ತುಮಕೂರು
ಮೂಡಲಪಾಯ ದೊಡ್ಡಾಟವು ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಮಾತ್ರ ಕಾಣಸಿಗುತ್ತದೆ ತುಮಕೂರು, ಬೆಂಗಳೂರು ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಾನು ಬಯಲಾಟವನ್ನ ನೋಡಿಯೇ ಇಲ್ಲ. ಡಮರುಗ ರಂಗ ಸಂಪನ್ಮೂಲ ಕೇಂದ್ರದ ಮೆಳೇಹಳ್ಳಿ ದೇವರಾಜ್ ಈ ರೀತಿಯ ಪ್ರಯತ್ನಕ್ಕೆ ಕೈ ಹಾಕಿರುವುದು ತುಂಬಾ ಸಂತೋಷದ ವಿಷಯ, ಅವರ ಬೆಂಬಲಕ್ಕೆ ತುಮಕೂರಿನ ಪ್ರಜ್ಞಾವಂತ ನಾಗರೀಕರು ನಿಲ್ಲಬೇಕಿದೆ, ಎಂದು ಕನ್ನಡ ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ.ಎಂ.ರವಿಕುಮಾರ್ ಅಭಿಪ್ರಾಯ ಪಟ್ಟರು.
ಅವರು ದಿನಾಂಕ: 05-11-22 ನೇ ಶನಿವಾರ ಸಂಜೆ 6.30 ಕ್ಕೆ ಕನ್ನಡ ಭವನದಲ್ಲಿ ದ್ರೌಪದಿ ವಸ್ತ್ರಾಪಹರಣ ದೊಡ್ಡಾಟ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ್, ತುಮಕೂರು ವಿಶ್ವವಿದ್ಯಾನಿಲಯದ ಉಪನ್ಯಾಸಕರಾದ ರಾಮು ಹೆಚ್., ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ಮಾರುತಿ ಎನ್.ಎನ್., ಕೋರ ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯರಾದ ಮಧುಸೂದನ್ ರಾವ್ ಉಪಸ್ಥಿತರಿದ್ದರು.
ನಂತರ ಬಹಳ ಸುಂದರವಾಗಿ ದೊಡ್ಡಾಟ ಮೂಡಿ ಬಂದಿತು. ಆಟದಲ್ಲಿ ದ್ರೌಪದಿಯು, ಪಗಡೆಯಾಟದ ಸಮಯದಲ್ಲಿ ನಾನಿದ್ದಿದ್ದರೆ ಎಲ್ಲವನ್ನು ಸೋಲಲು ಬಿಡುತ್ತಿರಲಿಲ್ಲ ಎಂದು ಸ್ತ್ರೀ ಆಡಳಿತದ ಭಾಗವಾಗಬೇಕು ಎಂಬ ಧ್ವನಿ ಇದೆ.
ದುರ್ಯೋಧನನ ಪಾತ್ರಧಾರಿ: ನಾಟಕ ಇರಲಿ, ನಿಜ ಜೀವನ ಇರಲಿ. ಹೆಣ್ಣಿಗೆ ಅವಮಾನಿಸುವುದು ನನ್ನಿಂದಾಗದು ಎಂದು, ಆಳುವ ವರ್ಗ ಎಚ್ಚೆತ್ತುಕೊಂಡರೆ ಮಹಿಳೆಯರ ಶೋಷಣೆಯನ್ನ ತಪ್ಪಿಸಬಹುದು ಎಂಬ ಸಂದೇಶಗಳು. ಪೌರಾಣಿಕ ಪ್ರಸಂಗವನ್ನ ವರ್ತಮಾನಕ್ಕೆ ತೀರ ಹತ್ತಿರಾಗಿಸುವಂತಹ ಮತ್ತು ಪ್ರೇಕ್ಷಕರಿಗೆ ಆಪ್ತವಾಗುವಂತಹ ಕೆಲಸವನ್ನ ನಿರ್ದೇಶಕರು ಮಾಡಿದ್ದಾರೆ.
ದೊಡ್ಡಾಟದಲ್ಲಿ ಪ್ರಕಾಶ್ ಮೆಳೇಹಳ್ಳಿ, ಭರತ್ ಡಮರುಗ, ಸ್ನೇಹಾ, ತನುಜ, ಸೃಷ್ಠಿ, ಲಯ, ಚಿನ್ಮಯ, ಉಮೇಶ್ ಡಮರುಗ, ವಸಂತ್, ಮಹಾಂತೇಶ್, ದ್ರೋಣ, ಎಲ್ಲರೂ ಲಯ ತಪ್ಪದೆ ಅಭಿನಯಿಸಿದರು. ಮೇಳದಲ್ಲಿ ಪುಟ್ಟಶಾಮಯ್ಯ, ರೇಖಾ ಸಾಥ್ ನೀಡಿದರು.