ತುಮಕೂರು


ಸರಕಾರ ಯಾವುದೇ ಇರಲಿ, ಅತಿವೃಷ್ಟಿ ಮತ್ತು ಆನಾವೃಷ್ಟಿಯಂತಹ ಸಂದರ್ಭದಲ್ಲಿ ತೊಂದರೆಗೆ ಒಳಗಾಗುವ ರೈತರ ನೆರವಿಗೆ ಬರುವ ಅಗತ್ಯವಿದೆ ಎಂದು ಮಾಜಿ ಡಿಸಿಎಂ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಪ್ರತಿಪಾದಿಸಿದ್ದಾರೆ.
ತುಮಕೂರು ತಾಲೂಕು ಚಿಕ್ಕತೊಟ್ಲುಕೆರೆಯ ಶ್ರೀಅಟವಿ ಜಂಗಮ ಸುಕ್ಷೇತ್ರದಲ್ಲಿ ಆಯೋಜಿಸಿದ್ದ ಕೃಷಿ ಮೇಳ ಉದ್ಘಾಟಿಸಿ ಮಾತನಾಡುತಿದ್ದ ಅವರು,ರೈತರ ಬದುಕಿದರೆ ಮಾತ್ರ ದೇಶ ಬದುಕಲು ಸಾಧ್ಯ. ರೈತನೇ ಬೆಳೆಯದಿದ್ದರೆ ಪುಕ್ಕಟೆ ಅಕ್ಕಿ ಕೊಡುವ ಯೋಜನೆಗೆ ಅಗತ್ಯ ವಸ್ತುವನ್ನು ಎಲ್ಲಿಂದ ತರಬೇಕು ಎಂದು ಪ್ರಶ್ನಿಸಿದ ಅವರು,ರೈತ ಬೆಳೆದ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡಿದಾಗ ಮಾತ್ರ. ರೈತನನ್ನು ಉಳಿಸುವುದರ ಜೊತೆಗೆ, ನಾವುಗಳು ಉಳಿಯಲು ಸಾಧ್ಯ ಎಂದರು.
ಭಾರತ ಕೃಷಿ ಪ್ರಧಾನ ರಾಷ್ಟ್ರ ಎಂಬುದು ಕೇವಲ ಹೇಳಿಕೆ ಮಾತ್ರ. 1960ರವರೆಗೆ ಭಾರತದ ಜನಸಂಖ್ಯೆಗೆ ಬೇಕಾಗುವಷ್ಟ ಆಹಾರ ಬೆಳೆಯಲು ನಮ್ಮಲ್ಲಿ ಯಾವುದೇ ಯೋಜನೆಗಳಿರಲಿಲ್ಲ. ಆದರೆ ಹಸಿರು ಕ್ರಾಂತಿಯ ಪರಿಣಾಮ ಇಂದು ನಾವು ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಯಿತು. ಅದರ ಫಲವಾಗಿಯೇ ಇಂದು ನಾವು ಪುಕ್ಕಟ್ಟೆ ಅಕ್ಕಿ ಹಂಚಿ, ನಮ್ಮ ರಾಜಕೀಯ ಅಧಿಕಾರ ನಡೆಸುತ್ತಿದ್ದೇವೆ. ಹಾಗಾಗಿ ರೈತನ ಬೆಳೆಗೆ ವೈಜ್ಞಾನಿಕ ಬೆಲೆಯ ಜೊತೆಗೆ,ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ರೈತರ ರಕ್ಷಣೆಗೆ ನಾವೆಲ್ಲರೂ ನಿಲ್ಲಬೇಕಿದೆ ಎಂದು ಡಾ.ಜಿ.ಪರಮೇಶ್ವರ್ ನುಡಿದರು.
ಸ್ಪೂರ್ತಿ ಡೆವಲಪ್ಪರ್ಸ್‍ನ ಎಸ್.ಪಿ.ಚಿದಾನಂದ ಮಾತನಾಡಿದರು.
