ಚಿಕ್ಕನಾಯಕನಹಳ್ಳಿ


ರಾಜ್ಯದಲ್ಲಿ ಅರಣ್ಯ ಪ್ರದೇಶಕ್ಕೆ ಸೇರಿದೆ ಎನ್ನಲಾಗಿದ್ದ 11 ಲಕ್ಷ ಯೆಟ್ಟೆರ್ ಭೂಮಿಯಲ್ಲಿ ಮೂರು ಲಕ್ಷದ ಮೂವತ್ತು ಸಾವಿರ ಎಕ್ಟರ್ ಪ್ರದೇಶವನ್ನು ಅರಣ್ಯ ಪ್ರದೇಶಕ್ಕೆ ರಕ್ಷಣೆ ಮಾಡಲು ಕಾನೂನು ತರುವ ಮೂಲಕ ಉಳಿದ ಭೂಮಿಯನ್ನು ರಾಜ್ಯದ ಜನರಿಗೆ ಹಂಚಲಾಗಿದೆ ಎಂದು ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಜೆಸಿ ಮಾಧುಸ್ವಾಮಿ ಹೇಳಿದರು
ಪಟ್ಟಣದ ಅರಣ್ಯ ಇಲಾಖೆಯ ಆವರಣದಲ್ಲಿ ನೂತನ ಅರಣ್ಯ ರಕ್ಷಕರ ವಸತಿಗೃಹ ಉದ್ಘಾಟನೆ ಹಾಗೂ ಬಗರ್ ಹುಕ್ಕುಂ ಸಾಗುವಳಿ ಚೀಟಿ ವಿತರಣಾ ಸಮಾರಂಭದಲ್ಲಿ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಇಲ್ಲಿಯವರೆಗೂ ಮೂರು ಹಂತದಲ್ಲಿ ಅರ್ಜಿ ಪಡೆದಿರುವ ಸರ್ಕಾರದಲ್ಲಿ ಈ ಹಿಂದೆ ಸೇಂದಿವನಕ್ಕೆ ಭೂಮಿ ಮಂಜೂರು ಮಾಡುವಂತಿಲ್ಲ ಎಂದು ಕಾನೂನು ಅನ್ನು ಬದಲಿಸಿ ರೈತರ ಅನುಕೂಲಕ್ಕೆ ಸಿಂಧೀವನವನ್ನು ಅವಕಾಶ ಮಾಡಿಕೊಡಲಾಗಿದೆ ಒಂದು ವೇಳೆ ಸೇಂದಿ ವನ ಎಂದು ಅರ್ಜಿ ತಿರಸ್ಕೃತಗೊಂಡಿರುವ ರೈತರು ಇದ್ದರೆ ಅಂತವರು ತಹಶೀಲ್ದಾರ್ ಅವರನ್ನು ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಅಂತಹ ಅರ್ಜಿಯನ್ನು ಸರ್ಕಾರ ಪರಿಗಣಿಸುತ್ತದೆ ಹಾಗೆಂದು ಗೋಮಾಳ ಜಾಗವನ್ನು ಮೀಸಲಿಡಬೇಕೆಂದು ನ್ಯಾಯಾಲಯದ ಆದೇಶ ಇರುವುದರಿಂದ ಅಂತಹ ಗೋಮಾಳದ ಜಾಗದಲ್ಲಿ ಅರ್ಜಿ ಹಾಕಿದ್ದರೆ ಅಂತಹವರ ಅರ್ಜಿ ಪರಿಷ್ಕಾರಣಿಸಲಾಗದು ಇತ್ತೀಚಿನ ದಿನಗಳಲ್ಲಿ ಅರಣ್ಯ ಪ್ರದೇಶಗಳನ್ನು ಕಡಿದು ನಾಶ ಮಾಡುವ ಮೂಲಕ ಕೃಷಿ ಮಾಡಲು ಮುಂದಾಗುವ ಮುಂದಾಗುತ್ತಿದ್ದಾರೆ ಅಂತಹ ಅರ್ಜಿದಾರರನ್ನು ಸರ್ಕಾರ ಪರಿಗಣಿಸುವುದಿಲ್ಲ ಕನಿಷ್ಠ ಐದು ವರ್ಷಗಳಿಂದ ಕೃಷಿಯನ್ನೇ ಅವಲಂಬಿಸಿದ್ದು ಅಂತಹ ರೈತರನ್ನು ಮಾತ್ರ ಅರಣ್ಯೀಕರಣದ ಪ್ರದೇಶದಲ್ಲಿ ಕೂಡ ಪರಿಗಣಿಸಲಾಗುವುದು ಎಂದು ತಿಳಿಸಿದರು ಭೂಮಿ ಮುಂಜೂರಾತಿಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂಬ ಆರೋಪ ಸರಿಯಲ್ಲ ಒಬ್ಬ ವ್ಯಕ್ತಿಗೆ ನಾಲ್ಕು ಎಕರೆ 38 ಕುಂಟೆ, ಮುಂಜೂರು ಮಾಡುವ ಅಧಿಕಾರವಿದೆ ವಿಭಾಗ ಮಾಡಿಕೊಳ್ಳದೆ ನೊಂದಣಿ ಕೂಡ ಮಾಡಿಕೊಳ್ಳದೆ ಅರ್ಜಿ ಹಾಕಿರುವ ಅರ್ಜಿಗಳನ್ನು ಪರಿಗಣಿಸಲಾಗದು ಆ ವಂಶವೃಕ್ಷದ ಆಧಾರದ ಮೇಲೆ ಅಗತ್ಯ ಕನುಗುಣವಾಗಿ ಭೂಮಿ ಮುಂಜೂರ್ ಮಾಡಿದ್ದೇವೆ ಮುಂದಿನ ದಿನಗಳಲ್ಲಿಯೂ ನೀರಿನ ಕರಾಬು ಗೋಮಾಳ ಅರಣ್ಯ ಕರಾಬೋ ಜಾಗಗಳಲ್ಲಿ ಯಾವುದೇ ಕಾರಣಕ್ಕೂ ಭೂಮಿ ಮಂಜೂರು ಮಾಡಲಾಗದು ಸೆಕ್ಷನ್ ನಾಲ್ಕರ ಅಡಿಯಲ್ಲಿ 1976ಕ್ಕಿಂತ ಮುಂಚೆ ಉಳಿಮೆ ಮಾಡಿಕೊಂಡಿದ್ದ ರೈತರನ್ನು ಸರ್ಕಾರವೇ ಪರಿಗಣಿಸಿ ಅಂತಹ ಭೂಮಿಯನ್ನು ರೈತರಿಗೆ ಅನುಕೂಲ ಮಾಡಿಕೊಡಲಿದೆ ಸ್ಥಳೀಯವಾಗಿ 2013 ಮತ್ತು 17ರ ಅವಧಿಯಲ್ಲಿ ನೀಡಲಾಗಿದ್ದ 770 ಮಂಜೂರಾತಿ ಚೀಟಿಗಳನ್ನು ಅರ್ಜಿಗಳು ಕ್ರಮಬದ್ಧ ಇಲ್ಲ ಎಂದು ಸ್ವತಹ ಎಸಿ ಅವರೇ ರದ್ದುಪಡಿಸಿದ್ದಾರೆ ಎಂದರು
ತಹಶೀಲ್ದಾರ್ ತೇಜಸ್ವಿನಿ ಮಾತನಾಡುತ್ತಾ ತಾಲೂಕಿನ ಶೆಟ್ಟಿಕೆರೆ ಕಸಬಾ ಉಳಿಯಾರ್ ಭಾಗದ ರೈತರಿಗೆ 80 ಚೀಟಿಯನ್ನು ನೀಡಲಾಗುತ್ತಿದೆ ಸಭೆ ಮಾಡುವ ಮೂಲಕ ನಿಜವಾದ ರೈತರನ್ನು ಗುರುತಿಸಿ ಭೂಮಿ ಮಂಜೂರು ಮಾಡಲಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಪುರಸಭಾ ಅಧ್ಯಕ್ಷ ಪುಷ್ಪ ಉಪಾಧ್ಯಕ್ಷೆ ಲಕ್ಷ್ಮಿ ಬಗುರ್ ಕಮಿಟಿಯ ಸದಸ್ಯರಾದ ಶಂಕರಲಿಂಗಯ್ಯ ನಿರಂಜನ್ ಲತಾ ಕೇಶವಮೂರ್ತಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಡಿಎಫ್‍ಓ ಅನುಪಮಾ ಎಸಿ ಎಫ್ ಸುಬ್ಬರಾವ್ ಆರ್ ಎಫ್ ಸುನಿಲ್ ಕುಮಾರ್ ಸಿಪಿಐ ನಿರ್ಮಲ ಹಳೆ ಮನೆ ಶಿವನಂಜಪ್ಪ ಪುರಸಭಾ ಸದಸ್ಯರುಗಳು ಉಪಸ್ಥಿತರಿದ್ದರು

(Visited 12 times, 1 visits today)