ತುಮಕೂರು
ವೀರ ವನಿತೆ ಒನಕೆ ಓಬವ್ವನ ಸಮಯ ಪ್ರಜ್ಞೆ, ಧೈರ್ಯ ಮತ್ತು ಸಾಹಸಗಳು ನಮ್ಮ ನಾಡಿನ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಬೇಕು ಎಂದು ತುಮಕೂರು ಮೇಯರ್ ಪ್ರಭಾವತಿ ಸುಧೀಶ್ವರ್ ತಿಳಿಸಿದ್ದಾರೆ.
ನಗರದ ಟೌನ್‍ಹಾಲ್ ಮುಂಭಾಗದಲ್ಲಿ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ದಸಂಸ ಜಂಟಿಯಾಗಿ ಆಯೋಜಿಸಿದ್ದ ಕನಕದಾಸರು ಹಾಗೂ ವೀರ ವನಿತೆ ಒನಕೆ ಓಬವ್ವ ಅವರ ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರು ಮಹನೀಯರಿಗೆ ಪುಷ್ಪ ನಮನ ಸಲ್ಲಿಸಿದ ಮಾತನಾಡಿ ಅವರು,ಎದುರಾಳಿ ಸೈನಿಕರು ಕೋಟೆಯನ್ನು ಮುತ್ತಿದಾಗ ತನ್ನ ಮನೆಯಲ್ಲಿ ಆಹಾರ ಸಂಸ್ಕøರಣೆಗೆ ಬಳಸುವಂತಹ ಒನಕೆಯನ್ನೇ ಆಯುಧವಾಗಿ ಬಳಸಿ ನೂರಾರು ಸೈನಿಕರ ರುಂಡಗಳನ್ನು ಚಂಡಾಡಿ,ಕೋಟೆಯನ್ನು ರಕ್ಷಿಸಿ ಮಹಾಮಾತೆ ನಮ್ಮ ಓಬವ್ವ,ಇಂತಹವರ ಚರಿತ್ರೆಗಳು ನಾಡಿನಾಚೆಗೂ ಪ್ರಸರಿಸುವಂತಹ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿ,ಎದುರಾಳಿ ಸೈನಿಕರು ಕೋಟೆಯನ್ನು ಸುತ್ತುವರಿದಿದ್ದರೂ ಎದೆಗುಂದದೆ ದಿಟ್ಟತನದಿಂದ ಹೋರಾಡಿ,ಕೋಟೆಯನ್ನು ರಕ್ಷಿಸಿದ ವೀರ ವಿನಿತೆ ಒನಕೆ ಓಬವ್ವ ನಮಗೆಲ್ಲರಿಗೂ ಆದರ್ಶ ಪ್ರಾಯರಾಗಿದ್ದಾರೆ.ಮಹಿಳೆಯರು ಅವರ ಆದರ್ಶಗಳನ್ನು ಪಾಲಿಸುವ ಮೂಲಕ ನಾಡಿನ ಐಕ್ಯತೆ ಪಣತೊಡಬೇಕು.ಕನಕದಾಸು ಜಾತಿ,ಮತ, ಪಂಥಗಳನ್ನು ಬಿಟ್ಟು ಹೊರಬರಲು ಕರೆ ನೀಡಿದ್ದರು.ಈ ಇಬ್ಬರು ನಾಯಕರ ತತ್ವಾದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕಿದೆ ಎಂದರು.
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತನಾಡಿ,ಕನಕದಾಸರು ಮತ್ತು ವೀರ ವನಿತೆ ಒನಕೆ ಓಬವ್ವ ಅವರ ಜಯಂತಿಗಳನ್ನು ದಸಂಸ ಹಾಗೂ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಒಟ್ಟಿಗೆ ಆಚರಿಸುವ ಮೂಲಕ ಶೂದ್ರ ಸಮುದಾಯಗಳೆಲ್ಲಾ ಒಗ್ಗೂಡಬೇಕು ಎಂಬ ಹೊಸ ಸಂದೇಶ ನೀಡಿದೆ ಎಂದರು.
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಶ್ರೀನಿವಾಸ್ ಮಾತನಾಡಿ,ಕುಲ ಕುಲ ಕುಲವೆಂದು ಹೊಡೆದಾಡದೀರಿ,ನಿಮ್ಮ ಕುಲದ ನೆಲೆಯನೆನಾದರೂ ಬಲ್ಲಿರಾ ಎಂದು ಪ್ರಶ್ನಿಸುವ ಮೂಲಕ ಇಡೀ ನಾಡಿಗೆ ಸೌಹಾರ್ಧತೆಯ ಸಂದೇಶ ಸಾರಿದವರು ಕನಕದಾಸರು,ಹಾಗೆಯೇ ಒರ್ವ ಕೋಟೆ ಕಾವಲುಗಾರನ ಹೆಂಡತಿಯಾಗಿ,ಕೋಟೆಗೆ ಅಪತ್ತು ಎದುರಾದಾಗ,ಸಮಯಪ್ರಜ್ಞೆಯಿಂದ ವೈರಿಗಳ ರುಂಡ ಚಂಡಾಡಿದ ವೀರ ವನಿತೆ ಓಬವ್ವ ಅವರು ಜಯಂತಿಗಳನ್ನು ಇಂದು ದಲಿತ ಸಮುದಾಯ ಒಟ್ಟಿಗೆ ಆಚರಿಸುವ ಮೂಲಕ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ನಾಡಿಗೆ ಸಾರಿದೆ. ಇದು ಎಲ್ಲರಿಗೂ ಮಾದರಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಗುರುಪ್ರಸಾದ್, ರಂಜನ್, ಚಲವಾದಿ ಶೇಖರ್, ಹೆಗ್ಗರೆ ಕೃಷ್ಣಮೂರ್ತಿ, ಹಬ್ಬತ್ತನಹಳ್ಳಿ ಶ್ರೀನಿವಾಸ್, ಸಿದ್ದರಾಜು,ನಿವೃತ್ತ ಅಧಿಕಾರಿ ಶಿವಣ್ಣ, ಜಿ.ಆರ್.ಸುರೇಶ್, ಶಬ್ಬೀರ್ ಅಹಮದ್, ನಾರಾಯಣ್ ಎಸ್., ಬಾಲರಾಜು, ರಾಮಚಂದ್ರರಾವ್, ಮನು. ಟಿ, ಶ್ರೀನಿವಾಸ್ ಎನ್.ವಿ.,ಶಿವರಾಜು ಕುಚ್ಚಂಗಿ, ಟಿ.ಆರ್.ರಘು, ರಂಗಸ್ವಾಮಯ್ಯ, ಗೋವಿಂದರಾಜು, ಶಿವಣ್ಣ,ಗಂಗಾಧರ್ ಜಿ.ಆರ್.,ಸುನಿಲ್,ಕುಶಾಲ್, ಕೋಮಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕನಕದಾಸರು ಮತ್ತು ವೀರ ವನಿತೆ ಓಬವ್ವ ಜಯಂತಿ ಅಂಗವಾಗಿ ಸಿಹಿ ಹಂಚಿ ಸಂಭ್ರಮಿಸಲಾಯಿತು.