ಶ್ರೀಅಟವಿ ಜಂಗಮ ಸುಕ್ಷೇತ್ರದ ಶ್ರೀಅಟವಿ ಶಿವಲಿಂಗಸ್ವಾಮೀಜಿ ಅಶೀರ್ವಚನ ನೀಡಿ, ಈ ಮೇಳಕ್ಕೆ ಐದ ರಿಂದ 10 ಸಾವಿರ ಸೇರಬೇಕಿತ್ತು ಜನತೆ ಸದ್ವಿನಿಯೋಗ ಆಗಲಿಲ್ಲ.ಅಭಿಮಾನದ ಕೊರತೆಯಿಂದ ಜನ ಸೇರಲಿಲ್ಲ. ಸ್ವಾಭಿಮಾನ ಬೆಳೆಸಿಕೊಳ್ಳ ಬೇಕಿದೆ.ಇಂತಹ ವಸ್ತು ಪ್ರದರ್ಶನದ ಸದುಪಯೋಗ ಪಡೆದುಕೊಳ್ಳಬೇಕಿದೆ.ಚಿಕ್ಕತೊಟ್ಲುಕೆರೆ 1000 ಮನೆಗಳಿರುವ ಊರು, ಸ್ವಾಭಿಮಾನಕ್ಕಿಂತ ದುರಾಭಿಮಾನ ಹೆಚ್ಚಾಗಿ,ಕಾರ್ಯಕ್ರಮದತ್ತ ಬಂದಿಲ್ಲ ಎಂದು ತಮ್ಮ ಅಸಮಾಧಾನ ತೋಡಿಕೊಂಡರು. ಮಠ ಬೆಳೆಯುವುದರ ಜೊತೆಗೆ, ಜನರ ಪರಿವರ್ತನೆಯೂ ಆಗಬೇಕಿದೆ. ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ರಾಜ್ಯದಲ್ಲಿ 3000 ಸಾವಿರ ಮಠಾಧೀಶ್ವರಿದ್ದಿವಿ. ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಅಟವಿ ಸುಕ್ಷೇತ್ರ ಗೋಸಂರಕ್ಷಣಾ ವೇದಿಕೆಯ ಕಾರ್ಯದರ್ಶಿ ಟಿ.ಬಿ.ಶೇಖರ್ ಮಾತನಾಡಿ, 650 ವರ್ಷಗಳ ಹಿಂದೆ ಓಂಕಾರೇಶ್ವರ ಸ್ವಾಮೀಜಿಗಳಿಂದ ಆರಂಭವಾದ ಅಟವಿ ಸ್ವಾಮೀಜಿಗಳು, 1998ರಲ್ಲಿ ಶ್ರೀಅಟವಿ ಶಿವಲಿಂಗಸ್ವಾಮೀಜಿ ಅಧಿಕಾರ ವಹಿಸಿಕೊಂಡ ನಂತರ ಹಂತ ಹಂತವಾಗಿ ಬೆಳೆದಿದೆ. ಹಾಸ್ಟಲ್, ಗೋಶಾಲೆ, ವಿಭೂತಿ ತಯಾರಿಕಾ ಘಟಕ,ಆಯುರ್ವೇಧ ಚಿಕಿತ್ಸಾಲಯ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಯೋಗ ಶಾಲೆ, ಪ್ರಕೃತಿ ಚಿಕಿತ್ಸಾ ಕೇಂದ್ರ ತೆರೆಯಬೇಕೆಂಬ ಆಸೆ ಇದೆ. ಮುಂದಿನ ದಿನಗಳಲ್ಲಿ ನೆರವೇರುವ ವಿಶ್ವಾಸವಿದೆ ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ ಹಾಲಪ್ಪ, ಬೆಟ್ಟದಹಳ್ಳಿಯ ಶ್ರೀಚಂದ್ರಶೇಖರಸ್ವಾಮೀಜಿ, ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯಸ್ವಾಮೀಜಿ ಮಾತನಾಡಿದರು.ವೀರಶೈವ ಸಮಾಜದ ಉಪಾಧ್ಯಕ್ಷ ಚಂದ್ರಮೌಳಿ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ, ತಹಶೀಲ್ದಾರ್ ಮೋಹನ್ ಕುಮಾರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 1 times, 1 visits today)