ಗುಬ್ಬಿ
ಅಂಬೇಡ್ಕರ್ ಆಶಯಕ್ಕೆ ತಣ್ಣಿರೆರಚುವ ಕೆಲಸ ಕೆಲ ವ್ಯಕ್ತಿಗಳಿಂದ ಸಮಾಜಕ್ಕೆ ಡಿ.ಎಸ್.ಎಸ್ ಬಗ್ಗೆ ಗೌರವ ಹಾಳಾಗುತ್ತಿದೆ. ಇದನ್ನು ತಪ್ಪಿಸಲು ಮುಂದಿನ ದಿನಗಳಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಡಿ.ಎಸ್.ಎಸ್ ತಾಲ್ಲೂಕು ಸಂಚಾಲಕ ಪಾಂಡುರಂಗಯ್ಯ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ದಲಿತ ಸಂಘರ್ಷ ಸಮಿತಿಯ ಹೆಸರನ್ನು ಹೇಳಿಕೊಂಡು ಅಧಿಕಾರಿಗಳನ್ನು ಹೆದರಿಸಿ ಜೀವನ ನಡೆಸುತ್ತಿರುವ ಇವರಿಗೆ ಅಂಬೇಡ್ಕರ್‍ರವರ ಹೆಸರು ಹೇಳಲು ಇವರಿಗೆ ನೈತಿಕತೆ ಇಲ್ಲ. ಸಮಾಜದಲ್ಲಿ ಎಲ್ಲಾ ಸಮುದಾಯದವರು ಒಗ್ಗಟ್ಟಾಗಿ ಬಾಳುತ್ತಿರುವ ಸಮಯದಲ್ಲಿ ಈ ಕಿಡಿಗೇಡಿಗಳು ಮಾನನಷ್ಠ ಮೊಕದ್ದಮೆಯ ಹೆಸರನ್ನು ಬಳಸಿಕೊಂಡು ಜನಾಂಗದ ನಾಯಕರುಗಳ ಮುಖಗಳಿಗೆ ಮಸಿ ಬಳಿಯುತ್ತಿದ್ದಾರೆ ಎಂದು ದೂರಿದರು.
ಇನ್ನೋರ್ವ ದಲಿತ ಮುಖಂಡ ಮಂಜೇಶ್ ಮಾತನಾಡಿ ಪೆದ್ದನಹಳ್ಳಿ ಘಟನೆಯಿಂದ ಇಲ್ಲಿಯವರೆಗೂ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಿದ್ದು ಮೊನ್ನೆ ನಿಟ್ಟೂರಿನಲ್ಲಿ ನಡೆದ ದೇವಸ್ಥಾನದ ಗಲಾಟೆಯಲ್ಲಿಯೂ ಸಹ ಈ ಕಿಡಿಗೇಡಿಗಳು ಗ್ರಾಮದ ಸ್ವಾಸ್ಥ್ಯವನ್ನು ಕಳೆಯುತ್ತಿದ್ದು ಇದರಿಂದ ಅಲ್ಲಿನ ದಲಿತರು ಮೇಲ್ವರ್ಗದ ಸಮಾಜದವರ ಕೆಂಗಣ್ಣಿಗೆ ಗುರಿಯಾಗಲು ಈ ಕಿಡಿಗೇಡಿಗಳ ಸಮಯ ಸಾಧಕ ತನದಿಂದ ಅಧಿಕಾರಿಗಳನ್ನು ದೂರುವಂತಾಗಿದೆ ಎಂದ ಅವರು ದಲಿತ ಸಂಘರ್ಷ ಸಮಿತಿಯ ಹೆಸರನ್ನು ಹೇಳಿಕೊಂಡು ನ.14ರಂದು ಕರೆದಿರುವ ಸಭೆಗೆ ಅನುಮತಿ ನೀಡದಂತೆ ಈಗಾಗಲೇ ತಿಳಿಸಿದ್ದೇವೆ ಹಾಗೂ ಅದೇ ದಿನ ನಗರದ ಪ್ರಮುಖ ಮುಖಂಡರುಗಳೊಡನೆ ಆ ಸಭೆಯನ್ನು ಬಹಿಷ್ಕರಿಸಲಾಗುತ್ತದೆ ಎಂದರು.