ಕೊರಟಗೆರೆ
ನವೆಂಬರ್ ತಿಂಗಳಲ್ಲಿ ಬಗರ್‍ಹುಕುಂ ರೈತರಿಗೆ ಸಾಗುವಳಿ ಚೀಟಿ ಮತ್ತು ಹಕ್ಕು ಪತ್ರವನ್ನು ಅಂದೋಲನದ ಮುಖಾಂತರ ವಿತರಣೆ ಮಾಡಲಾಗುವುದು ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
ಅವರು ಪಟ್ಟಣದ ತಾಲೂಕು ಕಛೇರಿಯಲ್ಲಿ ಬಗರ್ ಹುಕುಂ ಸಭೆ ನಡೆಸಿ ನಂತರ ಪತ್ರಕರ್ತರೋಂದಿಗೆ ಮಾತನಾಡಿ ಹಲವು ವರ್ಷಗಳಿಂದ ಸರ್ಕಾರಿ ಜಮೀನಿಯಲ್ಲಿ ವ್ಯವಸಾಯ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ಪತ್ರ ನೀಡುತ್ತಿಲ್ಲ ಎನ್ನುವ ಚರ್ಚೆ ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಈ ತಿಂಗಳಲ್ಲಿ ಬಗರ್ ಹುಕುಂ ರೈತರಿಗೆ ಸಾಗುವಳಿ ಪತ್ರ ಮತ್ತು ಹಕ್ಕುಪತ್ರ ವಿತರಣೆಯ ಆಂದೋಲವನ್ನು ಪ್ರಾರಂಭಿಸಲಾಗುವುದು, ಆದರೆ ಇದನ್ನು ಪಾರದರ್ಶಕತೆಯಿಂದ ಮಾಡಲು ನಿರ್ಣಯಿಸಲಾಗಿದ್ದು ಸಾರ್ವಜನಿಕರಲ್ಲಿ ಮತ್ತು ಬಗರ್‍ಹುಕುಂ ರೈತರಲ್ಲಿ ಮನವಿ ಮಾಡುವುದೇÉನೆಂದರೆ ಸಾಗುವಳಿ ಚೀಟಿ ಪಡೆಯಲು ಅಥವಾ ಇನ್ನು ಯಾವುದೇ ವಿಚಾರಕ್ಕಾಗಿ ಯಾರಿಗಾದಾರೂ ಹಣ ನೀಡಿದರೆ ಅದಕ್ಕೆ ಹೊಣೆ ಅವರೇ ಆಗುತ್ತಾರೆ, ಆ ರೀತಿ ಹಣ ಯಾರಾದೂ ಕೇಳಿದರೆ ಅದನ್ನು ಕಮಿಟಿಗೆ, ಶಾಸಕನಾದ ನನಗೆ, ತಹಶೀಲ್ದಾರ ಗಮನಕ್ಕೆ ತರುವುದು, ಪತ್ರ ನೀಡಲು ಅವಕ್ಯಕತೆ ಇರುವ ಕಡೆ ಸ್ಥಳ ಪರಿಶೀಲನೆ ನಡೆಸಲಾಗುವುದು ಹಕ್ಕು ಪತ್ರವನ್ನು ಮನೆಗೆ ತಲುಪಿಸುವ ಕೆಲಸವನ್ನು ಮಾಡಲಾಗುವುದು ಎಂದರು.
ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಬಗರ್ ಹುಕುಂಗಾಗಿ ಕೊರಟಗೆರೆ ತಾಲೂಕಿನಿಂದ 5041 ಅರ್ಜಿಗಳು, ಮಧುಗಿರಿ ಪುರವಾರ ಹೋಬಳಿಯಿಂದ 296 ತುಮಕೂರು ಕೋರ ಹೋಬಳಿಯಿಂದ 236 ಅರ್ಜಿಗಳು ಬಂದಿದ್ದವು. ಇಂದು ನಡೆದ ಸಬೆಯಲ್ಲಿ 51 ಕಡತಗಳನ್ನು ವಿಲೆವಾರಿ ಮಾಡಲಾಗಿದ್ದು ಕೋರ ಹೋಬಳಿಯ 12 ಅರ್ಜಿಗಳು ಚರ್ಚೆಗೆ ಬಂದ್ದಿದ್ದು ಅದರ ಸುತ್ತುಮುತ್ತ ಕೆ,ಐ,ಡಿ.ಬಿ. ಸ್ಥಳ ಇರುವುದರಿಂದ ಸ್ಥಳ ಪರಿಶೀಲಿಸಿ ನಿರ್ಣಯ ಮಾಡಲಾಗುವುದು ಹಾಗೂ ಪುರವಾರದ 4 ಅರ್ಜಿಗಳನ್ನು ಮಂಹೂರು ಇಂದು ಸ್ಥೀರೀ ಕರಣ ಒಂದು ವಜಾ ಮಾಡಲಾಗಿದೆ ಎಂದರು.
ಸಭೆಯಲ್ಲಿ ಕೊರಟಗೆರೆ ತಹಶೀಲ್ದಾರ್ ನಹಿದಾ ಜಮ್ ಜಮ್, ವಲಯ ಅರಣ್ಯಧಿಕಾರಿ ಸುರೇಶ್, ಉಪ ತಹಶೀಲ್ದಾರ್‍ಗಳಾದ ಕಮಿಟಿ ಸದಸ್ಯರುಗಳಾದ ಸಿ.ಎಸ್.ಹನುಮಂತರಾಜು, ದೇವರಾಜು. ಹೇಮಲತ ಇತರರು ಹಾಜರಿದ್ದರು.
ಚಿತ್ರ- ಪಟ್ಟಣದ ತಾಲೂಕು ಕಛೇರಿಯಲ್ಲಿ ಬಗರ್ ಹುಕುಂ ಸಭೆಯಲ್ಲಿ ಶಾಸಕ ಡಾ.ಜಿ.ಪರಮೇಶ್ವರ ಸೇರಿದಂತೆ ಇತರರು.