ತುಮಕೂರು

ಜಿಲ್ಲಾ ಕೇಂದ್ರದಲ್ಲಿ ಇರುವ ಸರ್ಕಾರಿ ಅಸ್ವತ್ರೆಯಲ್ಲಿ ಮಹಿಳೆಯೊಬ್ಬರು ಆಧಾರ್ ಕಾರ್ಡ, ರೆಷನ್‍ಕಾರ್ಡ ಇಲ್ಲದ ಕಾರಣ ಹೆರಿಗೆ ಮಾಡಿಸಲು ನಿರಾಕರಿಸಿ ಕರ್ತವ್ಯ ನಿರ್ಲಕ್ಷ ತೋರಿದ ಕಾರಣ ಒಬ್ಬ ತಾಯಿ ಮತ್ತು ಜವಳಿ ಮಕ್ಕಳ ಸಾವಿಗೆ ಕಾರಣವಾಗಿರುವ ಘಟನೆ ನೆನ್ನೆ ದಿನ ನಡೆದಿರುವುದನ್ನು ಸಿಪಿಐ[ಎಂ] ಪಕ್ಷದ ತುಮಕೂರು ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಅಮಾಯಕರ ಸಾವಿಗೆ ಸಂತಾಪ ಸೂಚಿಸಿದೆ. ಈ ಘಟನೆಗೆ ಕಾರಣವಾಗಿರುವ ಎಲ್ಲಾ ಅಧಿಕಾರಿಗಳನ್ನು ಈ ಕೂಡಲೇ ತನಿಕೆಗೆ ಒಳಪಡಿಸಿ, ಕಾನೂನು ಕ್ರಮವಹಿಸುವಂತೆ ಸಿಪಿಐ[ಎಂ] ಜಿಲ್ಲಾ ಸಮಿತಿ ಅಗ್ರಹಿಸುತ್ತದೆ. ಸರ್ಕಾರ ಒಂದು ಕಡೆ ಆದಾರ್ ಖಡ್ಡಾಯವಿಲ್ಲ ಎಂದು ಕಡೆ ಹೇಳುತಿದ್ದರು ಇನ್ನೂಂದಕಡೆಯಿಂದ ಮೌಖಿವಾಗಿ ಜಾರಿಗೊಳಿಸುವುದು ಮತ್ತು ಬದಲಾದ ಸಂಧರ್ಬದಲ್ಲಿ ಮಾರ್ಗಸೂತ್ರಗಳನ್ನು ರೂಪಿಸದೆ ಇರುವುದು ಹಾಗೂ ಸರ್ಕಾರದಲ್ಲಿರುವ ಭ್ರಷ್ಠಾರಚಾರ ಸಹ ಈ ಸಾವುಗಳಿಗೆ ಸರ್ಕಾರವೇ ಪರೋಕ್ಷವಾಗಿ ಕಾರಣವಾಗಿದೆ. ಆದ್ದರಿಂದ ತಕ್ಷಣ ಆರೋಗ್ಯ ಸಚಿವರ ರಾಜೀನಾಮೆಯನ್ನು ಪಡೆಯಬೇಕು. ತುಮಕೂರು ಜಿಲ್ಲಾ ಅಸ್ಪತ್ರೆ ಸೇರಿದಂತೆ ತಾಲ್ಲುಕು ಕೇಂದ್ರಗಳಲ್ಲಿ ಸಹ ಸರ್ಕಾರಿ ಅಸ್ವತ್ರೆಗಳಲ್ಲಿ ರೋಗಿಗಳ ಜೊತೆಯಲ್ಲಿ ಸ್ನೇಹ ಪೂರ್ವವಾಗಿ ನಡೆದು ಕೋಳ್ಳುವುದರಲ್ಲಿ ತ್ರಿರ್ವ ಕೋರತೆಗಳಿವೆ. ಜನಸ್ನೇಹಿವರ್ತನೆ ತೋರದೆ ಅಮಾನವಿವಾಗಿ ನಡೆದುಕೊಳ್ಳುವುದನ್ನು ತಪ್ಪಿಸಲು ವಿಪರೀತ ಕೆಲಸದ ಒತ್ತಡಕ್ಕೆ ಸಿಲುಕಿರುವುದು ಒಂದು ಕಾರಣ ಎಂದು ಹೇಳಲಾಗುತ್ತಿದೆ. ಸರ್ಕಾರ ಎಲ್ಲಾ ಅಸ್ಪತ್ರೆಗಳಿಗೆ ಅಗತ್ಯ ಸಿಬ್ಬಂದಿಯನ್ನು ನೇಮಿಸುವಂತೆ ಸಿಪಿಐ[ಎಂ] ಒತ್ತಾಯಿಸುತ್ತದೆ.
