ತುಮಕೂರು
ವಿದ್ಯುತ್ ಮಾರ್ಗಗಳಲ್ಲಿ ಕೆಲಸ ಮಾಡುವಾಗ ಲೈನ್‍ಮನ್‍ಗಳು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಬೆಸ್ಕಾಂ ಚಿತ್ರದುರ್ಗ ವಲಯದ ಮುಖ್ಯ ಇಂಜಿಯರ್ ಕೆ.ವಿ. ಗೋವಿಂದಪ್ಪ ಸಲಹೆ ನೀಡಿದರು.
ನಗರದ ಹೊರಪೇಟೆಯಲ್ಲಿರುವ ಕೆ.ಇ.ಬಿ ಇಂಜಿನಿಯರ್ಸ್ ಅಸೋಸಿಯೇಷನ್ ಬಿಲ್ಡಿಂಗ್‍ನಲ್ಲಿ ಬೆಸ್ಕಾಂ ಹಾಗೂ ಬೆವಿಕಂ ತುಮಕೂರು ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಬೆಸ್ಕಾಂ ನೌಕರರ ಸುರಕ್ಷತಾ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ತುಮಕೂರು ವಿಭಾಗ ಮಟ್ಟದ ಎಲ್ಲ ಪವರ್ ಮನ್‍ಗಳಿಗೆ ವಿದ್ಯುತ್ ಮಾರ್ಗದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಸುರಕ್ಷತಾ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದರು.
ಕೆಲಸಕ್ಕೆ ಹೋಗುವ ಮುನ್ನ ವಿದ್ಯುತ್ ಸರಬರಾಜಿನ ಮಾರ್ಗಗಳ ಬಗ್ಗೆ ಹಾಗೂ ಉಂಟಾಗಿರುವ ದೋಷವನ್ನು ಸರಿಪಡಿಸಲು ಅಧಿಕಾರಿಗಳಿಂದ ಸೂಕ್ತ ಮಾರ್ಗದರ್ಶನ ಪಡೆದು ಎಲ್ಲಾ ಸುರಕ್ಷತಾ ಸಾಮಗ್ರಿಗಳನ್ನು ತಪ್ಪದೇ ಕೊಂಡೊಯ್ಯಬೇಕು. ಕೆಲಸ ಪ್ರಾರಂಭಕ್ಕೆ ಮುನ್ನ ಕೆಲಸ ಮಾಡುವ ಸ್ಥಳಕ್ಕೆ ಯಾವ ಯಾವ ಮಾರ್ಗದಿಂದ ವಿದ್ಯುತ್ ಸರಬರಾಜಾಗುತ್ತದೆ ಎಂಬುದನ್ನು ಗಮನಿಸಿ, ಸಂಬಂಧಪಟ್ಟ ಮಾರ್ಗಗಳಲ್ಲಿ ಮಾರ್ಗಮುಕ್ತತೆ ತೆಗೆದುಕೊಂಡಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದರು.
ಲೈನ್ ಕ್ಲಿಯರ್ ಪಡೆಯುವಾಗ, ಆರ್.ಎಂ.ಯು, ಸ್ಟೇಷನ್ ಬ್ರೇಕರನ್ನು ಕೆಳಗಿಳಿಸಿ ಮತ್ತು ಹೊರಗಡೆ ತೆಗೆದಿರುವುದನ್ನು ಹಾಗೂ ಜಿಓಎಸ್ ಓಪನ್ ಮಾಡಿರುವುದನ್ನು ಖುದ್ದಾಗಿ ಖಚಿತಪಡಿಸಿಕೊಳ್ಳಬೇಕು. ಜಿಓಎಸ್ ಓಪನ್ ಮಾಡುವಾಗ ಹ್ಯಾಂಡ್ ಗ್ಲೌಸ್ ಮತ್ತ ಕಾಲಿಗೆ ಚಪ್ಪಲಿ, ಶೂ ತಪ್ಪದೇ ಧರಿಸಬೇಕು ಮತ್ತು 3 ಬ್ಲೇಡ್‍ಗಳು ಸರಿಯಾಗಿ ಓಪನ್ ಆಗಿರುವುದರ ಬಗ್ಗೆ ಖುದ್ದಾಗಿ ಖಚಿತಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಇತ್ತೀಚಿ ದಿನಗಳಲ್ಲಿ ಉದಾಸೀನತೆ, ಬೇಜವಾಬ್ದಾರಿಯಿಂದಾಗಿ ವಿದ್ಯುತ್ ಅಪಘಾತವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ರೀತಿಯಾದರೆ ಜತೆಯಲ್ಲಿ ಕೆಲಸಕ್ಕೆ ಹೋಗುವ ಲೈನ್‍ಮನ್‍ಗಳು ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಅಧೀಕ್ಷಕ ಎಂಜಿನಿಯರ್ ಲೋಕೇಶ್ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಂತೆ ಲೈನ್‍ಮನ್‍ಗಳು ಸದಾ ಎಚ್ಚರಿಕೆಯಿಂದಲೇ ಕೆಲಸ ಮಾಡಬೇಕು. ಪ್ರತಿದಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಕಂಬದ ಮೇಲೆ ಕೆಲಸ ಮಾಡುವಾಗ ಸೇಪ್ಟಿಬೆಲ್ಟ್ ಮತ್ತು ಹೆಲ್ಮೆಟ್‍ನ್ನು ಕಡ್ಡಾಯವಾಗಿ ಧರಿಸಬೇಕು. ಕೆಲಸ ಪ್ರಾರಂಭಿಸುವ ಮುನ್ನ ಸಂಬಂಧಪಟ್ಟ ಎ.ಇ., ಜೆ.ಇ. ಅಥವಾ ಮೇಸ್ತ್ರಿರವರ ಸಲಹೆ ಪಡೆದ ನಂತರ ಕೆಲಸ ಪ್ರಾರಂಭಿಸಬೇಕು. ಕಂಬದ ಮೇಲೆ ಕೆಲಸ ಮಾಡುವಾಗ ಮೊಬೈಲ್ ಫೆÇೀನ್ ಬಳಕೆ ಮಾಡಬಾರದು ಎಂದು ಸಲಹೆ ಮಾಡಿದರು.
ಬೆಸ್ಕಾಂ ಸಿಬ್ಬಂದಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸ ಮಾಡಬೇಕು. ಯಾವುದೇ ರೀತಿಯಿಂದಲೂ ಬೆಸ್ಕಾಂಗೆ ಕೆಟ್ಟ ಹೆಸರು ಬಾರದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್‍ಗಳಾದ ಪ್ರಶಾಂತ್ ಕೂಡ್ಲಿಗಿ, ಅನಂತರಾಮಯ್ಯ, ಉಮೇಶ್ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳ ಬೆಸ್ಕಾಂ ಅಧಿಕಾರಿಗಳು, ಲೈನ್‍ಮನ್‍ಗಳು ಮತ್ತಿತರರು ಪಾಲ್ಗೊಂಡಿದ್ದರು.