ತುಮಕೂರು
ಆಟೋ ಒಇಎಂ ಮತ್ತು ಬಿಡಿ ಭಾಗಗಳ ಉತ್ಪಾದನಾ ಕಾರ್ಮಿಕರಿಗೆ ಮಾಸಿಕ ಕನಿಷ್ಟ ವೇತನ 26,000 ನಿಗಧಿಮಾಡಬೇಕು, ಕಾರ್ಮಿಕರನ್ನು ಬಲಿಪಶುಮಾಡುವುದು ಬಲವಂತದ ರಿಟ್ರೇಂಚ್ಮೇಂಟ್, ಮಾನವ ಶಕ್ತಿಕಡಿತ ನಿಲ್ಲಿಸಬೇಕು, ಉದ್ಯೋಗಗಳ ರಕ್ಷಣೆ ಮಾಡಬೆಕು, ಈ ಘಟಕಗಳಲ್ಲಿ ದುಡಿಯುತ್ತಿರುವ ಗುತ್ತಿಗೆ ಮತ್ತು ನಿಗಧಿತ ಅವಧಿ, ಟ್ರೈನಿ ಮತ್ತು ಖಾಯಂಯೇತರ ಕಾರ್ಮಿಕರ ಸೇವೆಗಳನ್ನು ಖಾಯಂ ಮಾಡಬೇಕು, ಹೋರಾಟಗಳಿಂದ ಗಳಿಸಿರುವ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಿ, ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು,ದೇಶಿಯ ಉತ್ಪಾದನೆ ಮೂಲಕ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಬೇಕು, ಆಟೋಮೋಬೇಲ್‍ಗಳು ಮತ್ತು ಆಟೋ ಬಿಡಿಭಾಗಗಳನ್ನು ಆಮದನ್ನು ನಿಯಂತ್ರಿಸಬೇಕು, ಸಾರ್ವಜನಿಕ ಸಾರಿಗೆ ಸೇವೆಯನ್ನು ಉತ್ತೇಜಿಸಿ ಬೆಂಬಲಿಸುವ ಯೊಜನೆಗಳನ್ನು ರೂಪಿಸಿಬೇಕು, ಈ ಕೈಗಾರಿಕೆಗಳಲ್ಲಿ ವ್ಯಾಪ್ತಿಯನ್ನು ವಿಸ್ತರಿಸಲು ಸರ್ಕಾರ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿ ರಾಷ್ಟ್ರೀಯ ಬೇಡಿಕೆ ದಿನದ ಭಾಗವಾಗಿ ತುಮಕೂರಿನ ಅಂತರಸನ ಹಳ್ಳಿ ಕೈಗಾರಿಕಾ ಪ್ರದೇಶದ ಪ್ಯಾಕ್ಟರಿಗಳ ಮುಂದೆ ದಿ; 11-11-2022 ರಂದು ಪ್ರತಿಭಟನೆ ನಡೆಸಲಾಯಿತು
ಕರ್ನ – ಲಿಬರ್ಸ್ ಕೈಗಾರಿಕೆ ಮುಂದೆ ನಡೆದ ಪ್ರತಿಭಟನೆಯಲ್ಲಿ ಕರ್ನ ಲಿಬರ್ಸ್ ಕಾರ್ಮಿಕರ ಸಂಘದ ಪ್ರಧಾನ ಕಾರ್ಯಧರ್ಶಿ ದಿಲಿಪ್ ಮಾತನಾಡಿ ದೇಶದಲ್ಲಿ ಅಟೋಮೋಬೈಲ್ ಹಾಗು ಬಿಡಿ ಭಾಗಗಳ ಕೈಗಾರಿಕೆಯಲ್ಲಿ ಅತಿ ಹೆಚ್ಚು ಕಾರ್ಮಿಕರು ದುಡಿಯುತ್ತಿದಾರೆ ಈ ಕಾರ್ಮಿಕರ ಬಗ್ಗೆ ಸರ್ಕಾರ ಗಮನ ಹರಿಸಲು ಆಗ್ರಹಿಸಿದರು , ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಸೈಯದ್ ಮುಜೀಬ್ , ಸಂಘದ ಉಪಾಧ್ಯಕ್ಷರಾ ಹುಚ್ಚೆಗೌಡ, ಪುಟ್ಟೆಗೌಡ , ಸಿಐಟಿಯು ಜಿಲ್ಲಾ ಮುಖಂಡ ಶಿವಕುಮಾರ್ ಸ್ವಾಮಿ ಮಾತನಾಡಿರು, ಖಚಾಂಜಿ ಉಮೇಶ್ ವಂದಿಸಿರು
ಎಂ. ಹೆಚ್. ಐ. ಎನ್ ಕಾರ್ಖಾನೆಯ ಎದುರು ನಡೆದ ಪ್ರತಿಭಟನೆಯಲ್ಲಿ ಎಂ. ಹೆಚ್,ಐ,ಎನ್ ಕಾರ್ಮಿಕರ ಸಂಘದ ಸಹ ಕಾರ್ಯದರ್ಶಿ ಶಶಿಕಿರಣ್ ,ಉಮೇಶ, ಚಂದ್ರುಶೇಖರ್ ಮಾತನಾಡಿದರು.
ಪಿಟ್ ವೇಲ್ ಕಾರ್ಮಿಕರ ಸಂಘದ ಸದಸ್ಯರು ಕೈಗಾರಿಕೆಯ ಮುಂದೆ ಪ್ರತಿಭಟನೆ ನಡೆಸಿದರು ಸಂಘದ ಉಪಾಧ್ಯಕ್ಷರಾದ ರಾಮಕೃಷ್ಣಪ್ಪ , ಸಿಐಟಿಯು ಜಿಲ್ಲಾ ಕಾರ್ಯಧರ್ಶಿ ಎನ್. ಕೆ ಸುಬ್ರಮಣ್ಯ , ಖಜಾಂಚಿ ಸಂಪತ್ತು, ಕಾರ್ಯಕಾರಿ ಸಮಿತಿ ಸದಸ್ಯ ಶಶಿಧರ್, ಮತ್ತು ಹರೀಶ್ ಇದ್ದರು.