ತುಮಕೂರು


ನಗರದ ಜೆಡಿಎಸ್ ಪಕ್ಷದಲ್ಲಿ ಆಂತರಿಕವಾಗಿ ಭಿನ್ನಮತ ಸ್ಪೋಟಗೊಂಡಿದ್ದು ಟಿಕೆಟ್ ಆಕಾಂಕ್ಷೆಗಳ ಸಂಖ್ಯೆ ಹೆಚ್ಚಾಗುತ್ತಲಿದೆ. ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಎನ್.ಗೋವಿಂದರಾಜು ಅಧಿಕೃತ ಅಭ್ಯರ್ಥಿ ನಾನೇ ಎಂದು ಸ್ವಯಂ ಘೋಷಿಸಿಕೊಳ್ಳುತ್ತಾ ಇತ್ತೀಚಿನ ದಿನ ಮಾನಗಳಲ್ಲಿ ನಗರದಲ್ಲಿ ಕಾಣ ಸಿಗುತಿದ್ದಾರೆ. ಇನ್ನೂ ಜಿಲ್ಲಾ ಕಾರ್ಯಧ್ಯಕ್ಷ ನಾಗರಾಜು ಬೆಳ್ಳಿ ಲೋಕೇಶ್, ನರಸೆಗೌಡ ಹಿಂದಿನಿಂದಲೂ ಟಿಕೆಟ್ ಆಕಾಂಕ್ಷೆಗಳಾಗಿದ್ದಾರೆ.
ಇತ್ತೀಚಿಗೆ ನಗರದಲ್ಲಿ ನಾನು ಅಭ್ಯರ್ಥಿ ಎಂದು ಹೇಳಿಕೆ ನೀಡುತ್ತಿರುವ ಬೊಮ್ಮನಹಳ್ಳಿ ಬಾಬು ಅಲೀಯಾಸ್ ಅಟ್ಟಿಕಾ ಬಾಬು ನಾನೇ ಮುಂದಿನ ಅಭ್ಯರ್ಥಿ ಎನ್ನುವುದರಲ್ಲಿ ಸಂಶಯವಿಲ್ಲ. ಎಲ್ಲಾರೂ ನನಗೆ ಸಹಕಾರ ನೀಡುತ್ತಾರೆ ಎಂದು ಬಹಿರಂಗವಾಗಿಯೆ ಹೇಳಿಕೆ ನೀಡುತ್ತಿದ್ದಾರೆ. ಹಣವಂತರೇಲ್ಲಾರೂ ನಾನೇ ಅಭ್ಯರ್ಥಿ ಎಂದು ಸ್ವಯಂ ಘೋಷಿಸಿಕೊಳ್ಳುತ್ತಿದ್ದು, ಸೇವಾ ಮನೋಭಾವ ಹೊಂದಿರುವ ನಿಷ್ಠಾವಂತ ಪಕ್ಷದ ಕಟ್ಟಾಳುವಂತೆ ದುಡಿದ ಜೆಡಿಎಸ್‍ನ ಮುಂಚೂಣಿಯ ಮುಖಂಡರು ಧ್ವನಿ ಎತ್ತದೆ ಮೌನಕ್ಕೆ ಶರಣಾಗಿದ್ದಾರೆ.
ಒಟ್ಟಾರೆ ಜೆಡಿಎಸ್ ಪಕ್ಷದಲ್ಲಿ ಹಣವಂತರಿಗೆ ಮಣೆ ಎಂಬ ಡೋಲಾಯಮಾನ ಸ್ಥಿತಿಯಲ್ಲಿ ಬಂದುನಿಂತಿದೆ.
ತುಮಕೂರು ನಗರದ ಅಭಿವೃದ್ಧಿಯ ಹೊಂಗನಸು ಟಿಕೆಟ್ ಆಕಾಂಕ್ಷಿಗಳಲ್ಲಿ ಕಂಡುಬರುತ್ತಿಲ್ಲ. ಸ್ವ-ಅಭಿವೃದ್ಧಿ ಅಧಿಕಾರದ ಲಾಲಸೆ ಹೆಚ್ಚು ಕಂಡುಬರುತ್ತಿದೆ. ಅಟ್ಟಿಕಾ ಬಾಬುರವರಿಗೆ ತುಮಕೂರು ನಗರದ ರಸ್ತೆಗಳೆ ಸರಿಯಾಗಿ ತಿಳಿದಿಲ್ಲ, ನಗರದ ಚಿತ್ರಣ ಗೊತ್ತಿಲ್ಲಾ.. ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್‍ರವರ ಕೃಪಾಶೀರ್ವಾದ ದಿಂದ ನಗರದಿಂದ ಕಣಕ್ಕಿಳಿಯುವ ಇರಾದೆಯಲ್ಲಿದ್ದಾರೆ. ಚಿನ್ನದ ವ್ಯಾಪಾರ ನಡೆಸಿದಷ್ಟು ಸುಲಭವಲ್ಲ ತುಮಕೂರಿನ ರಾಜಕಾರಣ ಎಂಬುದು ಅವರ ಅರಿವಿಗೆ ಬರಬೇಕಿದೆ.
