ತುಮಕೂರು
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ರಿ) ಸಿ.ಐ.ಟಿ.ಯು. ತುಮಕೂರು ಜಿಲ್ಲಾ ಸಮಿತಿ ಹಾಗು ಭಾರತ ವಿಧ್ಯಾರ್ಥಿ ಫೆಡರೇಷನ್ ನೇತೃತ್ವದಲ್ಲಿ ಗುರುವಾರ ತುಮಕೂರು ಜಿಲ್ಲಾ ಕಾರ್ಮಿಕರ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು
. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿವತಿಯಿಂದ 2021-22ನೇ ಶೈಕ್ಷಣಿಕ ಸಾಲಿನಲ್ಲಿ ಮಂಡಳಿಗೆ ನಿಜವಾದ ಕಟ್ಟಡಕಾರ್ಮಿಕರು ಅರ್ಜಿಸಲ್ಲಿಸಿದವರಿಗೆ ಹಣಬಂದಿಲ್ಲ ಆದರೆ ಕಾರ್ಮಿಕರಲ್ಲದ ಮಕ್ಕಳಿಗೆ ಹಣ ಬಂದಿರುವುದು ಕಾರ್ಮಿಕ ಸಚಿವರ ದೊಡ್ಡ ಸಾದನೆಯಾಗಿದೆ ಎಸ್.ಎಸ್.ಪೋರ್ಟಲ್ ತಂತ್ರಾಂಶದಲ್ಲಿ ಆರ್ಜಿ ಹಾಕುವುದರಿಂದ ಪಾರದರ್ಶಕ ಇರುವುದಿಲ್ಲ ಸೇವಾಸಿಂಧುವಿನಲ್ಲಿ ಆಗಿರುವ ಸಣ್ಣ ಪುಟ್ಟ ದೋಷಗಳನ್ನು ಸರಿಪಡಿಸಿ ಮುಂದುವರಿಯಬೇಕೆಂದು ಕಟ್ಟಡ ಕಾರ್ಮಿಕ ಸಂಘಟನೆಗಳ ರಾಜ್ಯ ಸಮನ್ವಯ ಸಮಿತಿ ಮನವಿನೀಡಿ ಒತ್ತಾಯಿಸಿದರು.
ಅಂದಿನ ಮಂಡಳಿಯ ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳು ಹಟಕ್ಕೆಬಿದ್ದು ಜಾರಿಮಾಡಿದ್ದರಿಂದ ದೊಡ್ಡ ಹಗರಣ ನಡೆದಿದೆ. 2022-23ನೇ ಸಾಲಿನ ಶೈಕ್ಷಣಿಕ ಧನಸಹಾಯ ಪಡೆಯಲು ಅರ್ಜಿ ಹಾಕಲು ಸಹ ಅವಕಾಶ ನೀಡದೆ ಕಾರ್ಮಿಕರಿಗೆ ವಂಚನೆ ಯಾಗಿರುವುದನ್ನು ಖಂಡಿಸಿ ಪರಿಹಾಕೆ ಇಂದು ರಾಜ್ಯದಾದ್ಯಂತ ಜಂಟಿ ಹೋರಾಟ ರೂಪಿಸಲಾಗಿತ್ತು.
ಹೋರಾಟವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಬಿ. ಉಮೇಶ್ ಮಾತನಾಡಿ ಸರ್ಕಾರ ತನ್ನ ವಿರೋಧಿಗಳನ್ನು ಟೀಕಿಸಲು ಧಮ್, ತಾಕತ್ತು ಪ್ರದರ್ಶಿಸುತ್ತದೆ ಆದರೆ ತನ್ನ ಆಡಳಿತದಲ್ಲಿ ಜನರ ಸಮಸ್ಯೆ ಪರಿಹರಿಸವಲ್ಲಿ ತೋರಿಸುವುದಿಲ್ಲ, ಶಿಕ್ಷಣ ಸಚಿವರು ವಿಧ್ಯಾರ್ಥಿಗಳು ದ್ಯಾನಮಾಡುವಂತೆ ಒತ್ತಾಯಿಸತ್ತಾರೆ. ಶಿಕ್ಷಣ ಸಂಸ್ಥೆಗಳ ಶ್ಯಾಟ್ ಐ.ಡಿ. ಸಮಸ್ಯೆ ಪರಿಹರಿಸದೆ, ಮಕ್ಕಳು ವಿಧ್ಯಾರ್ಥಿವೇತನದಿಂದ ವಂಚನೆಯಾಗುವುದನ್ನು ತಪ್ಪಿಸುತ್ತಿಲ್ಲ. ಇದನ್ನು ನೋಡಿದರೆ ಸರ್ಕಾgದÀ ಜನವಿರೋದಿನೀತಿ ಸಾಬೀತಾಗುತ್ತಿದೆಯೆಂದರು.
