ಚಿಕ್ಕನಾಯಕನಹಳ್ಳಿ:
ವಕೀಲರು ನಾವು ಹೇಳುವುದೆಲ್ಲಾ ಸತ್ಯಾ ಎಂಬ ಭ್ರಮೆಯಲ್ಲಿರಬಾರದು ತಾಳ್ಮೆಯ ಜೊತೆಗೆ ಸಹನೆಯಿಂದ ಗುಣಾತ್ಮಕವಾಗಿ ವಿಚಾರಗಳನ್ನು ನ್ಯಾಯಾಧೀಶರೆದುರು ಅರ್ಥೈಸಿದರೆ ಮಾತ್ರ ಉತ್ತಮ ತೀರ್ಪು ಬರಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಉಪಾಧ್ಯಕ್ಷ ಬಿ.ವಿ.ಶ್ರೀನಿವಾಸ್ ಹೇಳಿದರು.
ಪಟ್ಟಣದಲ್ಲಿರುವ ಪ್ರಧಾನ ಸಿವಿಲ್ ನ್ಯಾಯಾಲಯದ ಸಭಾಂಗಣದಲ್ಲಿ ರಾಜ್ಯ ವಕೀಲರ ಪರಿಷತ್, ತಾಲ್ಲೂಕು ಕಾನೂನು ಸೇವಾ ಸಮಿತಿ ತಾಲ್ಲೂಕು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ವಕೀಲರಿಗಾಗಿ ಕಾನೂನು ಕಾರ್ಯಗಾರ ಉದ್ಘಾಟಿಸಿ ಮಾತನಾಡುತ್ತಾ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ರಾಜ್ಯ ಸಮಿತಿಯ ಅಧ್ಯಕ್ಷರು ಕಾರ್ಯನಿಮಿತ್ತ ಆಗಿ ಬಾಗಿ ಆಗಿರುವುದರಿಂದ ಇಲ್ಲಿಗೆ ಬರಲು ಸಾಧ್ಯವಾಗಿಲ್ಲ ಇಂತಹ ಕಾರ್ಯಗಾರಗಳಿಗೆ ಹಣದ ಕೊರತೆ ಇಲ್ಲ ಇಂತಹ ಕಾರ್ಯಗಾರಗಳು ಹೆಚ್ಚು ಹೆಚ್ಚು ಮಾಡುವಂತೆ ಹೇಳಿದ ಅವರು ವಕೀಲರಲ್ಲಿ ಸಹನೆ ಅತ್ಯವಶ್ಯಕವಾದದ್ದು, ನಮ್ಮಲ್ಲಿ ನ್ಯಾಯ ಹರಸಿ ಬರುವ ಕಕ್ಷಿದಾರರು ಎಲ್ಲರೂ ಬುದ್ದಿವಂತರೇನಲ್ಲ ಯಾರಿಂದಲೋ ಅಲ್ಪಸ್ವಲ್ಪ ಮಟ್ಟಿಗೆ ತಿಳಿದು ಬಂದು ನಮಗೆ ಮಾತನಾಡಲು ಬಿಡದಂತೆ ಅವರೇ ತಿಳಿದವಂತೆ ಮಾತನಾಡುತ್ತಾರೆ ಇದರಿಂದ ವಕೀಲರು ವಿಚಲಿತರಾಗದೇ ಸಹನೆಯಿಂದ ಕೇಳಬೇಕಾಗುತ್ತದೆ ಆ ನಂತರ ಅವರಿಗೆ ತಿಳುವಳೀಕೆ ಹೇಳಬೇಕು ವಕೀಲರು ನ್ಯಾಯಾದೀಶರೆದುರು ನಾವು ಹೇಳುವುದೆಲ್ಲಾ ಸತ್ಯ ಎಂಬ ಭ್ರಮೆಯಲ್ಲಿ ಇರದಂತೆ ಗುಣಾತ್ಮಕವಾಗಿ ನ್ಯಾಯಾಧೀಶರೆದುರು ವಿಚಾರದ ಬಗ್ಗೆ ಅರ್ಥೈಸುವ ಶೈಲಿಯಿಂದಲೇ ನ್ಯಾಯಧೀಶರಿಗೆ ಮನವರಿಕೆ ಆಗುವಂತೆ ಮಾಡಿದರೆ ಮಾತ್ರ ತೀರ್ಪು ಕೂಡ ಸಮರ್ಪಕವಾಗಿ ಬರಲು ಸಾಧ್ಯವಾಗುತ್ತದೆ ಕಿರಿಯ ವಕೀಲರಲ್ಲಿ ನನ್ನ ಮನವಿ ಏನೆಂದರೆ ನಮ್ಮಲ್ಲಿಗೆ ನ್ಯಾಯ ಕೋರಿ ಬರುವವರಿಗೆ ಕನಿಷ್ಠ 5 ವರ್ಷವಾದರೂ ಸೇವೆ ಎಂದು ಕೆಲಸ ಮಾಡಿದರೆ ಯಶಸ್ಸು ನಿಮ್ಮದಾಗುತ್ತದೆ ಹಣದತ್ತ ಯಾರೂ ಮುಖ ಮಾಡಬೇಡಿ ನಿಮ್ಮ ಯಶಸ್ಸು, ಪ್ರಚಾರದಲ್ಲಿ ನಿಮ್ಮ ಸೇವೆಯಿಂದ ಕೀರ್ತಿ ಹಣ ಎಲ್ಲವೂ ಬರುತ್ತದೆ ದೇಶದ ಕಾನೂನು ಕಟ್ಟಕಡೆಯ ವ್ಯಕ್ತಿಗೆ ಕೂಡ ದೊರೆಯಬೇಕು ಇದರಿಂದ ಪ್ರಜಾಪ್ರಭುತ್ವದಲ್ಲಿ ಜನರು ಅನ್ಯಾಯಕ್ಕೋಳಗಾಗದಂತೆ ನಾವು ನೀವು ನೋಡಿಕೊಳ್ಳಬೇಕು ಕೇರಳದಂತಹ ವಿದ್ಯಾವಂತರ ನಾಡಲ್ಲೇ ಶೇಕಡ 28 ರಷ್ಟು ಕಾನೂನು ಅರಿವಿದ್ದರೆ ಜಾರ್ಖಂಡ ಅಂತಹ ರಾಜ್ಯದಲ್ಲಿ ಶೇಕಡ 2 ರಷ್ಟಿರುವುದು ವಿಷಾದ ಎಂಧರು.
ಹಿರಿಯ ಸಿವಿಲ್ ನ್ಯಾಯಧೀಶ ಕಿರಣ್‍ಕುಮಾರ್ ಡಿ.ವಡೀಗೇರಿ ಮಾತನಾಡಿ ಇವತ್ತಿನ ಕಾನೂನು ತಿದ್ದುಪಡಿಗಳ ಬಗ್ಗೆ ಸರ್ವೋಚ್ಛ ಮತ್ತು ಉಚ್ಛ ನ್ಯಾಯಾಲಯಗಳ ತೀರ್ಪುಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕು ಹಿರಿಯ ವಕೀಲರುಗಳ ವಿಚಾರಗಳ ಬಗ್ಗೆ ಮಂಡಿಸುವಾಗ ಕಿರಿಯ ವಕೀಲರು ನೋಟ್ ಮಾಡಿಕೊಳ್ಳುವುದು ವಾದ ಮಂಡಿಸುವ ಬಗ್ಗೆ ಹೆಚ್ಚು ಹೆಚ್ಚು ತಿಳಿಯುವುದು ಅವರಿಗೆ ಗೌರವ ಕೊಡುವುದು ಬಹಳಷ್ಟು ಮುಖ್ಯ ನಾವುಗಳ್ಯಾರೂ ಉದ್ದೇಶಪೂರ್ವಕವಾಗಿ ತೊಂರೆ ಕೊಡುವುದಿಲ್ಲ ವಕೀಲರುಗಳು ತಾಳ್ಮೆಯಿಂದ ಇದ್ದು, ನಮಗೂ ತಾಳ್ಮೆ ಇರುವಂತೆ ನಡೆದುಕೊಂಡು ವಾದ ಮಂಡಿಸುವಾಗ ಕ್ಲೈಂಟ್‍ಗಳಿಗೆ ಅನ್ಯಾಯವಾಗದಂತೆ ವಿಚಾರ ಮಂಡಿಸಿ ಒಂದು ವೇಳೆ ಸೋತರೂ ಕೂಡ ಸೋತವನು ಕೂಡ ತೀರ್ಪಿನಲ್ಲಿ ನನ್ನ ತಪ್ಪು ಮನವರಿಕೆಯಾಗುವಂತಿದೆ ಎಂಬ ರೀತಿಯಲ್ಲಿರುವಂತೆ ಅರ್ಥೈಸಿಕೊಳ್ಳಿ ಇದರಿಂದ ತೀರ್ಪು ಕೂಡ ಚೆನ್ನಾಗಿ ಬರುತ್ತದೆ ಇಂದಿನ ದಿನಗಳಲ್ಲಿನ ವರದಿಯನ್ನು ಪ್ರತಿನಿತ್ಯ ಸುಪ್ರ್ರಿಂ ಕೋರ್ಟ್‍ಗೆ ಮಾಹಿತಿ ನೀಡಬೇಕಿರುತ್ತದೆ. ನಾವುಗಳು ತುಂಬಾ ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತೇವೆ. ನಮ್ಮ ಜವಬ್ದಾರಿಗೆ ವಕೀಲರು ಸಹಕರಿಸಿ ಕೈಜೋಡಿಸಿದರೆ ಮಾತ್ರ ಕಾನೂನು ಪರಿಹಾರದ ಬಂಡಿ ಸಾಗಲು ಸಾಧ್ಯವಾಗುತ್ತದೆ ಇಲ್ಲಿನ ಬಂದಿರುವ ಸಂಪನ್ಮೂಲನ ವ್ಯಕ್ತಿಗಳಿಂದ ತಿಳಿದ ಭಂಡಾರವನ್ನು ನಮಗೂ ಹಂಚಿ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಮ್. ಮಹಲಿಂಗಪ್ಪ ಮಾತನಾಡಿ ಚಾಮರಾಜನಗರದಿಂದ ಬೀದರ್ ವರೆಗೂ ವಿಸ್ತಾರಗೊಂಡಿರುವ ರಾಜ್ಯ ವಕೀಲರ ಪರಿಷತ್‍ನ ಹುದ್ದೆಗಳ ಆಯಾ ಜಿಲ್ಲೆಗಳಿಗೆ ಹಂಚಿಕೆಯಾದರೆ ಪರಿಷತನ ಇನ್ನೂ ಸಕ್ರಿಯವಾಗಲು ಸಾಧ್ಯವಾಗುತ್ತದೆ ಎಂದರು.ಸಮಾರಂಭದಲ್ಲಿ ಅಪರ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಎನ್.ಕೃಷ್ಣಮೂರ್ತಿ, ಸಂಪನ್ಮೂಲವ್ಯಕ್ತಿಗಳಾದ ಗೌರಿಶಂಕರ್,ಹೆಚ್.ಎಸ್. ಸುರೇಶ್, ಕಾರ್ಯದರ್ಶಿ ಎಸ್.ಹೆಚ್ ಚಂದ್ರಶೇಖರಯ್ಯ, ಉಪಸ್ಥಿತರಿದ್ದರು. ಸ್ವಾಗತ ಎಸ್.ಹೆಚ್ ಚಂದ್ರಶೇಖರ್, ನಿರೂಪಣೆ ಹೆಚ್.ಟಿ ಹನುಮಂತಪ್ಪ ನೆರವೇರಿಸಿದರು.