕ ಬೆಂಬಲಿಸೋಣ. ಈ ಸಂಬಂಧ ಜಿಲ್ಲಾಧ್ಯಕ್ಷರೊಂದಿಗೆ ಜಿಲ್ಲಾ ಪ್ರವಾಸ ಮಾಡಲಾಗುವುದೆಂದು ಎ. ವಿಜಯಕುಮಾರ ಹೇಳಿದರು.
ಇದೇ ನವಂಬರ್ 20 ರಂದು ಬಳ್ಳಾರಿಯಲ್ಲಿ ನಡೆಯುವ ಬೃಹತ್ ಸಮಾವೇಶಕ್ಕೆ ಜಿಲ್ಲೆಯ ಎಲ್ಲಾ ಮಂಡಲ, ವಾರ್ಡ್, ಬೂತ್‍ನಿಂದ ಎಸ್.ಟಿ.ಸಮುದಾಯದ ಪ್ರಮುಖರು, ಕಾರ್ಯಕರ್ತರೊಂದಿಗೆ ತೆರಳಿ ಸಮಾವೇಶ ಯಶಸ್ವಿಗೊಳಿಸಲು ಕರೆ ನೀಡಿದರು.
ಸಭೆಯಲ್ಲಿ ಬಿಜೆಪಿ ಎಸ್.ಟಿ. ಮೋರ್ಚಾ ಉಪಾಧ್ಯಕ್ಷರಾದ ಕೆ.ಹರೀಶ್, ವರಮಹಾಲಕ್ಷ್ಮೀ, ವಿ.ಮಂಜುನಾಥ್, ಕಾರ್ಯದರ್ಶಿ ಜಿ.ಸ್ವಾಮಿ, ಖಜಾಂಚಿ ಧನುಷ್, ತುಮಕೂರು ಮಂಡಲ ಅಧ್ಯಕ್ಷ ಜೆ.ಮೋಹನ್‍ಕುಮಾರ್, ಉಪಾಧ್ಯಕ್ಷ ಸಣ್ಣರಂಗಯ್ಯ, ಪ್ರಧಾನಕಾರ್ಯದರ್ಶಿ ಬಿ.ಆರ್.ವಿಜಯಕುಮಾರ್, ತುರುವೇಕೆರೆ ಮಂಡಲ ಅಧ್ಯಕ್ಷ ಸೋಮಶೇಖರಯ್ಯ, ಪ್ರಧಾನಕಾರ್ಯದರ್ಶಿ ಹೆಚ್.ವಿ.ವಸಂತಕುಮಾರ್, ತುಮಕೂರುಗ್ರಾಮಾಂತರ ಅಧ್ಯಕ್ಷ ಎನ್.ನಟರಾಜು, ಪ್ರಧಾನ ಕಾರ್ಯದರ್ಶಿಗಳಾದ ಕಾಂತರಾಜು ಮತ್ತು ನಟರಾಜುರವರುಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಎಸ್.ಟಿ. ಮೋರ್ಚಾ ಜಿಲ್ಲಾ ಪ್ರಭಾರಿ ಹಾಗೂ ವಕ್ತಾರ ಕೆ.ಪಿ.ಮಹೇಶ ಪ್ರಸ್ತಾವಿಕ ನುಡಿಯನ್ನು ಆಡಿದರೆ, ಜಿಲ್ಲಾ ಎಸ್.ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯು.ಆರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

(Visited 1 times, 1 visits today)