ಎರಡು ಬಾರಿ ಸ್ಪರ್ಧೆಗಿಳಿದು ಸೋಲಿನ ಕಹಿಯುಂಡ ಎನ್.ಗೋವಿಂದರಾಜು ಅಪ್ಪಟ ವ್ಯಾಪಾರಿ ಮನೋಭಾವದವರು ಎನ್ನುವುದರಲ್ಲಿ ಸಂಶಯವಿಲ್ಲ. ಕೇವಲ ಚುನಾವಣೆಯ ಮುನ್ನೋಟವನ್ನು ಗಮನದಲ್ಲಿಟ್ಟುಕೊಂಡು ಗೆಳೆಯರ ಬಳಗದ ಹೆಸರಿನಲ್ಲಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುತ್ತಾ ನಗರದ ಮತದಾರರನ್ನ ತನ್ನೆಡೆಸೆಳೆಯುವ ಉಮ್ಮಸ್ಸಿನಲ್ಲಿದ್ದರು. ಆದರೆ ಮೊದಲ ಬಾರಿ ಸ್ಫರ್ಧೆಯಲ್ಲಿ ಹೀನಾಯವಾಗಿ ಸೋಲುವ ಪರಿಸ್ಥಿತಿ ಬಂದೊದಗಿತ್ತು. ಎರಡನೆ ಬಾರಿ ನೀರಿನ ಜೊತೆಗೆ ನಗರದ ಜನರ ಮಧ್ಯೆ ಕಾಣಿಸಿಕೊಳ್ಳುತ್ತಾ ವಿವಿಧ ಅಮಿಷಗಳನ್ನ ಚುನಾವಣೆಗೂ ಮುನ್ನವೆ ಒಡ್ಡಿದರು.
ಇದರ ಜೊತೆಗೆ ಹಣದ ಹಮ್ಮು ಚುನಾವಣೆಯ ಸಮೀಪ ಅತೀ ಹೆಚ್ಚಾಗಿ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತೆ ಮತದಾರರ ತಿರಸ್ಕಾರಕ್ಕೆ ಒಳಗಾಗಿ ಸೋಲು ಕಂಡರು. ಚುನಾವಣೆಯ ಸೋಲಿನ ನಂತರ ತುಮಕೂರು ನಗರದ ಮತದಾರರಿಂದ ದೂರ ಉಳಿದು ಹಣ ಪಡೆದವರಿಗೆ ಹಿಡೀ ಶಾಪ ಹಾಕುತಿದ್ದ ಎನ್. ಗೋವಿಂದರಾಜು ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಪರಮೋಚ್ಛ ನಾಯಕ ವರಿಷ್ಠ ಎಚ್.ಡಿ. ದೇವೇಗೌಡರು ತುಮಕೂರು ಜಿಲ್ಲೆಯಿಂದ ಕಣಕ್ಕಿಳಿದ ಸಂದರ್ಭದಲ್ಲಿ ಅವರ ಬಗೆಗಿನ ಸ್ವಾಮಿನಿಷ್ಠೆ ಎಂತಹದ್ದು ಪಕ್ಷದ ಬಗೆಗಿನ ಒಲವು ಎಂತಹದ್ದು ಎನ್ನುವುದು ವ್ಯಕ್ತವಾಗಿತ್ತು.
ಗೋವಿಂದರಾಜು ತನ್ನ ಚುನಾವಣೆಗೆ ಮಾಡಿದÀ ರೀತಿಯಲ್ಲಿ ಚುನಾವಣೆಯನ್ನು ಮಾಡಲಿಲ್ಲಿ ಎಂಬ ಆರೋಪಗಳು ಜೆಡಿಎಸ್ ಪಕ್ಷದ ಮೊಗಸಾಲೆಯಲ್ಲಿ ವ್ಯಪಕವಾಗಿ ಕೇಳಿಬಂದಿತ್ತು. ಸ್ವತಃ ಗೋವಿಂದರಾಜುರವರೆ ನಗರದ ಮತದಾರರ ಬಗ್ಗೆ ಬೇಸರದ ಮಾತುಗಳನ್ನ ವ್ಯಕ್ತಪಡಿಸುತಿದ್ದರು ಎನ್ನುವ ಸುದ್ದಿಯಿತ್ತು. ಎಲ್ಲದರಿಂದ ಅಂತರ ಕಾಯ್ದಕೊಂಡಿದ್ದ ಗೋವಿಂದರಾಜು ಮತ್ತೇ ಚುನಾವಣೆಯನ್ನು ಮುಂದಿಟ್ಟುಕೊಂಡು ಪಕ್ಷ, ವರಿಷ್ಠರು, ಮತದಾರರು ಎನ್ನುವ ಮಾತುಗಳನ್ನಾಡುತ್ತಿರುವುದು ನಗರದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಈಗಲಾದರೂ ಜೆಡಿಎಸ್ ಪಕ್ಷದ ವರಿಷ್ಠರು ವ್ಯಾಪಾರಿ ಮನೋಭಾವದ ಹಣವಂತರನ್ನು
ದೂರವಿಟ್ಟು ಪಕ್ಷಕ್ಕೆ ನಿಷ್ಠೆಯಾಗಿರುವ ನಗರದ ಜನರ ಸೇವೆಗೆ ಸಿದ್ಧವಿರುವ ಪಕ್ಷದ ಕಟ್ಟಾಳುಗಳನ್ನು ಕಣಕ್ಕಿಳಿಸುವುದು ಸೂಕ್ತ ಎನ್ನುವುದು ಜೆಡಿಎಸ್ ಕಾರ್ಯಕರ್ತರ ಅಭಿಪ್ರಾಯ.

(Visited 8 times, 1 visits today)