ಎಲ್ಲಾ ಅಸ್ವತ್ರೆಗಳಲ್ಲಿ ಗುತ್ತಿಗೆ ಕಾರ್ಮಿಕರಿಗೆ ಸರಿಯಾದ ಸಂಬಂಳನೀಡದೆ ವಿಪರಿತ ಕೆಲಸ ಹೇರಲಾಗಿದೆ ಇದರಿಂದ ರೋಗಿಗಳಿಂದ ವಸೂಲಿಗೆ ಇಳಿಯುವಂತಾಗಿರುವ ಒಗ್ಗೆ ಸಹ ಸಕಾಷ್ಟು ದೂರುಗಳಿವೆ. ಎಲ್ಲಾ ಗುತ್ತಿಗೆ ಕಾರ್ಮಿಕರಿಗ ಕಾನೂನು ಬದ್ದವಾಗಿ ಸಿಗಬೇಕಾದ ಸೌಲಭ್ಯಗಳನ್ನು ನೀಡಿ – ಅವರಿಂದ ಸಮರ್ಪಕ ಕೆಲಸ ಪಡೆಯುವಂತೆ ಮಾಡಲು ಜಿಲ್ಲಾಡಳಿತ ಕ್ರಮ ವಹಿಸುವಂತೆ ಸಿಪಿಐ
[ಎಂ] ಒತ್ತಾಯಿಸಿದೆ. ನಗರ ಶಾಸಕರು ಹಾಗು ಆರೋಗ್ಯ ಸಚಿವರು ಅವಘಡವಾಗಿ ಜೀವ ಹಾನಿ ಅದಾಗ ಮಾತ್ರ ಇದಕ್ಕೆ ಸ್ವಂಧಿಸುವ ಕ್ರಮವನ್ನು ಸಿಪಿಐ[ಎಂ] ಕಟುವಾಗಿ ಟೀಕಿಸಿದೆ. ತಮ್ಮ ಹಿಂಬಾಲಕರನ್ನು ಹಾಕಿಕೊಂಡು ರಚಿಸಿರುವ ಸಮಿತಿ ಇದೆಯಾ? ಇದ್ದರೆ ಎಷ್ಟು ಬಾರಿ ಸಭೆ ಸೇರಿದೆ?, ಅದು ಅಸ್ವತ್ರೆಯ ಸೇವೆಗಳು ಹಾಗು ವ್ಯವಸ್ಥೆಯನ್ನು ಸುಧಾರಿಸಲು ಕೈಗೊಂಡ ಕ್ರಮಗಳು ಏನು ಎಂದು ಸರ್ವಾಜನಿಕರಿಗೆ ಉತ್ತರಿಸಲಿ ಎಂದು ಸಿಪಿಐ ಎಂ ಪ್ರಶ್ನಿಸಿದೆ. ಈ ಘಟನೆಯ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವರ ರಾಜೀನಾಮೆ ಪಡೆಯುವಂತೆ ಸರ್ಕಾರವನ್ನು ಸಿಪಿಐ [ಎಂ] ಮತ್ತೊಮ್ಮೆ ಒತಾಯಿಸಿದೆ. ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುವುದರ ಜೋತೆ ಕರ್ತವ್ಯ ಭಷ್ಟತೆ ತೋರಿದವರ ಮೇಲೆ ಕ್ರೀಮಿನಲ್ ಕೇಸ್ ಹಾಕಿ ವಿಚಾರಣೆ ನಡೆಸುವಂತೆ ಸಹ ಸಿಪಿಐ [ಎಂ] ಸರ್ಕಾರವನ್ನು ಒತ್ತಾಯಿಸಿ.

(Visited 1 times, 1 visits today)