ತಾಲ್ಲೂಕು ಆದ್ಯಕ್ಷ ಶಂಕರಪ್ಪ ಮಾತನಾಡಿ ಕಟ್ಟಡ ಕಾರ್ಮಿಕರನ್ನು ಕೂಲಿ ತಪ್ಪಿಸಿ ಹೋರಾಟಕ್ಕೆ ಇಳಿಸುತ್ತಿದೆ ಇಂತಹ ಕಾರ್ಮಿಕ ವಿರೋದಿನೀತಿ ವಿರುದ್ದ ಬೃಹತ್ ಹೋರಾಟ ನಡೆಸಬೇಕಾಗಿದೆಯಂದರು. ಹೋರಾಟ ಉದ್ದೇಶಿಸಿಮಾತನಾಡಿದ ಎಸ್.ಎಫ್.ಐ. ಜಿಲ್ಲಾ ಸಮಿತಿ ಅದ್ಯಕ್ಷ ಈ. ಶಿವಣ್ಣ ಎಸ್.ಎಸ್.ಪೋರ್ಟಲ್ ತಂತ್ರಾಂಶದಿಂದ ಕಟ್ಟಡ ಕಾರ್ಮಿಕರ ಮಕ್ಕಳಷ್ಟೇ ಅಲ್ಲ ಎಲ್ಲಾವಿಧ್ಯಾರ್ಥಿಗಳಿಗೂ ಅನ್ಯಾಯವಾಗಿದೆ. ಇದನ್ನು ಸರ್ಕಾರ ಸರಿಪಡಿಸುವ ಬದಲು ವಿದ್ಯಾರ್ಥಿ-ಯುವಜನರನ್ನು ಒಡೆದು ಆಳುತ್ತಿದೆ ಎಂದರು. 2021-22ನೇ ಸಾಲಿನಲ್ಲಿ ಬಾಕಿ ಇರುವ ವಿದ್ಯಾರ್ಥಿವೇತನ ಬಿಡುಗಡೆ ಮಾಡಬೇಕು.
2022-23ನೇ ಸಾಲಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶನೀಡಬೇಕು. ಕಳೆದಸಾಲಿನ ವಿದ್ಯಾರ್ಥಿವೇತನದಲ್ಲಿ ನಡೆದಿರುವ ಅವ್ಯವಹಾರದಲ್ಲಿ ತಪ್ಪಿತ್ಥರಿಗೆ ಶಿಕ್ಷಯಾಗಬೇಕೆಂದು ಒತ್ತಾಯಿಸಲಾಯಿತು. ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಸಮಸ್ಯೆ ಪರಿಹಾರಕ್ಕೆ ಮನವಿನೀಡಲಾಯಿತು. ಗೌರವಾಧ್ಯಕ್ಷರು ಟಿ.ಎಂ ಗೋವಿಂದರಾಜು ಖಜಾಂಚಿ ಇಬ್ರಾಹಿಂ ಖಲೀಲ್, ರಾಜ್ಯಸಮಿತಿ ಸದಸ್ಯ ಶಿವಣ್ಣ ಮಾತನಾಡಿದರು. ಪ್ರಕಾಶ್ ಸಂಚಾಲಕರು ಗುಬ್ಬಿ ತಾ. ಸಂಚಾಲಕರು, ತುಮಕೂರು ನಗರ ಶಾಖೆಗಳ ನಂದೀಶ್, ವೆಂಕಟೇಶ್ ಎಂ.ಟಿ. ಮುಖಂಡರಾದ ಮಲ್ಲೇಶ್, ಶಾಲೂ, ಕಾಂತರಾಜು, ವಿದ್ಯಾರ್ಥಿ ಮುಖಂಡ ದರ್ಶನಗೌಡ ನೇತೃತ್ವವಹಿಸಿದ್ದರು.