ಗುಬ್ಬಿ
ಗುಬ್ಬಿಯ ಗೋಸಲ ಶ್ರೀ ಚನ್ನಬಸವೇಶ್ವರರವರಿಗೆ ನಾಡಿನಾದ್ಯಂತ ಭಕ್ತ ವೃಂದವಿದ್ದು, ಕಾರ್ತಿಕ ಮಾಸದ ದೀಪೋತ್ಸವ ಹಾಗೂ ರಾತ್ರಿಯಲ್ಲಿ ನಡೆಯುವ ಹೂವಿ£ Àವಾಹನವು ಇತಿಹಾಸ ಪ್ರಸಿದ್ಧವಾಗಿದ್ದು, ಈ ಹೂವಿನ ವಾಹನಕ್ಕೆ ಪಟ್ಟಣದ ಹಾಗೂ ಸುತ್ತಮುತ್ತಲಿನ 18 ಕೋಮಿನ ಜನಾಂಗವು ಭಕ್ತವೃಂದವಾಗಿದ್ದು, ಇಲ್ಲಿನ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿ ಮನಸ್ಸೋ ಇಚ್ಛೆ ನಡೆದುಕೊಂಡು 18 ಕೋಮಿನ ಯಜಮಾನರುಗಳಿಗೆ ಅವಮಾನ ಮಾಡಿರುವುದು ಎಷ್ಟು ಸಮಂಜಸ…?
ಪ್ರತಿ ಹೂವಿನವಾಹನ ನಡೆಸುವ ಹಿಂದಿನ ದಿನಗಳಲ್ಲಿ 18 ಕೋಮಿನ ಯಜಮಾನರುಗಳನ್ನು ಕರೆದು ಕಾರ್ಯಕ್ರಮವನ್ನು ರೂಪಿಸಲಾಗುತ್ತಿತ್ತು. ಈ ಬಾರಿ ಯಾವುದೇ ಪೂರ್ವಭಾವಿ ಸಭೆ ನಡೆಸದೆ ಈಗಾಗಲೇ ಕರಪತ್ರವನ್ನು ಮುದ್ರಿಸಿ ಹಂಚುತ್ತಿರುವುದು ಯಜಮಾನರುಗಳ ಕಿಡಿಗಣ್ಣಿಗೆ ಕಾರಣವಾಗಿದೆ. ಕೇವಲ ಮುಜರಾಯಿ ಇಲಾಖೆಯ ದೇವಸ್ಥಾನ ಎಂದು ಇಲ್ಲಿನ ಭಕ್ತರು ಯಾವತ್ತೂ ತಿಳಿದಿಲ್ಲ. ಹೂವಿನ ವಾಹನಕ್ಕೆ ಬಟ್ಟೆ ಕಟ್ಟುವುದರಿಂದ ಹಿಡಿದು ಹೂವಿನ ಅಲಂಕಾರ ಹಾಗೂ ಹೂವಿನ ಪಲ್ಲಕ್ಕಿಯನ್ನು ಮೆರಸುವವರು ಅಧಿಕಾರಿಗಳೇ… ಅಥವಾ ಯಜಮಾನರುಗಳೇ… ಎಂಬ ಪ್ರಶ್ನೆ ಭಕ್ತರಲ್ಲಿ ಕಾಡುತ್ತಿದೆ.
ಪ್ರತಿ ವರ್ಷವೂ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಸ್ಥಾನದಿಂದ ರಾತ್ರಿಯ ಸಮಯ ಹೂವಿನ ಮಂಟಪವನ್ನು ಶೃಂಗರಿಸಿ ಪ್ರತಿ ಕೋಮಿನ ಜನಾಂಗದ ಯಜಮಾನರುಗಳು ತಮ್ಮ ಶಕ್ತಿಯಾನುಸಾರ ಬಾಳೆಕಂದುಗಳನ್ನು ನೆಟ್ಟು ಸ್ವಾಮಿಯು ಬಂದಾಗ ಅದನ್ನು ಕಡಿಯುವಂತಹ ಪದ್ಧತಿ ಹಿಂದಿನಿಂದಲೂ ಬಂದಿದ್ದು ಈ ಕಾರ್ಯನಿರ್ವಹಣಾಧಿಕಾರಿಯ ಬೇಜವಾಬ್ದಾರಿತನದಿಂದ ಈ ರೀತಿಯ ದುರ್ಘಟನೆ ನಡೆಯದಂತೆ 18 ಕೋಮಿನ ಯಜಮಾನರುಗಳು ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಿದ್ದು ಹೂವಿನ ವಾಹನದ ಗತವೈಭವವು ಮರುಕಳುಸುತ್ತದೆಯೇ ಎಂದು ಭಕ್ತವೃಂದ ಕಾಯುತ್ತಿದೆ.